ನಾಗಲಿಂಗೇಶ್ವರ ಸೊಸಾಯಿಟಿಗೆ ಶಿವಬಸು ಹಂದಿಗುಂದ ಅಧ್ಯಕ್ಷರಾಗಿ ಆಯ್ಕೆ
ಮೂಡಲಗಿ: ಇಲ್ಲಿಯ ನಾಗಲಿಂಗೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಮುಂದಿನ ಐದು ವರ್ಷದ ಅವಧಿಗೆ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಿವಬಸು ಬಾ. ಹಂದಿಗುಂದ, ಉಪಾಧ್ಯಕ್ಷರಾಗಿ ಪರಶುರಾಮ ಲ. ಝಂಡಕುರಬರ ಅವಿರೋಧವಾಗಿ ಆಯ್ಕೆಯಾಗಿದ್ದಾ ರೆಂದು ಚುನಾವಣಾ ಅಧಿಕಾರಿ ಮತ್ತು ತಾಲೂಕಾ ಸಹಕಾರ ಅಭಿವೃದ್ಧಿ ಅಧಿಕಾರಿ ಎಸ್.ಬಿ.ಬಿರಾದಾರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸೊಸಾಯಿಟಿಯ ನಿರ್ದೇಶಕರಾದ ದಾನಯ್ಯ ಹಿರೇಮಠ, ರಂಗಪ್ಪ, ಕಪ್ಪಲಗುದ್ದಿ, ಪೀರು ಝಂಡಕುರಬರ, ಸಂಜು ಕದಂ, ಪರಸಪ್ಪ ತಿಗಡಿ. ಗಂಗಪ್ಪ ಕಳಸನ್ನವರ, ಶ್ರೀಮತಿ ಬಾಳವ್ವ, ಸುಲ್ತಾನಪುರ, ಶ್ರೀಮತಿ ಸಿದ್ದವ್ವ ಹಂದಿಗುಂದ, ಕಾನೂನು ಸಲಹೆಗಾರ ರಾಘವೇಂದ್ರ ಕುಳ್ಳೂರ, ಪುಧಾನಕಾರ್ಯದರ್ಶಿ ಮಹಾದೇವ, ಮಲಗೌಡರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಆಡಳಿ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಸತ್ಕರಿಸಿ ಗೌರವಿಸಿದರು.