ಮೂಡಲಗಿಯ ವಿಶ್ವಭಾರತಿ ಶಿಕ್ಷಣ ಸಂಸ್ಥೆಯ ಶಾಂತಿನಿಕೇತ£ ರೂ. 10 ಲಕ್ಷ ವೆಚ್ಚದ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನಿರ್ಮಿಸುತ್ತಿರುವ ಶಾಲಾ ಕೊಠಡಿ ಕಟ್ಟಡ ನಿರ್ಮಾಣಕ್ಕೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಮೂಡಲಗಿ: ‘ಶಿಕ್ಷಣವು ಮಕ್ಕಳ ಭವಿಷ್ಯ ನಿರ್ಮಿಸುವ ಜೊತೆಗೆ ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಸೋಮವಾರ ಮೂಡಲಗಿ ವಿಶ್ವಭಾರತಿ ಶಿಕ್ಷಣ ಸಂಸ್ಥೆಯ ಶಾಂತಿನಿಕೇತನ ಕನ್ನಡ ಮಾಧ್ಯಮ ಪೂರ್ವ ಹಾಗೂ ಹಿರಿಯ ಪ್ರಾಥಮಿಕ ಶಾಲೆಗೆ ರೂ. 10ಲಕ್ಷ ವೆಚ್ಚದಲ್ಲಿ ಈರಣ್ಣ ಕಡಾಡಿ ಅವರ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನಿರ್ಮಿಸುತ್ತಿರುವ ಶಾಲಾ ಕೊಠಡಿ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ವಿಶ್ವಭಾರತಿ ಶಿಕ್ಷಣ ಸಂಸ್ಥೆಯವರು ಶಿಕ್ಷಣ ಪ್ರಸಾರದಲ್ಲಿ ಶ್ಲಾಘನೀಯ ಕಾರ್ಯ ಮಾಡುತ್ತಿದ್ದಾರೆ ಎಂದರು.
ಮಕ್ಕಳಲ್ಲಿ ಪದವಿ ಮತ್ತು ನೌಕರಿಗಾಗಿ ಶಿಕ್ಷಣವಾಗಬಾರದು, ಶಿಕ್ಷಣದ ಮೂಲಕ ತಾವು ಬೆಳೆಯವುದರೊಂದಿಗೆ ಸಮಗ್ರ ಸಮಾಜ, ಸಂಸ್ಕøತಿಯನ್ನು ಬೆಳೆಸಿದಾಗ ಮಾತ್ರ ಶಿಕ್ಷಣದ ಸಾರ್ಥಕತೆ ಸಾಧ್ಯವಾಗುತ್ತದೆ. ಮನಷ್ಯನ ವಿಕಾಸದಲ್ಲಿ ಶಿಕ್ಷಣದ ಅವಶ್ಯಕತೆ ಇದೆ ಎನ್ನುವುದನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿರುವುದನ್ನು ಸ್ಮರಿಸಿಕೊಂಡರು.
ಬೆಳಗಾವಿ ಜಿಲ್ಲೆಯ ಹೊಸ ತಾಲ್ಲೂಕುಗಳಲ್ಲಿ ಮೂಡಲಗಿಯು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಾಲ್ಲೂಕುವಾಗಿದೆ. ಶೈಕ್ಷಣಿಕವಾಗಿ ಇನ್ನು ಉನ್ನತ ಮಟ್ಟದಲ್ಲಿ ಬೆಳೆಯುವ ನಿಟ್ಟಿನಲ್ಲಿ ಸಂಘ, ಸಂಸ್ಥೆಗಳು ಕಾರ್ಯೋನ್ಮುಖರಾಗಬೇಕು. ತಮ್ಮೊಂದಿಗೆ ಎಲ್ಲ ರೀತಿಯಿಂದ ನಾನು ಇರುತ್ತೇನೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಾಣಾಧಿಕಾರಿ ಅಜಿತ್ ಮನ್ನಿಕೇರಿ ಹಾಗೂ ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಮಾತನಾಡಿ ಶೈಕ್ಷಣಿಕ ಬೆಳವಣಿಗೆಗೆ ರಾಜ್ಯಸಭಾ ಸದಸ್ಯರು ಹೆಚ್ಚು ಮುತುವರ್ಜಿವಹಿಸಿದ್ದು ಶ್ಲಾಘನೀಯವಾಗಿದೆ ಎಂದರು.
ಸಂಸ್ಥೆಯ ಪರವಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮನ್ನಿಕೇರಿ ಹಾಗೂ ಪ್ರಕಾಶ ಮಾದರ ಅವರನ್ನು ಸನ್ಮಾನಿಸಿ ಗೌರವಿಸಿದರು. ಶಿವಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಭೂದಾನಿ ಪಾರವ್ವ ವಂಟಗೂಡಿ, ವಿಶ್ವಭಾರತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಈಶ್ವರ ಮುರಗೋಡ, ನಿವೃತ್ತ ಶಿಕ್ಷಕ ಜಿ.ಕೆ. ಮುರಗೋಡ, ಪ್ರಕಾಶ ಮಾದರ ವೇದಿಕೆಯಲ್ಲಿದ್ದರು.
ಕುರುಹಿನಶೆಟ್ಟಿ ಕೋ.ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಸುಭಾಷ ಬೆಳಕೂಡ, ಉಪಾಧ್ಯಕ್ಷ ಇಸ್ಮಾಯಿಲ ಕಳ್ಳಿಮನಿ, ಬಸವರಾಜ ಬೆಳಕೂಡ, ಸದಾಶಿವ ಬೆಳಕೂಡ, ಈರಪ್ಪ ಬುದ್ನಿ, ಈಶ್ವರ ಮುಘಳಖೋಡ, ಶಂಕರ ಬೆಳಕೂಡ, ಸಮಾಜ ಸೇವಕ ಈರಪ್ಪ ಢವಳೇಶ್ವರ, ಶಿವಾನಂದ ತುಪ್ಪದ, ನಾಗೇಶ ನೇಮಗೌಡರ, ಸಂಸ್ಥೆಯ ಉಪಾಧ್ಯಕ್ಷ ಸುರೇಶ ಬೆಳಕೂಡ, ಚನ್ನಪ್ಪ ವಂಟಗೂಡಿ, ಸುರೇಶ ಮುರಗೋಡ, ರಮೇಶ ವಂಟಗೂಡಿ, ಸಾಗರ ಬೆಳಕೂಡ, ಈರಪ್ಪ ಚಿಪ್ಪಲಕಟ್ಟಿ, ಮಲ್ಲು ವಂಟಗೂಡಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಎಂ.ಎಂ. ನದಾಫ ನಿರೂಪಿಸಿದರು.