ಕಲ್ಲೋಳಿ ಸಾಯಿ ಮಂದಿರ ವಾರ್ಷಿಕೋತ್ಸವ
ಮೂಡಲಗಿ:ಕಲ್ಲೋಳಿ ಪಟ್ಟಣದ ಶ್ರೀ ಸತ್ಯ ಸಾಯಿ ಸಮಿತಿ ಇದರ 39 ನೇ ವಾರ್ಷಿಕೋತ್ಸವ ಸಮಾರಂಭ ರವಿವಾರ ಅ-20 ರಂದು ಬೆಳಿಗ್ಗೆ 11-00 ಗಂಟೆಗೆ ಪ್ರಶಾಂತಿ ಕುಟೀರದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಶ್ರೀಶೈಲ ತುಪ್ಪದ ತಿಳಿಸಿದ್ದಾರೆ.
ಶ್ರೀ ಸತ್ಯ ಸಾಯಿ ಸಮಿತಿಗಳ ಜಿಲ್ಲಾ ಅಧ್ಯಕ್ಷ ವಸಂತ ಬಾಳಿಗಾ ಅಧ್ಯಕ್ಷತೆಯನ್ನು ವಹಿಸುವರು.
ಮುಖ್ಯ ಅತಿಥಿಗಳಾಗಿ ಧಾರವಾಡ ಜಿಲ್ಲಾ ಆಧ್ಯಾತ್ಮಿಕ ಸಂಪನ್ಮೂಲ ವ್ಯಕ್ತಿ ಆಶಾ ಜೋಶಿ ಆಗಮಿಸಲಿದ್ದು.ಹಿರಿಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸುರೇಶ ಕಬ್ಬೂರ,ಸಂಚಾಲಕ ರೋಹಿತ್ ಕಲಾಲ ಸೇರಿದಂತೆ ಅನೇಕ ಸಮಿತಿ ಸದಸ್ಯರು, ಸಾಯಿ ಭಕ್ತರು ಉಪಸ್ಥಿತರುವರು.
ವಾರ್ಷಿಕೋತ್ಸವದ ಅಂಗವಾಗಿ
ಓಂಕಾರ ಸುಪ್ರಭಾತ,ವೇಧ ಘೋಷ,ನಗರ ಸಂಕೀರ್ತನೆ,ಶ್ರೀ ಸಾಯಿ ಸತ್ಯ ನಾರಾಯಣ ಪೂಜೆ,ಪ್ರಶಾಂತಿ ಧ್ವಜಾರೋಹಣ, ಸಾಯಿ ಭಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ.
IN MUDALGI Latest Kannada News