ಅಪಾರ ಜನಸಾಗರ ಮಧ್ಯೆ ಜರುಗಿದ ಅವಧೂತ ಗಾಳೇಶ್ವರ ಮಹಾರಥೋತ್ಸವ
ತೊಂಡಿಕಟ್ಟಿ: ರಾಮದುರ್ಗ ತಾಲೂಕಿನ ತೊಂಡಿಕಟ್ಟಿ ಗ್ರಾಮದಲ್ಲಿ ಶ್ರೀ ಅವಧೂತ ಗಾಳೇಶ್ವರ ಮಹಾಸ್ವಾಮಿಗಳ 80ನೇ ಪುಣ್ಯಾರಾಧನೆ ನಿಮಿತ್ಯ ಮಂಗಳವಾರದಂದು ಶ್ರೀ ಅವಧೂತ ಗಾಳೇಶ್ವರ ಸ್ವಾಮೀಗಳ ಮಹಾರಥೋತ್ಸವ ಅಪಾರ ಜನಸಾಗರ ಮಧ್ಯೆ ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ವೆಂಕಟೇಶ್ವರ ಮಹಾರಾಜರ ಸಾನ್ನಿಧ್ಯದಲ್ಲಿ ಜರುಗಿತು.
ಶ್ರೀ ಅವಧೂತ ಗಾಳೇಶ್ವರ ಮಹಾಸ್ವಾಮಿಗಳ 80ನೇ ಪುಣ್ಯಾರಾಧನೆ ನಿಮಿತ್ಯ ಮಂಗಳವಾರದಂದು ಮುಂಜಾನೆ ಶ್ರೀಗಳ ಮೂರ್ತಿಗೆ ಅಭಿಷೇಕ ವಿಷೇಶ ಪೂಜೆ ಅಲಂಕಾರ ಜರುಗಿತು. ಅಪಾರ ಭಕ್ತ ಸಮೂಹವು ತಮ್ಮ ಇಷ್ಠಾರ್ಥ ಇಡೇರಿಕೆಗಾಗಿ ಧಿರ್ಘದಂಡ ನಮಸ್ಕಾರ ಸೇವೆಯನ್ನು ತಮ್ಮ ತಮ್ಮ ಮನೆಯಿಂದ ಸಲ್ಲಿಸಿದರು.
ಮಧ್ಯಾಹ್ನ ಶ್ರೀ ವೆಂಕಟೇಶ್ವರ ಮಹಾರಾಜರಿಂದ ಗ್ರಾಮದ ಪ್ರಮುಖ ರಸ್ತೆಗಳ ಮೆರವಣಿಗೆಯು ವಿವಿಧ ವಾಧ್ಯಮೇಳಗಳೋಂದಿಗೆ ಜರುಗಿತು.
ತಳಿಳು ಥೋರಣಗಳಿಂದ ಶೃಂಗರಿಸಿದ ಶ್ರೀ ಅವಧೂತ ಗಾಳೇಶ್ವರ ಮಹಾರಥೋತ್ಸವಕ್ಕೆ ಶ್ರೀ ವೆಂಕಟೇಶ್ವರ ಮಹಾರಾಜರು ರಥಕ್ಕೆ ಪೂಜೆ ಸಲ್ಲಿಸಿ ರಥದಲ್ಲಿ ಆಸಿನರಾರದ ಬಳಿಕ ಅಪಾರ ಜನ ಸಮೂಹಗಳ ಜಯಘೋಷನೆಯಲ್ಲಿ ಶ್ರೀ ಮಠದ ಮುಂಬಾಗದಿಂದ ಆವರಣದಲ್ಲಿ ಇರುವ ಪಾದಗಟ್ಟೆವರಿಗೆ ಸಾಗಿ ಪಾದಗಟ್ಟೆಗೆ ಪೂಜೆ ಸಲ್ಲಿಸಿ ಮರಳಿ ಶ್ರೀ ಮಠದ ಮುಂಬಾಗದವರಿಗೆ ರಥೋತ್ಸವ ಜರುಗಿತು.
ರಥೋತ್ಸವಕ್ಕೆ ಅಪಾರ ಭಕ್ತ ಸಮೂಹ ಬೆಂಡು, ಬೆತ್ತಾಸು, ಬಾಳೆ ಹಣ್ಣು, ಖಾರಿಕು ಸಮರ್ಪಿಸಿ ಪುನಿತರಾದರು