ಮೂಡಲಗಿ ಲಯನ್ಸ್ ಕ್ರಿಕೆಟ್ ಚಾಂಪಿಯನ್
ಮೂಡಲಗಿ: ಲಯನ್ಸ್ ಕ್ಲಬ್ ರೀಜಿನಲ್ ಲೇವಲ್ ಕ್ರೀಕೆಟ್ ಟೂರ್ನಿಯಲ್ಲಿ ಆತಿಥ್ಯವಹಿಸಿದ್ದ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ತಂಡವು ಚಾಂಪಿಯಿನ್‌ಷಿಪ ಪಡೆದುಕೊಂಡಿತು. ಜಮಖಂಡಿಯ ಲಯನ್ಸ್ ಕ್ಲಬ್ ತಂಡವು ರನ್ನರ್ಸ್ ಅಪ್ ಟ್ರೋಪಿಗೆ ಭಾಜನವಾಯಿತು.
ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಎರಡು ದಿನಗಳವರೆಗೆ ಜರುಗಿದ ಟೂರ್ನಿಯಲ್ಲಿ ಬಾಗಲಕೋಟ, ಜಮಖಂಡಿ, ಮಹಾಲಿಂಗಪೂರ ಮತ್ತು ಆತಿಥ್ಯವಹಿಸಿಕೊಂಡಿದ್ದ ಮೂಡಲಗಿ ಲಯನ್ಸ್ ಕ್ಲಬ್ ತಂಡಗಳು ಲೀಗ್ ಕಮ್ ನಾಕೌಟ್ ಪಂದ್ಯವಗಳನ್ನಾಡಿದರು.
ವಯಕ್ತಿಕ ಟ್ರೋಪಿಗಳು: ಟೂರ್ನಿಯ ಅತ್ಯುತ್ತಮ ಬ್ಯಾಟ್ಸ್‌ಮನ್ ಮತ್ತು ಟೂರ್ನಿಯ ಸರ್ವೋತ್ತಮ ಆಟಗಾರ ಎರಡೂ ಟ್ರೋಪಿಗಳಿಗೆ ಮೂಡಲಗಿ ತಂಡದ ನಾಯಕ ಡಾ. ಯಲ್ಲಾಲಿಂಗ ಮುಳವಾಡ ಭಾಜನರಾದರು. ಉತ್ತಮ ಬೌಲರ ಜಮಖಂಡಿಯ ಡಾ. ವಿದ್ಯಾಧರ ಪತ್ತಾರ, ಉತ್ತಮ ವೀಕೆಟ್ ಕೀಪರ್ ಮೂಡಲಗಿಯ ಗಿರಿಶ ಆಸಂಗಿ, ಉತ್ತಮ
ಕ್ಯಾಚರ್ ಮಹಾಲಿಂಗಪೂರದ ಡಾ. ಅನೂಪ ಹಂಚಿನಾಳ, ಉತ್ತಮ ಪೀಲ್ಡರ್ ಮೂಡಲಗಿ ತಂಡದ ಶಿವಾನಂದ ಗಾಡವಿ ಟ್ರೋಪಿಗಳನ್ನು ಪಡೆದುಕೊಂಡರು.
ಮುಖ್ಯ ಅತಿಥಿ ಗೋವಾದ ವಿವೇಕ ನಾಡಕರ್ಣಿ ವಿಜೇತ ತಂಡಗಳಿಗೆ ಟ್ರೋಪಿ ವಿತರಿಸಿ ಮಾತನಾಡಿದ ಅವರು ‘ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಜೀವನ ಉತ್ಸಾಹ ವೃದ್ಧಿಯಾಗುತ್ತದೆ ಮತ್ತು ಆಟಗಾರರಲ್ಲಿ ಪರಸ್ಪರ ಪ್ರೀತಿ ಬೆಳೆಯುತ್ತದೆ’ ಎಂದರು.
ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ನಿರ್ದೇಶಕ ಸಂದೀಪ ಸೋನವಾಲಕರ, ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ಅಧ್ಯಕ್ಷ ಸಂಜಯ ಮೋಕಾಶಿ, ಕಾರ್ಯದರ್ಶಿ ಸೋಮಶೇಖರ ಹಿರೇಮಠ, ಖಜಾಂಚಿ ಕೃಷ್ಣಾ ಕೆಂಪಸತ್ತಿ, ಜಮಖಂಡಿಯ ಎಚ್.ಆರ್. ಮಹಾರಡ್ಡಿ, ಪಿ.ಎಸ್. ಚೌರಡ್ಡಿ, ವಿ.ಬಿ. ಕಟಗಿ, ಡಾ. ಅಶೋಕ ದಿನ್ನಿಮನಿ, ಎನ್.ಟಿ. ಪಿರೋಜಿ, ಈರಣ್ಣ ಕೊಣ್ಣೂರ, ಡಾ. ಎಸ್.ಎಸ್. ಪಾಟೀಲ, ಶಿಕ್ಷಕರಾದ ಶಿವಾನಂದ ಕಿತ್ತೂರ, ಮಹಾವೀರ ಸಲ್ಲಾಗೋಳ, ಮಲ್ಲಪ್ಪ ಖಾನಗೌಡರ, ಪುಲಕೇಶ ಸೋನವಾಲಕರ, ಪ್ರಮೋದ ಪಾಟೀಲ, ಮಹಾಂತೇಶ ಹೊಸೂರ ವೇದಿಕೆಯಲ್ಲಿದ್ದರು.
ಎಸ್. ಎಸ್.ಕಿತ್ತೂರ ಮತ್ತು ಮಹಾವೀರ ಸಲ್ಲಾಗೋಳ ನಿರೂಪಿಸಿದರು.