*ಆಧ್ಯಾತ್ಮದಿಂದ ದುಃಖ ನಿವೃತ್ತಿಯಾಗುವದು*
ಹೂಲಿಕಟ್ಟಿ-ಶಿವಾಪೂರ : ಗೋಕಾಕ ತಾಲೂಕಿನ ಸುಕ್ಷೇತ್ರ ಹೂಲಿಕಟ್ಟಿ ಗ್ರಾಮದ ಶ್ರೀ ಬಸವ ಆಶ್ರಮದಲ್ಲಿ ಶ್ರಾವಣ ಮಾಸದ ಆಧ್ಯಾತ್ಮಿಕ ಸತ್ಸಂಗ ಕಾರ್ಯಕ್ರಮಗಳು ಜರುಗಿದವು. ಹೂಲಿಕಟ್ಟಿಯ ಭಜನಾ ಮಂಡಳಿ ಹಾಗೂ ಶ್ರೀ ಅಡವಿಸಿದ್ದೇಶ್ವರ ಭಜನಾ ಮಂಡಳಿ ಶಿವಾಪೂರ ಹ, ಶ್ರೀ ದುರ್ಗಾದೇವಿ ಭಜನಾ ಮಂಡಳಿ ಶಿವಾಪೂರ ಹ ಹಾಗೂ ವಿವಿಧ ಗ್ರಾಮಗಳ ಕಲಾವಿದರಿಂದ ಭಜನಾ ಕಾರ್ಯಕ್ರಮಗಳು ನಡೆದವು.
ಮುಂಜಾನೆ ರುದ್ರಾಭಿಷೇಕ, ಹಾಗೂ ವರದ ಶಂಕರ ಪೂಜೆ ಶಿವಾಪೂರದ ವೇ. ಮೂ ಶ್ರೀ ಈರಯ್ಯಾ ದುಂ. ಹಿರೇಮಠ ಇವರ ನೇತೃತ್ವದಲ್ಲಿ ನಡೆದವು.
ದಿವ್ಯ ಸಾನಿಧ್ಯ ವಹಿಸಿದ ಶ್ರೋ.ಬ್ರ .ಶ್ರೀ ಚರಮೂರ್ತೇಶ್ವರ ಮಹಾಸ್ವಾಮಿಗಳು ಮಮದಾಪೂರ ಇವರು ಮಾತನಾಡಿ ಕೆಡುವ ಕಾಯದ ಮೋಹವನು ಮಾಡಿ ನಮ್ಮ ಸ್ವರೂಪ ಜ್ಞಾನವನ್ನು ಮರೆತು ಬಿಟ್ಟಿರುವೇವು.ಕಾರಣ ಅತ್ಯಂತ ದುಃಖ ನಿವೃತ್ತಿ ಪರಮಾನಂದ ಪ್ರಾಪ್ತಿ ಪಡೆಯಲು ಪಾರಮಾರ್ಥದ ಅವಶ್ಯಕತೆ ಇದೆ ಎಂದು ಹೇಳಿದರು.
ತಿಮ್ಮಾಪೂರ ದ ಶ್ರೋ. ಬ್ರ. ಬಸವರಾಜ ಮಹಾಸ್ವಾಮಿಗಳು ಮಾತನಾಡಿ ಯಥಾರ್ಥ ಜ್ಞಾನದಿಂದ ದುಃಖದ ನಾಶವಾಗುತ್ತದೆ ಎಂದು ಹೇಳಿದರು.
ನಾಗರಾಳದ ಶ್ರೋ. ಬ್ರ. ಶ್ರೀ ವಿಶ್ವೇಶ್ವರಾನಂದ ಮಹಾಸ್ವಾಮಿಗಳು, ಕಂಕನವಾಡಿಯ ಮಾರುತಿ ಶರಣರು, ಕೊಳವಿಯ ವೇ.ಮೂ ಶ್ರೀ ಪತ್ರಯ್ಯಾ ಸ್ವಾಮಿಗಳು ಹಿರೇಮಠ,ಮಮದಾಪೂರದ ವೇ. ಮೂ. ನಂದಯ್ಯಾ ಸ್ವಾಮಿಗಳು ಹಿರೇಮಠ, ಕಟಕೋಳದ ಪೂಜ್ಯರಾದ ಬಿ. ಎಂ. ಸ್ವರಮಂಡಲ ಗುರುಗಳು, ಯರಝರ್ವಿಯ ರಾಮಲಿಂಗ ಹೂಗಾರ ಗುರುಗಳು ವೇದಿಕೆಯಲ್ಲಿ ಉಪದೇಶ ನೀಡಿದರು.
ಕಾರ್ಯಕ್ರಮದಲ್ಲಿ ಸುರೇಶ ಅಳಗುಂಡಿಯವರು ನಿರ್ವಾಣಾಷ್ಟಕ ಸ್ತ್ರೋತ್ರ ಪಠಣ ಮಾಡಿದರು. ಶ್ರೀ ಚಿದಾನಂದ ಗುರುಗಳು ಸ್ವಾಗತಿಸಿ ನಿರೂಪಿಸಿದರು. ಮುತ್ತಪ್ಪ ಭೂತಪ್ಪಗೋಳ, ಶಿವಪ್ಪ ಮುಶಪ್ಪಗೋಳ, ಲಚ್ಚಪ್ಪ ಶರಣ, ಹಟ್ಟಿಗೌಡರ ಮಹಾರಾಜರು,ಮಾರುತಿ ಹೂಗಾರ, ಗುರುನಾಥ ಹೂಗಾರ,ಜಗದೀಶ ಹೂಗಾರ,ವಿವೇಕಾನಂದ ಹೂಗಾರ,ಸಿದ್ದಾರೂಡ ಅಜ್ಜನಕಟ್ಟಿ, ದುರ್ಗಾದೇವಿ ಅರ್ಚಕರು, ಹಾಗೂ ವಿವಿಧ ಗ್ರಾಮಗಳ ಮತ್ತು ಹೂಲಿಕಟ್ಟಿಯ ಭಕ್ತವೃಂದದವರು ಉಪಸ್ಥಿತರಿದ್ದರು.