ಫೆ. 10 ಮತ್ತು 11 ರಂದು ಬೆಟಗೇರಿ ಶ್ರೀಯಲ್ಲಮ್ಮದೇವಿ ಜಾತ್ರಾಮಹೋತ್ಸವ
ಬೆಟಗೇರಿ:ಗ್ರಾಮದ ಶ್ರೀರೇಣುಕಾದೇವಿ ದೇವಾಲಯದಲ್ಲಿ ಫೆ.10 ಮತ್ತು ಫೆ.11ರಂದು ಶ್ರೀ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಫೆ.10ರಂದು ಮುಂಜಾನೆ ಮತ್ತು ಸಂಜೆ 7 ಗಂಟೆಗೆ ಸ್ಥಳೀಯ ಶ್ರೀ ರೇಣುಕಾದೇವಿ ದೇವಾಲಯದ ಶ್ರೀ ಯಲ್ಲಮ್ಮದೇವಿಯ ಗದ್ಗುಗೆ ಪೂಜೆ, ನೈವೇಧ್ಯ ಸಮರ್ಪನೆ, ಸಾಯಂಕಾಲ 5 ಗಂಟೆಗೆ ಪುರದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವ ಕಾರ್ಯಕ್ರಮಗಳು ನಡೆಯಲಿದೆ.
ಫೆ.11ರಂದು ಇಲ್ಲಿಯ ಶ್ರೀ ರೇಣುಕಾದೇವಿ ದೇವಾಲಯದಲ್ಲಿ ಶ್ರೀದೇವಿಯ ಗದ್ಗುಗೆ ಮಹಾಪೂಜೆ, ಮಹಾಭಿಷೇಕ, ಉಡಿ ಮತ್ತು ಹಡಲಗಿ ತುಂಬುವದು, ನೈವೇಧ್ಯ ಸಮರ್ಪನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.
ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ಹಾಲಿ ಮತ್ತು ಮಾಜಿ ಗ್ರಾಪಂ, ತಾಪಂ, ಜಿಪಂ ಸದಸ್ಯರು, ಗಣ್ಯರು, ರಾಜಕೀಯ ಮುಖಂಡರು ಮುಖ್ಯಅತಿಥಿಗಳಾಗಿ, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಶ್ರೀ ರೇಣುಕಾದೇವಿ ಜಾತ್ರಾ ಮಹೋತ್ಸವ ಸಮಿತಿ ಸದಸ್ಯರು ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಸ್ಥಳೀಯ ಶ್ರೀ ರೇಣುಕಾದೇವಿ ಜಾತ್ರಾ ಮಹೋತ್ಸವ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.