ಅಯ್ಯಪ್ಪಸ್ವಾಮಿ ಮಹಾಪೂಜೆ
ತೊಂಡಿಕಟ್ಟಿ; ಇಲ್ಲಿಯ ಓಂ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮೀತಿಯಿಂದ 27ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಹಾಗೂ ನಿರಂತರವಾಗಿ 18ನೇ ವರ್ಷ ಶಬರಿ ಮಲೈ ಯಾತ್ರೆ ಕೈಗೋಳ್ಳುತ್ತಿರುವ ಗರುಸ್ವಾಮಿಗಳಿಗೆ ಸನ್ಮಾನ ಕಾರ್ಯಕ್ರಮ ಬುಧವಾರ ಡಿ.11 ರಂದು ತೊಂಡಿಕಟ್ಟಿ ಕನ್ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜರುಗಲಿದೆ.
ಮಧ್ಯಾಹ್ನ 12-30 ರವರಿಗೆ ಅನ್ನ ಸಂತರ್ಪಣೆ ಮತ್ತು 3ಗಂಟೆಯಿಂದ ವಿವಿಧ ವಾಧ್ಯಮೇಳಗೊಳೊಂದಿಗೆ ಶ್ರೀ ಅಯ್ಯಪ್ಪಸ್ವಾಮಿ ಭಾವಚಿತ್ರದ ಮೇರವಣಿಗೆ ಜರುಗುವುದು. ಸಂಜೆ 7 ಗಂಟೆಯಿಂದ ಶಾಲಾ ಆವರಣದಲ್ಲಿ ಶ್ರೀ ಅಯ್ಯಪ್ಪಸ್ವಾಮಿಜಿ, ಶ್ರೀ ಗಣಪತಿ ಹಾಗೂ ಷಣ್ಮಖ ದೇವರ ಮಹಾಪೂಜೆ ಜಗುವುದು ಸನ್ನಿಧಾನದ ಗುರುಸ್ವಾಮಿ ಶಂಕರ ಹೊಸಕೋಟಿ ಗುರುಸ್ವಾಮಿಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.