Breaking News
Home / Recent Posts / ಷಷ್ಠಬ್ಧಿ ಸಂಭ್ರಮ ಯಶಸ್ವಿಗೆ ಎಲ್ಲ ಭಕ್ತ ಸಮೂಹದ ಸಹಾಯ ಸಹಕಾರ ಮುಖ್ಯವಾಗಿದೆ- ಹುಕ್ಕೇರಿ ಶ್ರೀಗಳು

ಷಷ್ಠಬ್ಧಿ ಸಂಭ್ರಮ ಯಶಸ್ವಿಗೆ ಎಲ್ಲ ಭಕ್ತ ಸಮೂಹದ ಸಹಾಯ ಸಹಕಾರ ಮುಖ್ಯವಾಗಿದೆ- ಹುಕ್ಕೇರಿ ಶ್ರೀಗಳು

Spread the love

 

ಶ್ರೀ ನಿಜಗುಣ ದೇವರ ಷಷ್ಠಬ್ಧಿ ಸಂಭ್ರಮ ಪೂರ್ವಭಾವಿ ಸಭೆ

ಷಷ್ಠಬ್ಧಿ ಸಂಭ್ರಮ ಯಶಸ್ವಿಗೆ ಎಲ್ಲ ಭಕ್ತ ಸಮೂಹದ ಸಹಾಯ ಸಹಕಾರ ಮುಖ್ಯವಾಗಿದೆ- ಹುಕ್ಕೇರಿ ಶ್ರೀಗಳು

ಮೂಡಲಗಿ: ತಾಲೂಕಿನ ಹುಣಶ್ಯಾಳ ಪಿಜಿ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಪೀಠಾಧಿಕಾರಿಗಳಾದ ಶ್ರೀ ನಿಜಗುಣ ದೇವರ ಷಷ್ಠಬ್ಧಿ ಸಂಭ್ರಮ ಕಾರ್ಯಕ್ರಮದ ಯಶಸ್ವಿಗೆ ಎಲ್ಲ ಭಕ್ತ ಸಮೂಹದ ಸಹಾಯ ಸಹಕಾರ ಮುಖ್ಯವಾಗಿದೆ ಎಂದು ಹುಕ್ಕೇರಿಯ ಶ್ರೀ ಗುರುಶಾಂತೇಶ್ವರ ಹಿರೇಮಠದ ಪರಮ ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.
ಅವರು ಭಾನುವಾರದಂದು ತಾಲೂಕಿನ ಹುಣಶ್ಯಾಳ ಪಿಜಿ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಆವರಣದಲ್ಲಿ ಜರುಗಿದ ಶ್ರೀ ನಿಜಗುಣ ದೇವರ ಷಷ್ಠಬ್ಧಿ ಸಂಭ್ರಮ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಶ್ರೀ ನಿಜಗುಣ ದೇವರ 25 ನೇ ಕಾರ್ಯಕ್ರಮ ಮತ್ತು 50 ವರ್ಷದ ಸುವರ್ಣ ಸಂಭ್ರಮ ಕಾರ್ಯಕ್ರಮವು ಭಕ್ತ ಸಮೂಹ ವಿಜೃಂಭಣೆಯಿಂದ ಯಶಸ್ವಿಯಾಗಿ ಕಾರ್ಯಕ್ರಮ ನಿರ್ವಹಣೆ ಮಾಡಿದ್ದು ಈ ಷಷ್ಠಬ್ಧಿ ಸಂಭ್ರಮ ಕಾರ್ಯಕ್ರಮವು ಯಶಸ್ವಿಗೆ ಸಾಕ್ಷಿಯಾಗುತ್ತಿರಿ ಅಂತಾ ನಂಬಿದ್ದೇನೆ.
ಶ್ರೀ ನಿಜಗುಣ ದೇವರು ಜಾತ್ಯಾತೀತವಾಗಿ ಸರ್ವಧರ್ಮೀಯರು ಪ್ರೀತಿಸುವ ಮನೋಭಾವದವರು, ಎಲ್ಲರನ್ನೂ ಪ್ರೀತಿಸು, ಪ್ರೀತಿಯೇ ದೇವರು ಎಂದು ಹೇಳುವ ನಿಜಗುಣ ದೇವರು ಪಂಚಪೀಠ, ವಿರಕ್ತ, ಸಿದ್ದಾರೂಢ, ದ್ವೈತ, ಅದ್ವೈತ ಸಂಪ್ರದಾಯವೆನ್ನದೇ ಎಲ್ಲರನ್ನು ಗೌರವಿಸುವ ವಿಚಾರವಂತರು. ಇದರಿಂದಲೇ “ಮಠದಿಂದ ಘಟ ಬೆಳಗದೇ, ಘಟದಿಂದ ಮಠ ಬೆಳಗಬೇಕು” ಎಂಬ ಉಕ್ತಿ ಇವರಿಗೆ ಅನ್ವರ್ಥವಾಗಿದೆ. ಖ್ಯಾತ ಪ್ರವಚನಕಾರರೆಂದು ಗುರುತಿಸಿಕೊಂಡ ಶ್ರೀಗಳು ಹಾಡಿರುವ ದ್ವನಿಸುರುಳಿಗಳ ಸಿ.ಡಿ ಉತ್ತರ ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳ ಭಕ್ತರ ಮನೆಯಲ್ಲಿ ಪ್ರತಿನಿತ್ಯ ಆಧ್ಯಾತ್ಮಿಕ ಬೆಳಗಿನ ಗಾಯನವಾಗಿವೆ.ಸಾವಿರ ಹಾಡುಗಳ ಸರದಾರವೆಂಬ ಗೀತ ಸಾಹಿತ್ಯ ಪ್ರಸಿದ್ಧಿ ಹೊಂದಿರುವ ನಿಜಗುಣ ದೇವರು ರಚಿಸಿದ ಕೈವಲ್ಯ ಕಿರಣ, ಗೀತ ಕುಸುಮ, ಭಾರತಕ್ಕೊಬ್ಬ ಭಾರತೀಶ, ಶಿವಾವತಾರಿ ಸಿದ್ದಲಿಂಗ, ಕೈವಲ್ಯ ಕನ್ನಡಿ ಪ್ರವಚನ ಕೃತಿಗಳು ಸೇರಿದಂತೆ ಅನೇಕ ಕೃತಿಗಳು ರಚಿಸಿದ ಸಾಹಿತಿಗಳು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಷಷ್ಠಬ್ಧಿ ಸಂಭ್ರಮದ ದೇಣಿಗೆ ಪಾವತಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಪೂರ್ವಭಾವಿ ಸಭೆಯಲ್ಲಿ ಅನೇಕ ಪೂಜ್ಯರು ಹಾಗೂ ಗಣ್ಯರು ಷಷ್ಠಬ್ಧಿ ಸಂಭ್ರಮ ಕಾರ್ಯಕ್ರಮದ ಕುರಿತು ಮಾತನಾಡಿದರು.
ವೇದಿಕೆ ಮೇಲೆ ಗೋಕಾಕದ ಶೂನ್ಯ ಸಂಪಾದನ ಮಠದ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಜಿ, ಚಿದಾನಂದ ಮಹಾಸ್ವಾಮಿಜಿ, ಶ್ರೀಮಠದ ನಿಜಗುಣ ದೇವರು, ತೊಂಟಿಕಟ್ಟಿಯ ಶ್ರೀ ಅಭಿನವ ವೆಂಕಟೇಶ್ವ ಮಹಾರಾಜರು, ಗಣೇಶಾನಂದ ಮಹಾರಾಜರು, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಅಶೋಕ ಪೂಜೇರಿ ಇದ್ದರು.
ಪೂರ್ವಸಭೆಯಲ್ಲಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ, ಜಿ.ಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಜಿ.ಪಂ ಮಾಜಿ ಸದಸ್ಯರುಗಳಾದ ಶಂಕರ ಬಿಲಕುಂದಿ, ವಿಠ್ಠಲ ಸವದತ್ತಿ, ಬಿ.ಬಿ.ಹಂದಿಗುಂದ ಸೇರಿದಂತೆ ವಿವಿಧ ಗ್ರಾಮಗಳಿಂದ ಶ್ರೀಮಠದ ಅಪಾರ ಭಕ್ತ ಸಮೂಹ ಮತ್ತು ಗ್ರಾಮದ ಭಕ್ತರು, ಮುಖಂಡರು ಇದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ