ಮೂಡಲಗಿ: ಬ್ರಿಟೀಷರ ವಿರುದ್ಧ ಹೋರಾಡಿದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮಳ ಜಯಂತಿಯನ್ನು ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾ ಭವನದಲ್ಲಿ ತಾಲೂಕಾ ಆಡಳಿತದಿಂದ ಬುಧವಾರಂದು ಆಚರಿಸಿದರು.
ಸಮಾರಂಭದಲ್ಲಿ ಕ್ಷೇತ್ರಶೀಕ್ಷಣಾಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ಸ್ವಾತಂತ್ರ ಹೋರಾಟದ ಕಿಚ್ಚು ಹಚ್ಚಿಸಿದ ಉತ್ತರ ಭಾರತದ ನಮ್ಮ ಬೆಳಗಾವಿ ಜಿಲ್ಲೆಯ ವೀರ ರಾಣಿ ಕಿತ್ತೂರ ರಾಣಿ ಚನ್ನಮ್ಮಳ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದ ಅವರು ನಮ್ಮ ನೆಲದ ರಕ್ಷಣೆಗಾಗಿ ಹೋರಾಟ ನಡೆಸಿದ ಚನ್ನಮ್ಮಳು ಸ್ವಾಭಿಮಾನದ ಸಂಕೇತವಾಗಿದ್ದು, ಚನ್ನಮ್ಮಳ ಶೌರ್ಯ, ಸಾಹಸ, ಪರಾಕ್ರಮ, ಕಿತ್ತೂರು ಸಂಸ್ಥಾನದ ಇತಿಹಾಸವನ್ನು ಎಲ್ಲರೂ ತಿಳಿದುಕೊಳ್ಳಬೇಕೆಂದರು.
ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮಳ ಭಾವ ಚಿತ್ರಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳು ಮುಖಂಡರು ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು.
ಸಮಾರಂಭದಲ್ಲಿ ಶಿರಸ್ತೆದಾರ ಪರುಶರಾಮ ನಾಯಕ, ಹೆಸ್ಕಾಂ ಅಧಿಕಾರಿ ಎಸ್.ಎಸ್.ಮಠದ, ವಸತಿ ನಿಲಯ ಪಾಲಕ ಎಸ್.ಎಸ್.ಸೋರಗಾಂವಿ, ಪುಸರಸಭೆ ಸದಸ್ಯ ಶಿವು ಸಣ್ಣಕ್ಕಿ, ಮಾಜಿ ಸದಸ್ಯ ಈರಪ್ಪ ಬನ್ನೂರ, ಮುಖಂಡರಾ ಬಸವರಾಜ ಪಾಟೀಲ, ಗುರು ಗಂಗಣ್ಣವರ, ಪ್ರಕಾಶ ತೇರದಾಳ, ಚೇತನ ನಿಶಾನಿಮಠ, ತಹಶೀಲ್ದಾರ ಕಚೇರಿಯ ಎಮ್.ಎಲ್.ಮಾಸ್ತಮರಡ್ಡಿ, ಯಶವಂತ ಉದಪ್ಪ£ನ್ನವರ, ಮಂಜು ಗುಡಸಿ, ಎಸ್.ಎಸ್.ಮುದಗಲ್, ಎನ್.ಬಿ.ಹಂಡಿಬಾಗ, ಸಿದ್ವು ಬಿಸ್ವಾಗರ್, ಸಚಿನ ಕೋಣ್ಣೂರ, ಸಂಜು ಅಗನೇಪ್ಪಗೋಳ, ಸುರೇಖಾ ಈರಕರ, ಯಲ್ಲಾಲಿಂಗ ಬೆಳ್ಳೂವರಿ, ತಾ.ಪಂ ಕಚೇರಿಯ ಶಿವರಾಯ ಚಳ್ಳಕೇರಿ, ಶಿಕ್ಷಣ ಇಲಾಖೆಯ ಆರ್.ವಿ.ಯರಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.
