Breaking News
Home / ಬೆಳಗಾವಿ / ದೇಶವನ್ನು ಮತ್ತು ಸೈನಿಕರನ್ನು ಗೌರವಿಸುವದು ಅವಶ್ಯಕವಿದೆ – ಸಂತೋಷ ಪಾರ್ಶಿ

ದೇಶವನ್ನು ಮತ್ತು ಸೈನಿಕರನ್ನು ಗೌರವಿಸುವದು ಅವಶ್ಯಕವಿದೆ – ಸಂತೋಷ ಪಾರ್ಶಿ

Spread the love

ದೇಶವನ್ನು ಮತ್ತು ಸೈನಿಕರನ್ನು ಗೌರವಿಸುವದು ಅವಶ್ಯಕವಿದೆ – ಸಂತೋಷ ಪಾರ್ಶಿ

ಮೂಡಲಗಿ : ನಮ್ಮ ದೇಶ ಭಾರತವನ್ನು ರಕ್ಷಣೆ ಮಾಡುವ ಕಾಯಕದೊಂದಿಗೆ ವೀರ ದೀರ ಸೈನಿಕರ ನಿಸ್ವಾರ್ಥ ದೇಶಪ್ರೇಮ, ದೇಶಭಕ್ತಿ ಹೆಮ್ಮೆ ತರವಂತಹ ಸಂಗತಿ ನಾವುಗಳು ಸೈನಿಕರಿಗೆ ಗೌರವ ಕೊಡುವದರೊಂದಿಗೆ ಅವರ ತ್ಯಾಗ & ಬಲಿದಾನವನ್ನು ಸ್ಮರಿಸಿಕೊಳ್ಳುವುದು ಪ್ರತಿಯೊಬ್ಬ ಬಾರತೀಯರ ಕರ್ತವ್ಯ ಎಂದು ಆರ್.ಡಿ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂತೋಷ ಪಾರ್ಶಿ ಅಭಿಪ್ರಾಯಪಟ್ಟರು.

ಪಟ್ಟಣದ ಆರ್.ಡಿ.ಎಸ್. ಸಿ.ಬಿ.ಎಸ್.ಇ. ಶಾಲೆಯಲ್ಲಿ ಹಮ್ಮಿಕೊಂಡ ವೀರಯೋಧರ ಹುತಾತ್ಮ ದಿನದ ಪ್ರಯುಕ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿ ಯೋದರು ಮಳೆ ಬಿಸಿಲು ಚಳಿ ಎನ್ನದೇ ರಾತ್ರಿ ಹಗಲು ಕಷ್ಟಪಟ್ಟು ದೇಶದ ರಕ್ಷಣೆ ಮತ್ತು ನಮ್ಮನ್ನು ರಕ್ಷಣೆ ಮಾಡುತ್ತಾರೆ ಅವರನ್ನು ಸದಾಕಾಲ ಸ್ಮರೀಸುವುದು ಅವಶ್ಯವಿದೆ ಜನ್ಮ ನೀಡಿದ ತಾಯಿತಂದೆಯ ಋಣದ ಜೊತೆಗೆ ಸೈನಿಕರ ಮತ್ತು ಅನ್ನನೀಡಿದ ರೈತರ ಋಣ ಸ್ಮರೀಸುವುದು ಅಗತ್ಯವಿದೆ ಎಂದರು.

ಸಿ.ಬಿ.ಎಸ್.ಇ. ಶಾಲೆಯ ಪ್ರಾಚಾರ್ಯ ಜೋಶಫ್ ಬೈಲಾ ಮಾತನಾಡಿ ದೇಶದ ರಕ್ಷಣೆ ಯಲ್ಲಿ ಸೈನಿಕರು ಬಹುದೊಡ್ಡ ಪಾತ್ರವಹಿಸುತ್ತಾರೆ. ತಮ್ಮ ಕುಟುಂಬ ತೊರದು ನಿಸ್ವಾರ್ಥ ದೇಶಸೇವೆ ಮಾಡುವ ವೀರಯೋದರ ಇದ್ದಾಗಲೇ ಅಖಂಡ ಭಾರತದ ಸೌರ್ವಭೌಮತ್ವಕ್ಕೆ ಸ್ಪೂರ್ತಿ ತುಂಬುತ್ತದೆ. ಸೈನಿಕರು ತಮ್ಮ ಉಸಿರು ಇರುವವರಿಗೊ ದೇಶಸೇವೆ ಈಶ ಸೇವೆ ಎಂದು ಭಾವಿಸುತ್ತಾರೆ ವಿದ್ಯಾರ್ಥಿಗಳು ಸೈನಿಕರಿಗೆ ಗೌರವಕೊಡುವ ನೈತಿಕತೆ ಬೆಳಸಿಕೊಳ್ಳಬೇಕೆಂದರು.

ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷರಾದ ಪೂಜಾ ಪಾರ್ಶಿ ವಹಿಸಕೊಂಡು ಮಾತನಾಡಿ ರೈತ ನಮೆಗಲ್ಲಾ ಅನ್ನ ನೀಡಿದರೆ ಸೈನಿಕರು ನಮ್ಮ ದೇಶದಲ್ಲಿ ಉಸಿರು ಇರುವಂತೆ ಮಾಡುತ್ತಾರೆ ನಮಗಾಗಿ ಪ್ರಾಣ ನೀಡುವ ಅನ್ನದಾತರ ಸೈನಿಕರ ಕಾರ್ಯ ಚಿರಸ್ಮರಣೀಯ ಎಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೂಲಕ ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ವೀರಯೋದರಿಗೆ ದೀಪ ಬೆಳಗುವದರೊಂದಿಗೆ ಮತ್ತು ಮೌನಾಚರಣೆ ಮೂಲಕ ಗೌರವ ಸೂಚಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಸುನೀತಾ ಸುಣದೋಳಿ, ಮೋಶಿನ್ ಜಮಖಂಡಿ ಶಾಲಾ ಸಿಬ್ಬಂದಿವರ್ಗ ಹಾಜರಿದ್ದರು
ಶಿಕ್ಷಕಿ ಸುಹಾಸಿನಿ ಮಗದುಮ್ಮ ನಿರೂಪಿಸಿದರು ಕುಮಾರಿ ನಸೀಮಾ ಕೆಸರಟ್ಟಿ ಸ್ವಾಗತಿಸಿದರು ಶಿಕ್ಷಕ ಅಪ್ಪಣ್ಣಾ ಮಂಗಸೂಳಿ ವಂದಿಸಿದರು.


Spread the love

About inmudalgi

Check Also

ಗೋಕಾಕ್- ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love ಗೋಕಾಕ- ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಈಗೀನಿಂದಲೇ ಅಗತ್ಯ ಕ್ರಮಗಳನ್ನು ಕೈಕೊಳ್ಳುವಂತೆ ಅರಭಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ