Breaking News
Home / Recent Posts / ಶ್ರೀ ಶಿವಬೋಧರಂಗ ಸೋಸೈಟಿ 29ನೇ ವಾರ್ಷಿಕ ಸರ್ವ ಸಾಧಾರಣ ಸಭೆ

ಶ್ರೀ ಶಿವಬೋಧರಂಗ ಸೋಸೈಟಿ 29ನೇ ವಾರ್ಷಿಕ ಸರ್ವ ಸಾಧಾರಣ ಸಭೆ

Spread the love

 

ಮೂಡಲಗಿ ಶ್ರೀ ಶಿವಬೋಧರಂಗ ಸೋಸೈಟಿಗೆ 5.70 ಕೋಟಿ ರೂ ಲಾಭ-ಗುಲಗಾಜಂಬಗಿ
ಮೂಡಲಗಿ: ಶ್ರೀ ಶಿವಬೋಧರಂಗ ಅರ್ಬನ್ ಸೊಸಾಯಟಿಯು 18 ಶಾಖೆಗಳನ್ನು ಹೊಂದಿ ಶೇರುದಾರರಿಗೆ ಶೇ.16 ರಷ್ಟು ಲಾಭಾಂಶ ವಿತರಿಸ ಪ್ರಗತಿ ಪತಥದ ಸಾಗಿ ಶೇರುದಾರರ ಮತ್ತು ಸಾರ್ವಜನಿಕರ ಮನದಾಳದಲ್ಲಿದೆ ಎಂದು ಸೋಸೈಟಿಯ ಅಧ್ಯಕ್ಷ ಬಸವರಾಜ ವ್ಹಿ ಗುಲಗಾಜಂಬಗಿ ಹೇಳಿದರು.
ಅವರು ಪಟ್ಟಣದ ಗುಡ್ಲಮಡ್ಡಿ ವೀರಭದ್ರೇಶ್ವರ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪದಲ್ಲಿ ಜರುಗಿದ ಸ್ಥಳೀಯ ಪ್ರತಿಷ್ಠಿತ ಹಣಕಾಸಿನ ಸಂಸ್ಥೆಯಾದ ಶ್ರೀ ಶಿವಬೋಧರಂಗ ಅರ್ಬನ್ ಕೋ ಆಫ್ ಕ್ರೆಡಿಟ್ ಸೋಸೈಟಿಯ 29 ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆವಹಿಸಿ ಸಸಿಗೆ ನೀರು ಹಾಕುವದರ ಮೂಲಕ ಉದ್ಘಾಟಿಸಿ ಮಾತನಾಡಿ, ಸೋಸೈಟಿಯು ಕಳೆದ ಮಾರ್ಚ ಅಂತ್ಯಕ್ಕೆ 15814 ಸದಸ್ಯರನ್ನು ಹೊಂದಿ, ಸಾರ್ವಜನಿಕರಿಂದ 341 ಕೋಟಿ ರೂ ಠೇವು ಸಂಗ್ರಹಿಸಿ ಶೇರುದಾರರಿಗೆ ವಿವಿಧ ತೇರನಾದ ಸುಮಾರು 191 ಕೋಟಿ ರೂ ಸಾಲ ನೀಡಿ 393 ಕೋಟಿ ರೂ ದುಡಿಯುವ ಬಂಡವಾಳ ಹೊಂದಿ 5.70 ಕೋಟಿ ರೂ ಲಾಭ ಗಳಿಸಿ ಒಟ್ಟು 1335 ಕೋಟಿ ರೂ ವಾರ್ಷಿಕ ವಹಿವಾಟು ನಡೆಸಿದೆ ಎಂದ ಅವರು ಸೋಸೈಟಿಯು ಪ್ರಗತಿ ಪತಥದಲ್ಲಿ ಸಾಗುವಲ್ಲಿ ಆಢಳಿತ ಮಂಡಳಿಯ ನಿಸ್ವಾರ್ಥ ಸೇವೆ, ಸಿಬ್ಬಂದಿಗಳ ಪರಿಶ್ರಮ ಹಾಗೂ ಸಕಾಲಕ್ಕೆ ಗ್ರಾಹಕರು ಸಾಲ ಪಾವತಿ ಮಾಡುತ್ತಿರುವುದೆ ಕಾರಣ ಎಂದರು.
ಮಮದಾಪೂರ ಶಾಖೆಯ ಅಧ್ಯಕ್ಷ ಮಹಾದೇವ ಗಾಣಗಿ, ಸಾಲಗಾರರು ಪಡೆದುಕೊಂಡ ಸಾಲವನ್ನು ಸರಿಯಾದ ವೇಳೆಗೆ ಮರುಪಾವತಿಸಿದರೆ ಮಾತ್ರ ಸೊಸಾಯಟಯು ಇಷ್ಟೊಂದು ಪ್ರಗತಿ ಸಾಧಿಸಲು ಸಾಧ್ಯ ಎಂದರು.
ರಬಕವಿ ಶಾಖೆಯ ಸಲಹಾ ಸಮಿತಿಯ ಸದಸ್ಯ ಶಿವಾನಂದ ದಾಶಾಳ, ಸೋಸೈಟಿಯು ಬೆಳಗಾವಿ & ಬಾಗಲಕೋಟ ಜಿಲ್ಲೆಗಳಲ್ಲಿ ಮಾತ್ರ ಹೆಸರು ಗಳಿಸದೇ ರಾಜ್ಯದಲ್ಲಿಯು ತನ್ನ ಹೆಸರು ಪಸರಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.
ಸಭೆಯಲ್ಲಿ ಸೋಸೈಟಿಯ ಉಪಾಧ್ಯಕ್ಷ ಸುಭಾಸ ಆರ್ ಸೋನವಾಲಕರ. ನಿರ್ದೇಶಕರಾದ ರವೀಂದ್ರ ಪಿ. ಸೋನವಾಲಕರ, ಪುಲಕೇಶ ಆರ್ ಸೋನವಾಲಕರ, ಅಶೋಕ ಎಮ್ ಹೊಸೂರ, ಡಾ. ಶಂಕರ ಎಸ್.ದಂಡಪ್ಪನವರ, ರೇವಪ್ಪ ಕೆ.ಕುರಬಗಟ್ಟಿ, ವಿದ್ಯಾವತಿ ರ.ಸೋನವಾಲಕರ, ಶಾರದಾ ಬ.ಗುಲಗಾಜಂಬಗಿ, ಮಂಜುಳಾ ಶಿ.ಬಳಿಗಾರ, ಗಂಗವ್ವಾ ಕೆ.ಸಣ್ಣಪ್ಪನ್ನವರ, ಹಣಮಂತ ಎಸ್.ಸಣ್ಣಕ್ಕಿ ಹಾಗೂ 18 ಶಾಖೆಗಳ ಸಲಹಾ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಅನೇಕರು ಉಪಸ್ಥಿತರಿದ್ದರು.
ಪ್ರಧಾನ ವ್ಯವಸ್ಥಾಪಕ ಸುರೇಶ ನಾಶಿ ಕ್ರೋಡಿಕೃತ ಅಢಾವೆ ಪತ್ರಿಕೆ, ಗುರ್ಲಾಪೂರ ಶಾಖೆಯ ವ್ಯಸ್ಥಾಪಕ ವೆಂಕಟೇಶ ಬಾಲರಡ್ಡಿ ವರದಿ ವಾಚನ, ಜಮಖಂಡಿ ಶಾಖಾ ವ್ಯವಸ್ಥಾಪಕ ಅಶೋಕ ಹೊಸಟ್ಟಿ ಲಾಭ-ಹಾನಿ, ಸಾವಳಗಿ ಶಾಖಾ ವ್ಯವಸ್ಥಾಪಕ ಆಶೀಫ ದೇಸಾಯಿ ಲಾಭ ವಿಂಗಡಣೆ ಮತ್ತು ಹಣಮಂತ ಕುಂಬಾರ ಅಂದಾಜು ಲಾಭ-ಹಾನಿ ಪತ್ರಿಕೆಯನ್ನು ಮಂಡಿಸಿದರು.
ಗುರ್ಲಾಪೂರ ಶಾಖಾ ವ್ಯವಸ್ಥಾಪಕ ವ್ಹಿ.ಎಚ್. ಬಾಲರಡ್ಡಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.
 


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ