Breaking News
Home / Recent Posts / ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ: ಸುಭಾಸ ಢವಳೇಶ್ವರ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ: ಸುಭಾಸ ಢವಳೇಶ್ವರ

Spread the love

ಮೂಡಲಗಿ: ಇಡೀ ಜಗತ್ತು ವಾಣಿಜ್ಯೀಕರಣವಾಗಿದೆ. ಪ್ರತಿಯೊಬ್ಬರೂ ನಿತ್ಯದ ಬದುಕಿನಲ್ಲಿ ಆನಲೈನ್ ವ್ಯವಹಾರ ಅವಲಂಬಿಸಿದ್ದಾರೆ. ಹೀಗಾಗಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಿದೆ ಎಂದು ಪಟ್ಟಣದ ದಿ.ಮೂಡಲಗಿ ಕೋ-ಆಪರೇಟಿವ್ ಬ್ಯಾಂಕ ಅಧ್ಯಕ್ಷ ಹಾಘೂ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್. ಜಿ. ಢವಳೇಶ್ವರ ಹೇಳಿದರು.
ತಾಲೂಕಿನ ನಾಗನೂರ ಪಟ್ಟಣದ ಅಥರ್ವ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಮೂಡಲಗಿ ಕೋ ಆಪರೇಟಿವ್ ಬ್ಯಾಂಕ್‍ಗೆ ಭೇಟ್ಟಿ ನೀಡಿದ ವೇಳೆ ಮಾತನಾಡಿದ ಅವರು ಇ ಕಾಮರ್ಸ್ ಕ್ಷೇತ್ರ ವಿಶಾಲವಾಗಿ ತೆರೆದುಕೊಂಡಿದೆ. ಉದ್ಯಮ ಕ್ಷೇತ್ರದ ಬೆಳವಣಿಗೆಗೆ ತಂತ್ರಜ್ಞಾನ ಅವಶ್ಯವಿದ್ದರೂ ಉದ್ಯಮ ಜಗತ್ತನ್ನು ಮುನ್ನಡೆಸುವವರು ಮಾತ್ರ ಕಾಮರ್ಸ್ ವಿದ್ಯಾರ್ಥಿಗಳು ಹೀಗಾಗಿ ಶ್ರದ್ದೆಯಿಂದ ಕಲಿಯಬೇಕು. ಕಲಿಕೆಯ ಅವಧಿಯಲ್ಲಿ ಕ್ಷೇತ್ರ ಭೇಟ್ಟಿಯಂತಹ ವಿನೂತನ ಕಾರ್ಯಕ್ರಮ ಆಯೋಜಿಸುವ ಅಥರ್ವ ಮಹಾವಿದ್ಯಾಲಯ ಕಾರ್ಯ ಶ್ಲಾಘನಿಯವಾಗಿದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ಇಡೀ ದಿನ ಬ್ಯಾಂಕಿಂಗ್ ವ್ಯವಹಾರಗಳನ್ನು ಆಸಕ್ತಿಯಿಂದ ವೀಕ್ಷಿಸಿ ಸಿಬ್ಬಂದಿಯಿಂದ ಬ್ಯಾಂಕಿಂಗ್ ವ್ಯವಹಾರಗಳ ಕುರಿತು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಗೌಡಪ್ಪ ಬುದ್ನಿ, ಅಥರ್ವ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಆರ್.ಸಿ.ನಿರ್ವಾಣಿ, ರಾಜೇಂದ್ರ ಪಾಟೀಲ ಹಾಗೂ ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ