ಮೂಡಲಗಿ: ಕಿತ್ತೂರು ಉತ್ಸವದ ಚನ್ನಮ್ಮನವರ 200ನೇ ವಿಜಯೋತ್ಸವದ ವೀರಜ್ಯೋತಿ ಯಾತ್ರೆಯ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮತ್ತು ಕುಂಭ ಮೇಳದೊಂದಿಗೆ ಮೂಡಲಗಿ ತಾಲೂಕಾ ಆಡಳಿತದಿಂದ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ತಹಶೀಲ್ದಾರ ಶಿವಾನಂದ ಬಬಲಿ ಅವರು ಚನ್ನಮ್ಮನ ವೀರಜ್ಯೋತಿ ಯಾತ್ರೆಯ ರಥಕ್ಕೆ ಪೂಜೆಸಲ್ಲಿಸುವದೊಂದಿಗೆ ಭವ್ಯ ಸ್ವಾಗತ ಕೋರಲಾಯಿತು.
ಈ ವೇಳೆ ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, 1824ರಲ್ಲಿ ಅಕ್ಟೋಬರ್ 23ರಂದು ಬ್ರಿಟೀಷರ ವಿರುದ್ದ ನಡೆದ ಹೋರಾಟದಲ್ಲಿ ಚನ್ನಮ್ಮ ಜಯಗಳಿಸಿ ಈ ವರ್ಷಕ್ಕೆ 200 ವರ್ಷಗಳು ಗತ್ತಿಸಿದ ಹಿನ್ನಲೆ ರಾಜ್ಯ ಸರ್ಕಾರವು ಚನ್ನಮ್ಮನ ವಿಜಯೋತ್ಸವವನ್ನು ಅತ್ಯಂತ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲ್ಲಿದೆ. ನಮ್ಮ ನೆಲದ ರಕ್ಷಣೆಗಾಗಿ ಹೋರಾಟ ನಡೆಸಿದ ಚನ್ನಮ್ಮ ಸ್ವಾಭಿಮಾನದ ಸಂಕೇತವಾಗಿದ್ದು, ವೀರರಾಣಿ ಕಿತ್ತೂರು ಚನ್ನಮ್ಮನ ಶೌರ್ಯ, ಸಾಹಸ, ಪರಾಕ್ರಮ, ಕಿತ್ತೂರು ಸಂಸ್ಥಾನದ ಇತಿಹಾಸವನ್ನು ಎಲ್ಲರೂ ತಿಳಿದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ತಾಪಂ ಇಒ ಎಫ್.ಜಿ.ಚಿನ್ನನವರ, ಸಿಡಿಪಿಒ ಯಲ್ಲಪ್ಪ ಗದಾಡಿ, ಹೆಸ್ಕಾಂ ಅಧಿಕಾರಿ ಎಮ್ ಎಸ್ ನಾಗನ್ನವರ, ಪುರಸಭೆ ಅಧ್ಯಕ್ಷೆ ಖರ್ಶಾದ ನದಾಫ್, ಪಿಎಸ್‍ಐ ರಾಜು ಪೂಜೇರಿ, ಪುರಸಭೆ ಮುಖ್ಯಾಧಿಕಾರಿ ತುಕ್ಕಾರಾಮ ಮಾದರ, ಆರೋಗ್ಯ ನೀರಿಕ್ಷಕ ಚಿದಾನಂದ ಮುಗಳಖೋಡ, ಪುರಸಭೆ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಪಂಚಮಸಾಲಿ ಸಮಾಜದ ಮುಖಂಡರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
