ವರದಿ : ಈಶ್ವರ ಢವಳೇಶ್ವರ
ದೇಶ ವಿರೋಧಿ ಚಟುವಟಿಕೆಗಳ ವಿರುದ್ಧ ಸಮರ ಹಾಗೂ ಪಾಲಕರ ಸಭೆ ಸಮಾರಂಭ* .
ಮೂಡಲಗಿ :- ನಗರದ ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ನಡೆದ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಿಪಿಐ ವೆಂಕಟೇಶ್ ಮುರನಾಳ ಮಾತನಾಡಿ ಪೋಷಕರು ಯಾವುದೇ ರೀತಿಯ ಆಮಿಷಕ್ಕೆ ಒಳಗಾಗಿದೆ ಮಕ್ಕಳ ಪ್ರಯತ್ನದ ಮೇಲೆ ನಂಬಿಕೆ ಇಟ್ಟು ಪ್ರಶಿಕ್ಷಣಾರ್ತಿಗಳ ಯಶಸ್ಸಿಗೆ ಪ್ರೋತ್ಸಾಹ ನೀಡಬೇಕು, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವ ದೇಶ ವಿರೋಧಿ ಸಮಾಜ ಘಾತಕ ಚಟುವಟಿಕೆಗಳಿಂದ ಪ್ರೇರೆಪಿತರಾಗದೆ ಜನನಿ ಜನ್ಮಭೂಮಿ ಸ್ವರ್ಗಕ್ಕೂ ಮಿಗಿಲಾದ್ದು ಅದಕ್ಕೆ ಧಕ್ಕೆ ತರುವ ಕಾರ್ಯಸಲ್ಲದು ಎಂದರು.
ದೃಢ ನಿರ್ಧಾರ,ಆತ್ಮವಿಶ್ವಾಸ,ಸತತ ಪ್ರಯತ್ನ ಪ್ರಶಿಕ್ಷಣಾರ್ತಿಗಳ ಗೆಲುವಿನ ಹಿಂದಿನ ರಹಸ್ಯ ಎಂದು ಅತಿಥಿ ಸ್ಥಾನ ವಹಿಸಿಕೊಂಡ ಸ್ವಾಮಿ ವಿವೇಕಾನಂದ ಕ್ಯಾರಿಯರ್ ಅಕಾಡಮಿ ಅಧ್ಯಕ್ಷ ಹಾಗೂ ವಕೀಲರು ಆನಂದ್ ಗಿರೇನ್ನವರ ಹೇಳಿದರು.
ಕಾರ್ಯಕ್ರಮದಲ್ಲಿ ಲಾವಣ್ಯ ಕೊಣ್ಣೂರ ಪಾಲಕರ ಪರವಾಗಿ ಮಾತನಾಡಿ ಮಕ್ಕಳಲ್ಲಿ ಉಂಟಾದ ಬದಲಾವಣೆ ಕಂಡು ತರಬೇತಿ ಕೇಂದ್ರದ ಸಂಸ್ಕೃತಿಯನ್ನು ಪ್ರಶಂಸಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಕರುನಾಡು ಸೈನಿಕ ತರಬೇತಿ ಕೇಂದ್ರದ ಸಂಚಾಲಕರಾದ ಶಂಕರ ತುಕ್ಕನ್ನವರ ಮಕ್ಕಳ ತರಬೇತಿಯ ಮಧ್ಯದಲ್ಲಿ ಪೋಷಕರ ಬೇಟಿ ಪ್ರಶಿಕ್ಷಣಾರ್ತಿಗಳಿಗೆ ಸಂಜೀವಿನಿ ಇದ್ದಂತೆ ಎಂದು ಪ್ರಾಸ್ತಾವಿಕ ಮಾಡಿದರು.
ಕಾರ್ಯಕ್ರಮದಲ್ಲಿ ಪೋಷಕರು,ಪ್ರಶಿಕ್ಷಣಾರ್ತಿಗಳು ಉಪಸ್ಥಿತರಿದ್ದರು ಶಿಕ್ಷಕಿ ಹೀನಾ ಪಟೇಲ್ ನಿರೂಪಿಸಿ ವಂದಿಸಿದರು.