ಮೂಡಲಗಿ : ಸಂಪನ್ಮೂಲ ವಿದ್ಯಾರ್ಥಿಗಳು ನವಸಮಾಜದ ಕಣ್ಣುಗಳು ಇದ್ದಂತೆ ಮತ್ತು ವಿದ್ಯಾರ್ಥಿಗಳು ಸೃಜನಶೀಲ ಸಂಪನ್ಮೂಲ ಕೌಶಲ್ಯಗಳನ್ನು ಹೊಂದುವದರ ಜೊತೆಗೆ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ತಮ್ಮ ಕುಟುಂಬಗಳ ಸಂರ್ವಾಂಗೀಣ ಬೆಳವಣಿಗೆ ಮಾಡಿಕೊಳ್ಳುವದರೊಂದಿಗೆ ದೇಶದ ಆರ್ಥಿಕತೆಯನ್ನು ಸುಧಾರಿಸುತ್ತಾರೆ ಎಂದು ಮೂಡಲಗಿಯ ಆರ್.ಡಿ.ಎಸ್. ಪಿಯು ಕಾಲೇಜಿನ ಉಪನ್ಯಾಸಕರಾದ ಸಂಗಪ್ಪ ಕುಂಬಾರ ಹೇಳಿದರು.
ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಸಮಾಜಕಾರ್ಯ ಪದವಿ ಮಹಾವಿದ್ಯಾಲಯದ ಆಯ್.ಕ್ಯೂ.ಎ.ಸಿ. ಘಟಕದಡಿಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳು ಎಂಬ ವಿಷಯದ ಮೇಲೆ ಮಾತನಾಡಿ ದೇಶದ ಸಿರಿವಂತ ವ್ಯಕ್ತಿಗಳು ಮೊದಲು ಪ್ರಾರಂಭಿಕ ಜೀವನದಲ್ಲಿ ಬಡತನ ಅನುಭವಿಸಿ ನಂತರ ತಮ್ಮ ವಿಶೇಷ ಮತ್ತು ವಿಶಿಷ್ಟ ಸೃಜನಶೀಲ ಕೌಶಲ್ಯಗಳನ್ನು ಸಂಪನ್ಮೂಲಗಳಾಗಿ ಬಳಿಸಿಕೊಂಡು ತಮ್ಮ ಆರ್ಥಿಕತೆ ಬೆಳವಣಿಗೆ ಜೊತೆಗೆ ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಅಂತಹವರ ಜೀವನದ ತತ್ವಗಳನ್ನು ವಿದ್ಯಾರ್ಥಿ ಜೀವನದಲ್ಲಿ ರೂಢಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದರು.
ಉಪನ್ಯಾಸಕ ಮಲ್ಲಪ್ಪ ಪಾಟೀಲ ಮಾತನಾಡಿ ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ವೃತ್ತಿ ಜೀವನದ ಕೌಶಲ್ಯಗಳು ಮತ್ತು ವಿವಿಧ ವಿಷಯಗಳ ಸಂಪನ್ಮೂಲ ಕೌಶಲ್ಯಗಳನ್ನು ಬೆಳಸಿಕೊಳ್ಳುವುದು ಅವಶ್ಯವಿದೆ ಎಂದರು.
ಕಾಲೇಜು ಪ್ರಾಚಾರ್ಯ ಸತೀಶ ಗೋಟೂರೆ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ ವಿದ್ಯಾರ್ಥಿಗಳಿಗೆ ಮಾನವ ಸಂಪನ್ಮೂಲಗಳ ಅರಿವು ಜ್ಞಾನ ಇಂದಿನ ಜಾಗತಿಕ ವಿದ್ಯಮಾನಕ್ಕೆ ಅವಶ್ಯಕವಾಗಿದೆ ಕೇವಲ ವಿದ್ಯಾರ್ಜನೆ ಮಾನವ ಸಂಪನ್ಮೂಲ ಆಗಲಾರದು ಅದರ ಜೊತೆಗೆ ಜೀವನ ನಿರ್ವಹಣೆ ಮತ್ತು ಕೌಶಲ್ಯಗಳು ಸಂಪನ್ಮೂಲಗಳ ಭಾಗವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ಪ್ರಶಾಂತ ಮಾವರಕರ, ಸಂಜೀವ ಮಂಟೂರ, ಗೀತಾ ಹಿರೇಮಠ ರಶ್ಮೀ ಕಳ್ಳಿಮನಿ, ಸುನೀಲ ಸತ್ತಿ ಬಿ.ಎಂ. ಕಬ್ಬೂರೆ ಇತರರು ಹಾಜರಿದ್ದರು.
ಘಟಕಾಧಿಕಾರಿ ಎಸ್.ಎಸ್. ಪಡದಲ್ಲಿ ಸ್ವಾಗತಿಸಿದರು, ವಿದ್ಯಾರ್ಥಿನಿ ವಾಣಿ ಕುಲಕರ್ಣಿ ನಿರೂಪಿಸಿದರು ವಿದ್ಯಾರ್ಥಿನಿ ರಶ್ಮೀತಾ ಗಿರಡ್ಡಿ ವಂದಿಸಿದರು.