Breaking News
Home / ಬೆಳಗಾವಿ / ಜನ ಔಷಧಿ ಕೇಂದ್ರಗಳು ಜನ ಸಾಮಾನ್ಯರ ಆರೋಗ್ಯ ಜೀವನದ ಆಶಾ ಕೇಂದ್ರಗಳಾಗಿವೆ – ರಾಜ್ಯಸಭಾ ಸಂಸದ ಈರಣ್ಣ ಕಡಾಡಿ

ಜನ ಔಷಧಿ ಕೇಂದ್ರಗಳು ಜನ ಸಾಮಾನ್ಯರ ಆರೋಗ್ಯ ಜೀವನದ ಆಶಾ ಕೇಂದ್ರಗಳಾಗಿವೆ – ರಾಜ್ಯಸಭಾ ಸಂಸದ ಈರಣ್ಣ ಕಡಾಡಿ

Spread the love

ಗೋಕಾಕ: ಕೇಂದ್ರ ಸರ್ಕಾರದ ಜನ ಔಷಧಿ ಕೇಂದ್ರಗಳು ಜನ ಸಾಮಾನ್ಯರ ಆರೋಗ್ಯ ಜೀವನದ ಆಶಾ ಕೇಂದ್ರಗಳಾಗಿವೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಶುಕ್ರವಾರ ಮಾ-07 ರಂದು ಪ್ರಧಾನ ಮಂತ್ರಿ ಭಾರತೀಯ ಜನ್ ಔಷಧಿ ಕೇಂದ್ರ ಯೋಜನೆಯ 11ನೇ ವರ್ಷಾಚರಣೆಯ ನಿಮಿತ್ಯ ಗೋಕಾಕ ನಗರದ ಸಾರ್ವಜನಿಕ ತಾಲೂಕಾ ಆಸ್ಪತ್ರೆಯ ಹತ್ತಿರ ಇರುವ ಜನಔಷಧಿ ಮಳಿಗೆಗೆ ಭೇಟಿ ನೀಡಿ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.

ಕಳೆದ 11 ವರ್ಷಗಳಿಂದ ಸುಮಾರು 2000 ಕ್ಕಿಂತ ಹೆಚ್ಚು ಔಷಧಿಗಳು, 300 ಕ್ಕಿಂತ ಹೆಚ್ಚು ಸರ್ಜರಿ ಉಪಕರಣಗಳನ್ನು ವಿತರಿಸುವ ಮೂಲಕ ದೇಶದ ಜನ ಸಾಮಾನ್ಯರ ಸುಮಾರು 30,000 ಕೋಟಿ ರೂ.ಗಳ ಉಳಿತಾಯ ಮಾಡುವಲ್ಲಿ ಈ ಯೋಜನೆ ಸಫಲವಾಗಿದೆ ಮತ್ತು ಬ್ರಾಂಡೆಡ್ ಔಷಧಿಗಳಿಗಿಂತ ಶೇ.50 ರಿಂದ 80 ರಷ್ಟು ಕಡಿಮೆ ದರದಲ್ಲಿ ಜನರಿಗೆ ಔಷಧಿಗಳನ್ನು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಡವರಿಗೆ ಆರೋಗ್ಯ ವೆಚ್ಚವನ್ನು ಕಡಿಮೆ ಮಾಡುತ್ತಿದೆ ಎಂದರು.

ಕಡಿಮೆ ವೆಚ್ಚದಲ್ಲಿ ಔಷಧಿಗಳು ಕೈಗೆಟುಕಿದಾಗ ಔಷಧಿಯ ಗುಣಮಟ್ಟ ಕಡಿಮೆ ಇರಬಹುದೆಂಬ ಜನರ ಮಾನಸಿಕತೆಯನ್ನು ಈ ಔಷಧಿಗಳು ದೂರ ಮಾಡಿವೆ. ಜನ ಔಷಧಿಗಳು ಕೂಡಾ ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಮಾಣೀಕೃತಗೊಂಡಿವೆ. ಮುಂಬರುವ ಎರಡು ವರ್ಷಗಳಲ್ಲಿ ಇನ್ನೂ 10000 ಜನ ಔಷಧಿ ಕೇಂದ್ರಗಳನ್ನು ಸ್ಥಾಪನೆ ಮಾಡುವ ಮೂಲಕ ಜನ ಸಾಮಾನ್ಯರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವಲ್ಲಿ ಇದು ಸಫಲವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಪ್ರಸ್ತುತ 25 ಕೇಂದ್ರಗಳು ಹಾಗೂ ರಾಜ್ಯದಲ್ಲಿ 1400 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಕಾಲ ಘಟ್ಟದಲ್ಲಿ ಜನರು ತಮ್ಮ ಆದಾಯದಲ್ಲಿ ಆರೋಗ್ಯಕ್ಕಾಗಿ ಕಡಿಮೆ ಮಾಡುವ ದೃಷ್ಠಿಯಿಂದ ಇದೊಂದು ಐತಿಹಾಸಿಕ ಮೈಲುಗಲ್ಲಾಗಿದೆ ಎಂದರು.

ತಾಲೂಕಾ ವೈಧ್ಯಾಧಿಕಾರಿ ಡಾ. ಮುತ್ತಣ್ಣ ಕೊಪ್ಪದ, ಪ್ರಮುಖರಾದ ಬಸವರಾಜ ಹುಳ್ಳೇರ, ಲಕ್ಷ್ಮಣ ತಳ್ಳಿ, ಶಕೀಲ ಧಾರವಾಡಕರ, ಲಕ್ಕಪ್ಪ ತಹಶೀಲ್ದಾರ, ಸೋಮಶೇಖರ ಮಗದುಮ್ಮ, ಪ್ರಕಾಶ ವರದಾಯಿ, ಲಕ್ಷ್ಮಣ ಸತ್ತಿಗೇರಿ, ಬಿ.ಎಂ. ಹಿಂಡಿಹೊಳಿ, ಸಾಂಭಶಿವ ಭರಬರೆ, ರಮೇಶ ದೊಡ್ಡಮನಿ, ಆನಂದ ಕೌತನಾಳ. ದೀಲಿಪ್‌ ಮಜಲಿಕರ, ವಿರೂಪಾಕ್ಷ ಗಚ್ಚಿ ಸೇರಿದಂತೆ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.


Spread the love

About inmudalgi

Check Also

ಬಸವರಾಜ ಪಾಟೀಲ ರಾಜ್ಯ ಮಟ್ಟದ ಗುಂಡು ಎಸೆತ ಸ್ಪರ್ಧೆಗೆ ಆಯ್ಕೆ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಸ್.ವೈ.ಸಿ ಶಿಕ್ಷಣ ಸಂಸ್ಥೆಯ ಶ್ರೀ ಸದ್ಗುರು ಯಾಲ್ಲಾಲಿಂಗ ಸ್ವತಂತ್ರ ಪದವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ