Breaking News
Home / ಬೆಳಗಾವಿ / ನಾಗೇಂದ್ರ ಚೌಗಲಾ ಅವರಿಗೆ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ

ನಾಗೇಂದ್ರ ಚೌಗಲಾ ಅವರಿಗೆ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ

Spread the love

ನಾಗೇಂದ್ರ ಚೌಗಲಾ ಅವರಿಗೆ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪ್ರಶಸ್ತಿ

ಖಾನಾಪುರ ತಾಲೂಕಿನ ಕಾಮಶಿನಕೊಪ್ಪ ಗ್ರಾಮದ . ಶ್ರೀಮತಿ ರುದ್ರವ್ವ ಹಾಗೂ ಬರಮಪ್ಪ ಇವರ ಮೂರನೇ ಮಗನಾಗಿ ಜನಿಸಿದ ನಾಗೇಂದ್ರರವರು ಕರ್ನಾಟಕ ಗ್ರಾಮೀಣ ಅಭಿವೃದ್ಧಿ ಸಂಘದ ಅಧ್ಯಕ್ಷ ರಾಗಿ ಕಳೆದ 18 ವರ್ಷಗಳಿಂದ ಕ್ರೀಡೆ ಕಲೆ ಸಾಹಿತ್ಯ ಸಾಂಸ್ಕೃತಿಕ ಜನಪದ ಕಾರ್ಯಕ್ರಮಗಳು, ನಿರಂತರ ಯುವ ಸಂಘಟನೆ, ಮಠಮಾನ್ಯಗಳ ಸೇವೆ ಜನ ಜಾಗೃತಿ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು

ಜಿಲ್ಲಾ ಘಟಕ ವಿಜಯಪುರ ಇವರ ವತಿಯಿಂದ
ಮುದ್ದೇಬಿಹಾಳ ಪಟ್ಟಣದ ಶ್ರೀ ಸಿದ್ದೇಶ್ವರ ವೇದಿಕೆ ವ್ಹಿ.ಬಿ.ಸಿ ಹೈಸ್ಕೂಲ ಮೈದಾನದಲ್ಲಿ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ರಾಜ್ಯ ಘಟಕ ಬೆಂಗಳೂರ. ಜಿಲ್ಲಾ ಘಟಕ ವಿಜಯಪುರ ಹಾಗೂ ತಾಲೂಕಾ ಘಟಕ ಮುದ್ದೇಬಿಹಾಳ ಇವರ ಸಹಯೋಗದಲ್ಲಿ ಜರುಗಿದ ಸ್ವಾಮಿ ವಿವೇಕಾನಂದ ರಾಷ್ಷ್ಟ ಹಾಗೂ ರಾಜ್ಯ ಮಟ್ಟದ ಸದ್ಧಾವನಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಾಸಕ ಸಿ.ಎಸ.ನಾಡಗೌಡ (ಅಪ್ಪಾಜಿ) ಪ್ರಶಸ್ತಿ ಪ್ರಧಾನ ಮಾಡಿದರು ವೇದಿಕೆ ಮೇಲೆ ಸುಕ್ಷೇತ್ರ ಸಿದ್ದನಕೋಳ ನಿರಂತರ ದಾಸೋಹ ಹಾಗೂ ಕಲಾ ಪೋಷಕರ ಮಠ ಪ.ಪೂ.ಡಾ// ಶಿವಕುಮಾರ ಮಹಾಸ್ವಾಮಿಗಳು, ಜ್ಯೋತಿಷ ರತ್ನ ಮಠದ ಪೂಜ್ಯಶ್ರೀ ರಾಮಲಿಂಗಯ್ಯ ಸ್ವಾಮೀಜಿ,


ಅಪರ ಜಿಲ್ಲಾಧಿಕಾರಿಗಳಾದ ಸೋಮಲಿಂಗ ಗಣ್ಣೂರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಚಲನಚಿತ್ರ ನಟರಾದ ಗುರುರಾಜ ಹೊಸಕೋಟೆ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಎಸ್ ಜಿ ಲೋಣಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಾ. ಎಸ್ ಬಾಲಾಜಿ, ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಸಿದ್ದಣ್ಣ ದುರದುಂಡಿ, ವಿಜಯಪುರ ಜಿಲ್ಲಾಧ್ಯಕ್ಷರಾದ ಪುಂಡಲೀಕ ಮುರಾಳ, ಮಲ್ಲಿಕಾರ್ಜುನ ಮದರಿ, ಪ್ರಭುಗೌಡ ದೇಸಾಯಿ, ರಾಘವೇಂದ್ರ ಲಂಬುಗೋಳ, ಮಹಾದೇವ ಮೂರಗೋಡ, ಕೇದಾರಲಿಂಗ ಸಂಭೋಜಿ ಸೇರಿದತ್ತೆ. ಸಾವಿರಾರು ಸಂಖ್ಯೆಯಲ್ಲಿ ಯುವ ಸಂಘದ ಪದಾಧಿಕಾರಿಗಳು ಗಣ್ಯರು ಉಪಸ್ಥಿತರಿದ್ದರು.


Spread the love

About inmudalgi

Check Also

ಗೋಕಾಕ್- ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love ಗೋಕಾಕ- ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಈಗೀನಿಂದಲೇ ಅಗತ್ಯ ಕ್ರಮಗಳನ್ನು ಕೈಕೊಳ್ಳುವಂತೆ ಅರಭಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ