ಮೂಡಲಗಿ: ತಾಲೂಕಿನ ಮುನ್ಯಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ರಂಗಾಪುರ ಗ್ರಾಮದ ಸರ್ಕಾರಿ ಕನ್ನಡ ಶಾಲೆಯ ಮಕ್ಕಲಿಗೆ ಗುಣಮಟ್ಟದ ಶಿಕ್ಷಣ ಸೌಲಭ್ಯ ಹಾಗೂ ಸ್ಮಾರ್ಟ್ ಶಿಕ್ಷಣದ ಸಲುವಾಗಿ ಗ್ರಾಮ ಪಂಚಾಯತ್ ಮುನ್ಯಾಳ ಗ್ರಾಮ ಪಂಚಾಯತಿಯಿಂದ 45 ಇಂಚಿನ ಟಿ.ವಿ ಯನ್ನು ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕಾಣಕೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಉದಯ್ ಸನದಿ, ಸದಸ್ಯರಾದ ಬಸಪ್ಪ ಮಾದರ, ಸದಸ್ಯರಾದ ಬಸವ್ವ ಮಾದರ್ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ತಡಸನವರ, ಮಾಜಿ ತಾಲೂಕ ಪಂಚಾಯತ್ ಸದಸ್ಯರು ಗ್ರಾಮದ ಮುಖಂಡರು, ಹಾಗೂ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
