ಮೂಡಲಗಿ: ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕøತ ಇಲಾಖೆಯಿಂದ “ಸುವರ್ಣ ಮಹೋತ್ಸವ” ಪ್ರಶಸ್ತಿಗೆ ಭಾಜನರಾದ ಬಂಡಿಗಣಿಯ ದಾಸೋಹ ರತ್ನ ಚಕ್ರವರ್ತಿ ದಾನೇಶ್ವರ ಶ್ರೀಗಳನ್ನು ಅರಂಭಾವಿ-ಸಂಗನಕೇರಿಯ ಶ್ರೀ ಚಕ್ರವರ್ತಿ ಕುರಿ ಸಂಗೋಪನೆ ಮತ್ತು ಉಣ್ಣಿ ಉತ್ಪಾದಕರ ಸಹಕಾರಿ ಸಂಘ ಮತ್ತು ಅರಭಾವಿ ಶ್ರೀ ಚಕ್ರವರ್ತಿ ದಾನೇಶ್ವರ ಕೃಪಾ ಸಂಚಾರಿ ಕುರುಬರ ಕುರಿ ಸಂಗೋಪನೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳು ಸತ್ಕರಿಸಿ ಗೌರವಿಸಿದರು.
ಶ್ರೀ ಚಕ್ರವರ್ತಿ ಕುರಿ ಸಂಗೋಪನೆ ಮತ್ತು ಉಣ್ಣಿ ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ಅಲ್ಲಪ್ಪ ಹಾಲಪ್ಪ ಗಣೇಶವಾಡಿ, ಉಪಾಧ್ಯಕ್ಷ ಸಿದ್ದು ಮಲ್ಲಪ್ಪ ಮಾಯಣ್ಣವರ, ನಿರ್ದೇಶಕರಾದ ದುಂಡಪ್ಪ ಸತ್ತಿಗೇರಿ, ದುಂಡಪ್ಪ ಚವರದಾರ, ದುಂಡಪ್ಪ ಒಬ್ಬಟ್ಟಿಗೆ , ಮಲ್ಲಪ್ಪ ಕೊಳದೂರು ಮತ್ತು ಶ್ರೀ ಚಕ್ರವರ್ತಿ ದಾನೇಶ್ವರ ಕೃಪಾ ಸಂಚಾರಿ ಕುರುಬರ ಕುರಿ ಸಂಗೋಪನೆ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಪದಾಧಿಕಾರಿಗಳು ಮತ್ತಿತರರು ಇದ್ದರು.
