ನಾಗನೂರ ಅರ್ಬನ್ ಬ್ಯಾಂಕಿನಿಂದ 1ಲಕ್ಷ ರೂ. ಚೆಕ್ ವಿತರಣೆ
ಬೆಟಗೇರಿ: ನಾಗನೂರು ಅರ್ಬನ್ ಕ್ರೆಡಿಟ್ ಸೌಹಾರ್ದ ಬ್ಯಾಂಕ್‍ನ ಬೆಟಗೇರಿ ಶಾಖೆಯ ವತಿಯಿಂದ ಶೇರುದಾರ ಬೆಟಗೇರಿ ಗ್ರಾಮದ ಶೇರುದಾರ ವಿಠಲ ಸಾತಪ್ಪ ದಂಡಿನ ಇವರು ಇತ್ತೀಚೆಗೆ ನಿಧನರಾದುದರಿಂದ ಅವರ ತಾಯಿ ನಿಂಗವ್ವ ಸಾತಪ್ಪ ದಂಡಿನ ಅವರಿಗೆ ಸಹಕಾರಿ ಸುರಕ್ಷಾ ಪರಿಹಾರ ನಿಧಿಯಿಂದ 1ಲಕ್ಷ ರೂ. ಚೆಕ್‍ನ್ನು ಇತ್ತೀಚೆಗೆ ವಿತರಿಸಲಾಯಿತು.
ಬೆಟಗೇರಿ ಗ್ರಾಮದ ಬ್ಯಾಂಕಿನ ಕಚೇರಿಯಲ್ಲಿ ಇತ್ತೀಚೆಗೆ ಪ್ರಧಾನ ಕಛೇರಿ ಆಡಳಿತ ಮಂಡಳಿ ಸಂಸ್ಥಾಪಕ ಅಧ್ಯಕ್ಷ ಬಸವರಾಜ ತಡಸನವರ ಅವರು ಚೆಕ್ ವಿತರಿಸಿ ಮಾತನಾಡಿ, ನಾಗನೂರ ಅರ್ಬನ್ ಬ್ಯಾಂಕ್‍ನ ಯಾವುದೇ ಶಾಖೆಯಲ್ಲಿ ರೈತರು, ಉದ್ಯೋಗಿಗಳು ಶೇರುದಾರರಾಗಿದ್ದು, ಅವರಿಗೆ ವಿಮೆ ಸೌಲಭ್ಯ ನೀಡಲಾಗುತ್ತದೆ. ಶೇರುದಾರರು ಅಕಾಲಿಕವಾಗಿ ನೀಧನಹೊಂದಿದರೆ ಅವರ ಪತ್ನಿ-ಮಗ-ಸಂಬಂಧಿಕರಿಗೆ ಮರಣೋತ್ತರ ನಿಧಿಯಿಂದ ಮೊತ್ತ ನೀಡಲಾಗುತ್ತದೆ ಎಂದು ಹೇಳಿದರು.
ಈ ವೇಳೆ ನಾಗನೂರ ಅರ್ಬನ್ ಬ್ಯಾಂಕಿನ ಮುಖ್ಯ ಶಾಖೆಯ ಆಡಳಿತ ಮಂಡಳಿ ಸದಸ್ಯರು, ಸ್ಥಳೀಯ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಮಲ್ಲಪ್ಪ ಕಂಬಿ, ಸದಸ್ಯರಾದ ಈಶ್ವರ ಮುಧೋಳ, ಕಲ್ಲಪ್ಪ ದಾಸಂಗಳಿ, ಪತ್ರೆಪ್ಪ ದೇಯಣ್ಣವರ, ರವಿ ಉಪ್ಪಾರ, ರಾಜು ದಂಡಿನ, ಬಾಳಪ್ಪ ಬುಳ್ಳಿ, ಸುಭಾಷ ಹಾವಾಡಿ, ಹಣಕಾಸು ಅಭಿವೃದ್ಧಿ ಅಧಿಕಾರಿಗಳು, ಶಾಖಾ ವ್ಯವಸ್ಥಾಪಕ ವೀರಭದ್ರ ದೇಯಣ್ಣವರ, ಈರಪ್ಪ ಬಳಿಗಾರ, ಬಸಮಪ್ಪ ಪೂಜೇರ, ಸಹಕಾರಿಯ ಸಿಬ್ಬಂದಿ, ಪಿಗ್ಮಿ ಸಂಗ್ರಕಾರರು, ಗ್ರಾಹಕರು ಇದ್ದರು.