Breaking News
Home / Recent Posts / ವಿದ್ಯಾರ್ಥಿಗಳಲ್ಲಿ ಪಠ್ಯ ವಿಷಯದ ಜೊತೆಗೆ ಪಠ್ಯೇತರ ವಿಷಯಗಳು ಜೀವನ ಕೌಶಲ್ಯಗಳನ್ನು ಬೆಳಸುತ್ತೇವೆ. – ಪ್ರಾಚಾರ್ಯ ಆನಂದ ಕೋಳಿ

ವಿದ್ಯಾರ್ಥಿಗಳಲ್ಲಿ ಪಠ್ಯ ವಿಷಯದ ಜೊತೆಗೆ ಪಠ್ಯೇತರ ವಿಷಯಗಳು ಜೀವನ ಕೌಶಲ್ಯಗಳನ್ನು ಬೆಳಸುತ್ತೇವೆ. – ಪ್ರಾಚಾರ್ಯ ಆನಂದ ಕೋಳಿ

Spread the love

ವಿದ್ಯಾರ್ಥಿಗಳಲ್ಲಿ ಪಠ್ಯ ವಿಷಯದ ಜೊತೆಗೆ ಪಠ್ಯೇತರ ವಿಷಯಗಳು ಜೀವನ ಕೌಶಲ್ಯಗಳನ್ನು ಬೆಳಸುತ್ತೇವೆ. – ಪ್ರಾಚಾರ್ಯ ಆನಂದ ಕೋಳಿ

ಮೂಡಲಗಿ : ವಿದ್ಯಾರ್ಥಿಗಳಲ್ಲಿ ಪಠ್ಯ ವಿಷಯದ ಜೊತೆಗೆ ಪಠ್ಯೇತರ ವಿಷಯಗಳು ಜೀವನ ಕೌಶಲ್ಯಗಳನ್ನು ಬೆಳಸುತ್ತೇವೆ ಕ್ರೀಡಾ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮಥ್ರ್ಯ ಬೆಳಸುವದಲ್ಲದೆ ಮಾನಸಿಕ ಸಂತೃಪ್ತಿ ಜೊತೆಗೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಕ್ರೀಡಾ ಸಾಧಕರಾಗಿ ಹೊರಬರಲು ಸಾಧ್ಯವಿದೆ ಇಂದು ಕ್ರೀಡೆಗಳು ಶಿಕ್ಷಣದ ಒಂದು ಭಾಗವಾಗಿ ವಿದ್ಯಾರ್ಥಿಗಳ ಅಧ್ಯಯನದ ಜೊತೆಗೆ ಅವರ ಪ್ರತಿಭಾವಂತಿಕೆಯನ್ನು ಜಗತ್ತು ಗುರ್ತಿಸುವಂತೆ ಮಾಡುತ್ತದೆ ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡಾ ಚಟುವಟಿಕೆಯಲ್ಲಿ ಸಕ್ರೀಯವಾಗಿ ಬಾಗವಹಸಿ ಸಾಧನೆ ಮಾಡುವಂತೆ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಆನಂದ ಕೋಳಿ ಹೇಳಿದರು.

ಅವರು ಸ್ಥಳೀಯ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲ್ ಬಾಡ್ಮಿಂಟನ್ ಮತ್ತು ಹಾಂಡ್ ಬಾಲ ಕ್ರೀಡೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿ ಅಜೀತ ಮೆನ್ನಿಕೇರಿ ಮಾತನಾಡಿ ಕ್ರೀಡೆಗಳು ಮಕ್ಕಳಲ್ಲಿ ಆತ್ಮ ವಿಶ್ವಾಸ ಬೆಳಸುತ್ತೇವೆ ನಮ್ಮ ಸ್ಥಳೀಯ ವಿದ್ಯಾರ್ಥಿಗಳು ರಾಜ್ಯ & ರಾಷ್ಟ್ರ ಮಟ್ಟದ ಕ್ರೀಡಾ ಚಟುವಟಿಕೆಗಳಲ್ಲಿ ಗುರ್ತಿಸಿಕೊಳ್ಳುತ್ತಿದ್ದಾರೆ ಇಂತಹ ಕ್ರೀಡಾ ಚಟಿವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಭಾಗವಹಿಸಿ ನಮ್ಮ ನಾಡಿನ ಹೆಸರನ್ನು ತರುವದರ ಜೊತೆಗೆ ಕಲಿಸಿದ ಗುರುಗಳಿಗೆ ಮತ್ತು ತಂದೆ ತಾಯಿಗಳಿಗೆ ಗೌರವ ತಂದು ಕೊಡುವಂತೆ ಪ್ರಯತ್ನಿಸಬೇಕೆಂದರು.
ಸ್ಥಳೀಯ ಶ್ರೀವiಹಾಲಕ್ಷ್ಮೀ ಅರ್ಬನ್ ಬ್ಯಾಂಕಿನ ಅಧ್ಯಕ್ಷರಾದ ಮಲ್ಲಪ್ಪಾ ಗಾಣಿಗೇರ ಮಾತನಾಡಿ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಕ್ರೀಡಾ ಸ್ಪೂರ್ತಿಯಿಂದ ಆಡಬೇಕು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ನಿರಂತರ ಶ್ರಮ ಆಟದಲ್ಲಿ ಏಕಾಗ್ರತೆ ಮತ್ತು ವಿವಿದ ಕೌಶಲ್ಯಗಳಲ್ಲಿ ಬಳಸುವ ಜಾಣ್ಮೆ ಹೊಂದಿರಬೇಕೆಂದರು.
ಸಮಾರೋಪ ಸಮಾರಂಭದಲ್ಲಿ ಮೂಡಲಗಿಯ ಪಿ.ಎಸ್.ಐ. ಎಚ್.ವಾಯ್ ಬಾಲದಂಡಿ ಮಾತನಾಡಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದ ಯುವಕ ಮತ್ತು ಯುವತಿಯರಿಗೆ ಉದ್ಯೋಗಗಳಲ್ಲಿ ಬಹಳಷ್ಟು ಅವಕಾಶಗಳಿವೆ. ನೀವೆಲ್ಲಾ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಜಯಶಾಲಿಗಳಾಗಿ ಉತ್ತಮ ಬದುಕು ರೂಪಿಸಿಕೊಳ್ಳವಲ್ಲಿ ಇಂತಹ ಕ್ರೀಡೆಗಳಲ್ಲಿ ಭಾಗವಹಿಸುವುದು ಅವಶ್ಯವಿದೆ ಎಂದರು.
ಹ್ಯಾಂಡಬಾಲ ಬಾಲಕರ ವಿಭಾಗದಲ್ಲಿ ಜೆ. ಎ. ಪಿ ಯು ಕಾಲೇಜು ಅಥಣಿ ಪ್ರಥಮ ಎಸ್,ಎಸ್,ಆರ್. ಸಂಯುಕ್ತ ಪಿಯು ಕಾಲೇಜು ಮೂಡಲಗಿ ದ್ವೀತಿಯ. ಬಾಲಕಿಯರ ವಿಭಾಗದಲ್ಲಿ ಕೆ.ಎಲ್.ಇ. ಪಿ.ಯು. ಕಾಲೇಜು ರಾಯಬಾಗ ಪ್ರಥಮ. ಜೆ. ಎ. ಪಿ ಯು ಕಾಲೇಜು ಅಥಣಿ ದ್ವೀತಿಯ
ಬಾಲ್ ಬಾಡ್ಮಿಂಟನ್ ಬಾಲಕರ ವಿಭಾಗದಲ್ಲಿ ಎಸ್,ಎಸ್,ಆರ್. ಸಂಯುಕ್ತ ಪಿಯು ಕಾಲೇಜು ಮೂಡಲಗಿ ಪ್ರಥಮ ಆರ್.ಡಿ.ಎಸ್. ಪಿಯು ಕಾಲೇಜು ದ್ವೀತಿಯ. ಬಾಲಕಿಯರ ವಿಭಾಗದಲ್ಲಿ ಆರ್.ಡಿ.ಎಸ್. ಪಿಯು ಕಾಲೇಜು ಪ್ರಥಮ ಜೆ. ಎ. ಪಿ ಯು ಕಾಲೇಜು ಅಥಣಿ ದ್ವೀತಿಯ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ಡಿ.ಎಸ್. ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ ವಹಿಸಿಕೊಂಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಶೀಮ್‍ಅಲಿ ಅರ್ಬನ್ ಕೋ-ಆಫ್ ಕ್ರೇಡಿಟ್ ಸೊಸಾಯಿಟಿಯ ಅಧ್ಯಕ್ಷರಾದ ಅನ್ವರ ನದಾಫ ಕಮಲದಿನ್ನಿಯ ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ರಮೇಶ ಪಾಟೀಲ ಎ.ಎಸ್.ಆಯ್. ಎಂ.ವಿ. ಮುರನಾಳ ಶ್ರೀಮಹಾಲಕ್ಷ್ಮಿ ಬ್ಯಾಂಕಿನ ನಿರ್ದೇಶಕರಾದ ಮಹಾದೇವ ಗೋಕಾಕ ಸಿಬ್ಬಂದಿ ಹಣಮಂತ ಮುತಾಲೀಕ ಎಂಪಿಯಡ್ ಕಾಲೇಜಿನ ಉಪನ್ಯಾಸಕ ಭೀಮಶಿ ಬಡಗನ್ನವರ ಹಾಗೂ ಕಾಲೇಜಿನ ಪ್ರಾಚಾರ್ಯರು ಸಿಬ್ಬಂದಿವರ್ಗ ಮತ್ತು ಕ್ರೀಡಾ ನಿರ್ಣಾಯಕರು ಹಾಜರಿದ್ದರು.
ಎಸ್.ಡಿ.ವಾಲಿ ಸ್ವಾಗತಿಸಿದರು, ಎಂ.ಬಿ.ಸಿದ್ನಾಳ, ಎಸ್.ಎನ್.ಕುಂಬಾರ ನಿರೂಪಿಸಿ ವಂದಿಸಿದರು.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ