*ಐದು ಕೆಜಿ ಅಕ್ಕಿ ಬದಲು ಹಣ*:
*ಕಾಂಗ್ರೆಸ್ ಮುಖಂಡ ಹೊಳೆಪ್ಪ ಶಿವಾಪೂರ ಸ್ವಾಗತ*
ಮೂಡಲಗಿ :- ರಾಜ್ಯ ಸರಕಾರ ಐದು ಕೆಜಿ ಅಕ್ಕಿ. ಹಾಗೂ ಮತ್ತೈದು ಕೆಜಿ ಅಕ್ಕಿಯ ಬದಲಾಗಿ ಹಣ ನೀಡುವ ಕ್ರಮವನ್ನು ಸ್ವಾಗತಿಸುವುದಾಗಿ ಅರಭಾವಿ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಹೊಳೆಪ್ಪ ಶಿವಾಪುರ ಹೇಳಿದರು.
ಅವರು ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು
ಅಕ್ಕಿ ಮತ್ತು ಹಣ ಎರಡೂ ನೀಡುತ್ತಿರುವದರಿಂದ ಅಕ್ಕಿ ಊಟಕ್ಕೆ ಸರಿ ಹೋದರೆ ಸರಕಾರದಿಂದ ನೀಡುವ ಹಣದಿಂದ ಬೇಳೆಕಾಳು, ತರಕಾರಿ, ಎಣ್ಣೆ, ಅಥವಾ ಅಸ್ಪತ್ರೆ ಹಾಗೂ ಇನ್ನಿತರ ಖರ್ಚು ವೆಚ್ಚಗಳಿಗೆ ಸಹಾಯವಾದಂತಾಗುತ್ತದೆ. ಎಂದು ಹೇಳಿದರು.
ಬೆರಳೆಣಿಕೆಯಷ್ಟು ಮಂದಿ ಹಣಕ್ಕೆ ಬದಲಾಗಿ ಅಕ್ಕಿಯನ್ನೇ ನೀಡಿದರೆ
ಅನುಕೂಲಕರವಾಗುತ್ತಿತ್ತು. ಎಂದರೆ ಶೇ.98 ರಷ್ಟು ಜನ
ಅಕ್ಕಿ ಹಾಗೂ ಹಣ ನೀಡುತ್ತಿರುವುದು ಬಡವರಿಗೆ ಅನುಕೂಲವಾಗಿದೆ
ಎಂಬ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ ಎಂದರು. ಮನೆಯಲ್ಲಿ ನಾಲ್ಕು ಮಂದಿ ಇದ್ದು ತಿಂಗಳಿಗೆ 29 ಕೆ.ಜಿ ಅಕ್ಕಿ ಬರುತ್ತದೆ. ಹೀಗಾಗಿ ಮನೆ ಮಂದಿ ಹೊಟ್ಟೆತುಂಬ ಊಟ ಮಾಡಬಹುದು. ಜತೆಗೆ ಹಣವನ್ನೂ ನೀಡುವುದರಿಂದ ಮನೆಯ ಖರ್ಚು, ಇನ್ನಿತರೆ ಸಹಾಯಕಾರಿಯಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಹೊಳೆಪ್ಪ ಶಿವಪೂರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.