Breaking News
Home / ರಾಜ್ಯ / ರಾಮಾಯಣ ಮಹಾಕಾವ್ಯವು ಪ್ರಪಂಚದಲ್ಲಿ ವಿಶಿಷ್ಟ ಸ್ಥಾನದಲ್ಲಿದೆ

ರಾಮಾಯಣ ಮಹಾಕಾವ್ಯವು ಪ್ರಪಂಚದಲ್ಲಿ ವಿಶಿಷ್ಟ ಸ್ಥಾನದಲ್ಲಿದೆ

Spread the love

 

ಮೂಡಲಗಿ : ಮಹರ್ಷಿಯವರು ಬರೆದಿರುವ ರಾಮಾಯಣ ಮಹಾಕಾವ್ಯವು ಪ್ರಪಂಚದ ಮಹಾಕಾವ್ಯಗಳಲ್ಲಿಯೆ ಅತ್ಯಂತ ವಿಶಿಷ್ಟ ಸ್ಥಾನದಲ್ಲಿದೆ. ಇಂದಿನ ಆದುನಿಕ ಮಾನವನ ಜೀವನ ಶೈಲಿಯಲ್ಲಿ ಇರಬೇಕಾದ ನೈತಿಕ, ಆಧ್ಯಾತ್ಮಿಕ ಸಾಮಾಜಿಕ ಮತ್ತು ಸಾಂಸ್ಕ್ರತಿಕ ಮೌಲ್ಯಗಳಮೇಲೆ ಬೆಳಕು ಚೆಲ್ಲುತ್ತದೆ ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್. ಆರ್. ಭಾಗೋಜಿ ಹೆಳಿದರು.
ಅವರು ದಿವಾಣಿ ಹಾಗೂ ಜೆಎಮ್‍ಎಪ್‍ಸಿ ನ್ಯಾಯಲಯದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ನಿಮಿತ್ಯ ಮಾತನಾಡುತ್ತ ಹಿಂದು ಧರ್ಮದ ಹಲವು ಪ್ರಮುಖ ಗ್ರಂಥಗಳಲ್ಲಿ ಒಂದಾದ ರಾಮಾಯಣ ಮಹಾಕಾವ್ಯವನ್ನು ಬರೆದಿದ್ದರೆಂದಲೆ ವಾಲ್ಮೀಕಿಯವರು ಭಾರತಿಯರ ಮನಸ್ಸುಗಳಲ್ಲಿ ಅಜರಾಮರವಾಗಿದ್ದಾರೆ ಎಂದರು.
ವಕೀಲರಾದ ಬಿ.ಪಿ ಬಾಗೇವಾಡಿ ಮಾತನಾಡಿ ಭಾರತ ದೇಶ ಅತ್ಯಂತ ವೈವಿಧ್ಯತೆಯಿಂದ ಕೂಡಿದ ಪುಣ್ಯ ಭೂಮಿ ಈ ಪುಣ್ಯಭೂಮಿಯ ಕಣಕಣಗಳಲ್ಲಿಯೂ ರಾಮಾಯಣದ ಆಧ್ಮಾತ್ಮಿಕ ಚಿಂತನೆ ಮೈದುಂಬಿರಿತ್ತದೆ. ಎಂದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳ ಸಂಘದ ಸಹಕಾರ್ಯದರ್ಶಿ ಎಸ್.ವಾಯ್.ಸಣ್ಣಕ್ಕಿ ಹಿರಿಯ ವಕೀಲರಾದ ಎಲ್.ವಾಯ್.ಅಡಿಹುಡಿ ಎಮ್.ಆಯ್.ಬಡಿಗೇರ ಎ.ಬಿ.ಬಾಗೊಜಿ ಎಸ್.ವಾಯ್.ಹೋಸಟ್ಟಿ, ಆಯ್.ಎಮ್.ಹಿರೇಮಠ ವಿ.ಕೆ.ಪಾಟೀಲ ವಾಯ್.ಎಸ್.ಖಾನಟ್ಟಿ ಎಸ್.ಎಲ್.ಪಾಟೀಲ ಹಾಗೂ ಹಿರಿಯ ವಕೀಲರು ಮತ್ತು ನ್ಯಾಯಲಯದ ಸಿಬ್ಭಂದಿ ಉಪಸ್ಥಿತರಿದ್ದರು.


Spread the love

About inmudalgi

Check Also

ಆರ್.ಡಿ.ಎಸ್. ಪಿಯು ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುವ ಸಮಾರಂಭ

Spread the love  ಮೂಡಲಗಿ : ದಿನಾಂಕ 19-01-2026 ರಂದು ಇಲ್ಲಿನ ಶೈಕ್ಷಣಿಕ ಸಂಸ್ಥೆಯಾದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ