ಶಿವನಾಮಸ್ಮರಣೆಯಿಂದ ಮನುಷ್ಯನ ಬದುಕಿಗೆ ನೆಮ್ಮದಿ: ಬಸವರಾಜ ಪಣದಿ
ಬೆಟಗೇರಿ:ಮಹಾಶಿವರಾತ್ರಿ ದಿನದಂದು ಪ್ರತಿಯೊಬ್ಬರೂ ಶಿವನ ಧ್ಯಾನ ಮಾಡಿ, ಶಿವನ ಚೈತನ್ಯ ಶಕ್ತಿಯಿಂದ ವಿಶ್ವ ಸಮೃದ್ಧವಾಗಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶಿವಶರಣ, ಆಧ್ಯಾತ್ಮ ಕಾರ್ಯಕ್ರಮಗಳ ಆಯೋಜಕ ಬಸವರಾಜ ಪಣದಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಬುಧವಾರದಂದು ಹಮ್ಮಿಕೊಂಡಿದ್ದ ಶಿವ ಜಾಗರಣೆ ಮತ್ತು ಮಹಾಪೂಜಾ ಕಾರ್ಯಕ್ರಕ್ಕೆ ಚಾಲನೆ ನೀಡಿ ಮಾತನಾಡಿ, ಶಿವನಾಮಸ್ಮರಣೆ ಮಾಡುವ ಮನುಷ್ಯನ ಬದುಕಿನಲ್ಲಿ ಶಾಂತಿ, ನೆಮ್ಮದಿ ದೊರಕುತ್ತದೆ. ಎಂದರು.
ಸ್ಥಳೀಯ ಎಲ್ಲ ದೇವಾಲಯಗಳಲ್ಲಿ ದೀಪೋತ್ಸವ, ದೇವರ ಗದ್ಗುಗೆಗೆ ಮಹಾಪೂಜೆ, ಮಹಾಅಭಿಷೇಕ, ಸುಮಂಗಲೆಯರಿಂದ ಆರತಿ, ನೈವೇದ್ಯ ಸಮರ್ಪನೆ, ಈಶ್ವರ ದೇವಸ್ಥಾನದಲ್ಲಿ ಶಿವಭಜನೆ ಮತ್ತು ಶಿವನಾಮಸ್ಮರಣೆಯ ಜಾಗರಣೆ, ಮಾಹಾಪೂಜೆ, ಮಹಾಅಭಿಷೇಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದ ಬಳಿಕ ಮಹಾಪ್ರಸಾದ ನಡೆಯಿತು.
ಸ್ಥಳೀಯ ಶಿವಶರಣರಾದ ಬಸಪ್ಪ ದೇಯಣ್ಣವರ, ಚಿಂತಪ್ಪ ಸಿದ್ನಾಳ, ಮಹಾದೇವಪ್ಪ ಬೆಟಗೇರಿ, ಬಸವರಾಜ ನೀಲಣ್ಣವರ, ಸಿದ್ರಾಮ ಪಡಶೆಟ್ಟಿ, ಬಸಪ್ಪ ತೋಟಗಿ, ಇಡಪ್ಪ ರಾಮಗೇರಿ, ಶಿವಲಿಂಗಪ್ಪ ಭಾಗೋಜಿ, ರಾಮಣ್ಣ ಕತ್ತಿ, ಶಿವನಗೌಡ ದೇಯಣ್ಣವರ, ಸತ್ತೆಪ್ಪ ಪೂಜೇರ, ಈಶ್ವರ ದೇವಸ್ಥಾನದ ಅರ್ಚಕ ಗಂಗಪ್ಪ ಹೋಗಾರ, ಚಂದು ಹೂಗಾರ ಸೇರಿದಂತೆ ಸ್ಥಳೀಯ ಭಜನಾ ಮಂಡಳಿ ಸದಸ್ಯರು, ಸ್ಥಳೀಯರು, ಇತರರು ಇದ್ದರು.