Breaking News
Home / Uncategorized / ಸೋಲ್ಲಾಪುರ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಕನ್ನಡ ಭಾಷಿಕ ಪ್ರದೇಶದ ಹತ್ತರಸಂಗಕೂಡಲ ಗ್ರಾಮದಲ್ಲಿ ನಡೆದ ವಿಜಯ ಸಂಕಲ್ಪ ಸಭೆ

ಸೋಲ್ಲಾಪುರ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಕನ್ನಡ ಭಾಷಿಕ ಪ್ರದೇಶದ ಹತ್ತರಸಂಗಕೂಡಲ ಗ್ರಾಮದಲ್ಲಿ ನಡೆದ ವಿಜಯ ಸಂಕಲ್ಪ ಸಭೆ

Spread the love

ಮೂಡಲಗಿ: ಇಡಿ ದೇಶದ ಜನ ಮಹಾರಾಷ್ಟç ರಾಜ್ಯದ ಚುನಾವಣೆಯನ್ನು ಅತ್ಯಂತ ಕುತೂಹಲದಿಂದ ಗಮನಿಸುತ್ತಿದ್ದು ಸ್ಥಿರ ಸರ್ಕಾರಕ್ಕಾಗಿ ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈಗಳನ್ನು ಬಲಪಡಿಸಬೇಕು ಮತ್ತು ಮಹಾರಾಷ್ಟçದಲ್ಲಿ ಅಭಿವೃದ್ದಿ ಪರ್ವ ಪ್ರಾರಂಭವಾಗಬೇಕು ಈ ಹಿನ್ನಲೆಯಲ್ಲಿ ನಮ್ಮೆಲ್ಲ ಕಾರ್ಯಕರ್ತರು ಈ ಚುನಾವಣೆಯನ್ನು ಸವಾಲಾಗಿ ಸ್ವೀಕಾರ ಮಾಡಿ ಅತೀ ಹೆಚ್ಚು ಬಹುಮತದಿಂದ ಗೆಲ್ಲಲು ಪರಿಶ್ರಮ ಹಾಕಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಕರೆ ನೀಡಿದರು.


ನೆರೆಯ ಮಹಾರಾಷ್ಟ್ರ ರಾಜ್ಯದ ವಿಧಾನಸಭಾ ಚುನಾವಣೆ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಸೋಲ್ಲಾಪುರ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಕನ್ನಡ ಭಾಷಿಕ ಪ್ರದೇಶದ ಹತ್ತರಸಂಗಕೂಡಲ ಗ್ರಾಮದಲ್ಲಿ ನಡೆದ ವಿಜಯ ಸಂಕಲ್ಪ ಸಭೆಯಲ್ಲಿ ಸಂಸದ ಈರಣ್ಣ ಕಡಾಡಿ ಭಾಗವಹಿಸಿ ಮಾಜಿ ಸಹಕಾರ ಸಚಿವ ಸುಭಾಸ ದೇಶಮುಖ ಅವರ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು. ಪಶ್ಚಿಮ ಮಹಾರಾಷ್ಟ್ರ ಭಾಗದ ಸೋಲ್ಲಾಪೂರ ಹಾಗೂ ದಾರಾಶಿವ ಎರಡು ಜಿಲ್ಲೆಗಳ 8 ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿ ಹೊತ್ತು ಸಂಸದ ಈರಣ್ಣ ಕಡಾಡಿ ಅವರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಮಾಜಿ ಸಚಿವ ರಾವ್ ಸಾಹೇಬ್ ದಾನ್ವೆ, ಸೊಲ್ಲಾಪುರ ದಕ್ಷಿಣ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಭಾಸ ದೇಶಮುಖ, ರಾಜಕುಮಾರ ಪಾಟೀಲ, ಹನುಮಂತ್ ಕುಲಕರ್ಣಿ, ಮನೀಶ್ ದೇಶಮುಖ್ ಸಂಪತ್ತು ಮೋರ್, ಡಾ.ಚಂಗೋಡ ಹಾವಿನಾಲೆ, ಅನುಪ್ ಮೋರೆ, ಸ್ಥಳೀಯ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.


Spread the love

About inmudalgi

Check Also

ಶಿಕ್ಷಣವು ಕೇವಲ ಪುಸ್ತಕದ ಅಕ್ಷರಗಳಲ್ಲ, ಭವಿಷ್ಯ ನಿರ್ಮಾಣದ ಅಡಿಗಲ್ಲು: ಅರಿಹಂತ ಬಿರಾದಾರ ಪಾಟೀಲ

Spread the love ಬೆಟಗೇರಿ: ಈ ಪ್ರಸಕ್ತ ವರ್ಷ ನಮ್ಮ ಗುರಿ ಶೇಕಡಾ ನೂರರಷ್ಷು ಎಸ್‍ಎಸ್‍ಎಲ್‍ಸಿ ಫಲಿತಾಂಶ ಮಾಡಬೇಕೆಂಬ ಭರವಸೆಯಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ