ಮೂಡಲಗಿ: ಉನ್ನತ ಹಂತದ ವ್ಯಾಸಂಗ ಪಡೆಯಲು ಪ್ರಮುಖವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ರಾಷ್ಟ್ರ ವ್ಯಾಪ್ತಿಯಲ್ಲಿ ಆಯ್ಕೆಗಳು ನಡೆಯುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಯ್ಕೆಯಾಗಲು ಪ್ರಮುಖವಾಗಿ ಕಲಿಕಾಸಕ್ತಿ, ಪ್ರೇರಣೆ ಹಾಗೂ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.
ಅವರು ಪಟ್ಟಣದ ಬಿಇಒ ಕಾರ್ಯಾಲಯಲ್ಲಿ ಜರುಗಿದ ಐಐಟಿ ಮತ್ತು ಕೆಸಿಇಟಿಯಲ್ಲಿ ಉತ್ತಮ ದರ್ಜೆಯಲ್ಲಿ ತೇರ್ಗಡೆಹೊಂದಿದ ವಿದ್ಯಾರ್ಥಿಗಳನ್ನು ಸತ್ಕರಿಸಿ ಮಾತನಾಡಿ, ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದು ಉನ್ನತ ವ್ಯಾಸಂಗಕ್ಕೆ ಅತ್ಯುನ್ನತ ಸ್ಥಾನದಲ್ಲಿ ಆಯ್ಕೆಯಾಗಿರುವದು ಸಂತಸದ ವಿಷಯವಾಗಿದೆ. ಮಾಣಿಕ್ಯಗಳು ಎಲ್ಲರಲ್ಲಿ ಸಿಗುವಂತಹದಲ್ಲ ಬಹಳ ಶ್ರಮವಹಿಸಿ ಶೃದ್ಧಾ ಭಕ್ತಿಯಿಂದ ಪೈಪೋಟಿ ನೀಡಿದಾಗ ಮಾತ್ರ ಸಾದ್ಯವಾಗುವದು. ಗ್ರಾಮೀಣ ಹಾಗೂ ಹಿಂದುಳಿದ ಹಿನ್ನೆಲೆಯುಳ್ಳ ವಿದ್ಯಾರ್ಥಿಗಳು ಇಂತಹ ಅಮೋಘ ಸಾಧನೆ ಮಾಡಿರುವದು ನೀಜಕ್ಕೂ ಹೆಮ್ಮೆಯ ಹಾಗೂ ಅಭಿನಂದನಾರ್ಹ ಕಾರ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಐಐಟಿ ಜೆಇಇ ಯಲ್ಲಿ 337 ನೇ ಸ್ಥಾನ ಹಾಗೂ ಕೆ.ಸಿ.ಇ.ಟಿ ಯಲ್ಲಿ ರಾಜ್ಯಕ್ಕೆ 89 ನೇ ಸ್ಥಾನ ಪಡೆದ ಪ್ರಜ್ವಲ ಲಕ್ಷ್ಮಣ ಮಗದುಮ, ಐಐಟಿ ಜೆಇಇ ಯಲ್ಲಿ 7344 ನೇ ಸ್ಥಾನ, ಕೆ.ಸಿ.ಇ.ಟಿ ಯಲ್ಲಿ ರಾಜ್ಯಕ್ಕೆ 1381 ನೇ ಸ್ಥಾನ ಪಡೆದ ಪ್ರಜ್ವಲ ಅಂಬೇಕರ ಅವರನ್ನು ಸತ್ಕರಿ ಗೌರವಿಸಿದರು.
ಈ ಸಂದರ್ಭದಲ್ಲಿ ಕಲ್ಲೋಳ್ಳಿ ಮೊರಾರ್ಜಿ ವಸತಿ ಶಾಲೆಯ ಪ್ರಾಚಾರ್ಯ ರಾಘವೇಂದ್ರ ಗಂಗರಡ್ಡಿ, ಇಸಿಒಗಳಾದ ಕರಿಬಸವರಾಜು.ಟಿ, ಸತೀಶ ಬಿ.ಎಸ್, ಆರ್.ವಿ ಯರಗಟ್ಟಿ, ಮುಖ್ಯೋಪಾಧ್ಯಾಯ ಆರ್.ಎಸ್ ಅಳಗುಂಡಿ, ಶಿಕ್ಷಕ ಸಂಘಟನೆಯ ಎಡ್ವಿನ್ ಪರಸನ್ನವರ, ಎಮ್.ಜಿ ಮಾವಿನಗಿಡದ, ಬಿ.ಎ ಡಾಂಗೆ, ಕೆ.ಎಲ್ ಮೀಶಿ, ಎಸ್.ಎಮ್ ದಬಾಡಿ, ಕೆ.ಡಿ ಜಗ್ಗಿನವರ, ರಮೇಶ ನಾಯಕ್, ಚೇತನ ಕುರಿಹುಲಿ ಹಾಗೂ ಕಛೇರಿ ಸಿಬ್ಬಂದಿ ಮತ್ತು ಪಾಲಕರು ಹಾಜರಿದ್ದರು.