Breaking News
Home / Recent Posts / ಪಕ್ಷ ಸಂಘಟನೆಯಲ್ಲಿ ಮತಗಟ್ಟೆ ಕಾರ್ಯಕರ್ತರ ಪಾತ್ರ ತುಂಬಾ ಮಹತ್ವದ್ದಾಗಿದೆ- ದಯಾನಂದ ಪಾಟೀಲ

ಪಕ್ಷ ಸಂಘಟನೆಯಲ್ಲಿ ಮತಗಟ್ಟೆ ಕಾರ್ಯಕರ್ತರ ಪಾತ್ರ ತುಂಬಾ ಮಹತ್ವದ್ದಾಗಿದೆ- ದಯಾನಂದ ಪಾಟೀಲ

Spread the love

 

ಗೋಕಾಕ ತಾಲೂಕಿನ ಕೌಜಲಗಿಯ ಅಂಬೇಡ್ಕರ್ ಭವನದಲ್ಲಿ ಅರಬಾವಿ ಮತ್ತು ಕೌಜಲಗಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳ ಸಭೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಅರಬಾವಿ ಕ್ಷೇತ್ರದ ಉಸ್ತುವಾರಿ ದಯಾನಂದ ಪಾಟೀಲ ಹಾಗೂ ಗಣ್ಯರು ಸಸಿಗೆ ನೀರು ಉಣಿಸುವ ಮೂಲಕ ಸಭೆಯನ್ನು ಉದ್ಘಾಟಿಸಿದರು

ಮೂಡಲಗಿ: ಪಕ್ಷ ಸಂಘಟನೆಯಲ್ಲಿ ಮತಗಟ್ಟೆ ಕಾರ್ಯಕರ್ತರ ಪಾತ್ರ ತುಂಬಾ ಮಹತ್ವದ್ದಾಗಿದೆ. ನಂಬಿಕೆಗೆ ಅರ್ಹರಾದವರನ್ನೇ ಮತಗಟ್ಟೆ ಕಾರ್ಯಕರ್ತರನ್ನಾಗಿ ಹಾಗೂ ಬೂತ್ ಕಮಿಟಿ ಸದಸ್ಯರು ಮತ್ತು ಅಧ್ಯಕ್ಷರನ್ನಾಗಿ ನೇಮಿಸುವಂತೆ ಸೂಚಿಸಿದ ಅವರು ಕಾರ್ಯಕರ್ತರಿಗೆ ವ್ಯಕ್ತಿ ಪೂಜೆ ಬದಲಿಗೆ, ಕಾಂಗ್ರೆಸ್ ಪಕ್ಷದ ಪರವಾಗಿ ಬದ್ಧತೆ, ಶ್ರದ್ಧೆ ಮತ್ತು ಗೌರವ ಬೆಳೆಸಿಕೊಳ್ಳಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಅರಬಾವಿ ಕ್ಷೇತ್ರದ ಉಸ್ತುವಾರಿ ದಯಾನಂದ ಪಾಟೀಲ ಹೇಳಿದರು.
ಅವರು ಗೋಕಾಕ ತಾಲೂಕಿನ ಕೌಜಲಗಿಯ ಅಂಬೇಡ್ಕರ್ ಭವನದಲ್ಲಿ ನಡೆದ ಅರಬಾವಿ ಮತ್ತು ಕೌಜಲಗಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳ ಸಭೆಯನ್ನು ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಸಿದ್ದ ಅರಬಾವಿ ಕ್ಷೇತ್ರದ ಮುಖಂಡ ಮತ್ತು ಕೆಪಿಸಿಸಿ ಸದಸ್ಯ ಅರವಿಂದ ದಳವಾಯಿ ಮಾತನಾಡಿ, ಅರಬಾವಿ ಕ್ಷೇತ್ರ ಒಂದು ಕಾಲಕ್ಕೆ ಕಾಂಗ್ರೆಸ್ ಪಕ್ಷದ ಭದ್ರ ಕೋಟೆಯಾಗಿತ್ತು, ಮೊದಲ ಚುನಾವಣೆ 1952 ರಿಂದ 2006 ರವರೆಗೆ ಅರಬಾವಿಯಿಂದ ಕಾಂಗ್ರೆಸ್ ನವರೇ ಶಾಸಕರಾಗಿದ್ದರು, ಆದರೆ, ಇಂದು ಅರಬಾವಿ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯವರು ಕೋಟಿಗಟ್ಟಲೆ ಹಣ ಹರಿಸುತ್ತಿದ್ದು, ಚುನಾವಣೆ ಮಾಡುವದೇ ಕಷ್ಟಸಾಧ್ಯವಾಗಿದೆ. ಅಲ್ಲದೇ ಕೆಲವರು ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸಿಗರು ಎಂದು ಹೇಳಿಕೊಳ್ಳುವವರು ಟಿಕೇಟ್ ದೊರೆಯದೇ ಹೋದಾಗ ಕಾಂಗ್ರೆಸ್ ಪಕ್ಷಕ್ಕೆ ಚೂರಿ ಹಾಕುತ್ತಾರೆ. ಇಂತಹವರಿಂದಲೇ ಕಳೆದ ಎರಡು ಚುನಾವಣೆಗಳಲ್ಲಿ ಪಕ್ಷಕ್ಕೆ ಹಾನಿಯಾಗಿದ್ದು ಕಾರ್ಯಕರ್ತರು ಇಂತಹ ಮೀರಸಾದಿಕರಿಂದ ಎಚ್ಚರದಿಂದಿರಬೇಕು. ಅರಬಾವಿಯಲ್ಲಿ ನಾವು ಹಣದಿಂದ ಚುನಾವಣೆ ಗೆಲ್ಲುವದು ಸಾಧ್ಯವಿಲ್ಲ, ಕಾಂಗ್ರೆಸ್ ಕಾರ್ಯಕರ್ತರು ಸೈದ್ಧಾಂತಿಕ ಬದ್ಧತೆ ಬೆಳೆಸಿಕೊಂಡರೆ ಮಾತ್ರ ಚುಣಾವಣೆ ಗೆಲ್ಲಲು ಸಾಧ್ಯವೆಂದು ಹೇಳಿದರು.
ಹಿರಿಯ ಕಾಂಗ್ರೆಸ್ ಮುಖಂಡ ವಿ.ಪಿ ನಾಯಕ ಮಾತನಾಡಿ, ಕಾಂಗ್ರೆಸ್ ಪಕ್ಷದ ವರಿಷ್ಠರೇ ಅರಬಾವಿ ಮತಕ್ಷೇತ್ರವನ್ನು ನಿರ್ಲಕ್ಷಿಸಿದ್ಧು ಕಾರ್ಯಕರ್ತರಿಗೆ ಯಾವುದೇ ಪ್ರತಿಫಲಸಿಗುತ್ತಿಲ್ಲವೆಂದು ವಿμÁದಿಸಿದರು. 2024 ರಲ್ಲೂ ಅರಬಾವಿಯಲ್ಲಿ ಕೆಲ ಸಮಿತಿಗಳಿಗೆ ಬಿಜೆಪಿಯವರೇ ನಾಮ ನಿರ್ದೇಶನವಾಗಿರುವದು ವಿಶಾದನೀಯವೆಂದು ಹೇಳಿದ ಅವರು ಈ ರೀತಿ ಪಕ್ಷ ಬೆಳೆಸುವುದು ಅಸಾಧ್ಯ ಎಂದು ಪ್ರಧಾನ ಕಾರ್ಯದರ್ಶಿಗಳ ಗಮನಕ್ಕೆ ತಂದರು.
ಸಭೆಯಲ್ಲಿ ಪಕ್ಷದ ಹಿರಿಯರಾದ ಸುಭಾಸ ಸೋನವಾಲಕರ, ಮೂಡಲಗಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅನಿಲ ದಳವಾಯಿ, ಕೆ. ಟಿ ಗಾಣಿಗೇರ, ಮಾಳಪ್ಪ ಬಿದರಿ, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಶ್, ಸೇವಾದಳದ ಸಂಚಾಲಕ ಮೀರಾಸಾಬ ಅನ್ಸಾರಿ, ರೇವಣ್ಣ ಮುನ್ಯಾಳ, ಇಮಾಮಸಾಬÀ ಹುನ್ನೂರ, ರಮೇಶ ಬೆಳಕೂಡ, ವಿರೂಪಾಕ್ಷ ಮುಗಳಖೋಡ, ಸಂಗಮೇಶ ಕೌಜಲಗಿ, ರವಿ ಮೂಡಲಗಿ, ಅಬ್ಬಾಸ ವನ್ನೂರ, ಬಾಳಪ್ಪ ಪಾಲಕಿ, ದುರ್ಗಪ್ಪ ಅಕ್ಕೆನ್ನವರ, ಕರೆಪ್ಪ ಗೌಡಿ, ಅರಬಾವಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸುರೇಶ ಮಗದುಮ್, ಮತ್ತು ಕೌಜಲಗಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪ್ರಕಾಶ ಅರಳಿ, ಸೀಮಾ ಉಪ್ಪಾರ, ಸುಜಾತಾ ಹಿರೇಮಠ, ಅನಿತಾ ನಾಯಿಂಗ್ಲಜ ಮುಂತಾದವರು ಉಪಸ್ಥಿತರಿದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ