ಮಹಿಳೆಯರು ಸ್ವಾಭಿಮಾನದ ಸಂಕೇತ : ಕವಿತಾ ಸಿದ್ದಾಪೂರ
ಮೂಡಲಗಿ : ಮಹಿಳೆಯರು ಸ್ವಾಭಿಮಾನದ ಸಂಕೇತವಾಗಿದ್ದು ಮಹಿಳೆ ತನ್ನ ಸರ್ವಾಗೀಣ ಅಭಿವೃದ್ಧಿಗೆ ನಿರಂತರ ಪ್ರಯತ್ನವನ್ನು ಪ್ರಾಚೀನಕಾಲದಿಂದಲ್ಲೂ ನಡೆಸಿದರೂ ಇಂದಿನವರೆಗೊ ಪರಿಪೂರ್ಣ ಯಶಸ್ಸನ್ನು ಪಡೆದುಕೊಂಡಿಲ್ಲಾ ಇಂದು ವೈಜ್ಞಾನಿಕವಾಗಿ ಜಗತ್ತು ಬೆಳೆಯುತ್ತಿದೆ ಅವಕಾಶಗಳು ಅತ್ಯಧಿಕವಾಗಿ ಹೆಚ್ಚುತ್ತಿದ್ದು ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತೊಡಗಿಕೊಳ್ಳುವುದು ಅವಶ್ಯವಿದೆ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ತಾನು ಅಬಲೆ ಅಲ್ಲ ಸಬಲೆ ಎಂದು ಇಂದಿನ ಸಮಾಜಕ್ಕೆ ಮನದಟ್ಟು ಮಾಡಿಕೊಡುವುದು ಅವಶ್ಯವಿದೆ ಎಂದು ಮೂಡಲಗಿಯ ಆರ್.ಡಿ.ಎಸ್. ಪದವಿ ಕಾಲೇಜಿನ ಉಪನ್ಯಾಸಕಿ ಕವಿತಾ ಸಿದ್ದಾಪೂರ ಅಭಿಪ್ರಾಯ ಅಭಿವ್ಯಕ್ತಪಡಿಸಿದರು.
ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ, ಸಮಾಜಕಾರ್ಯ ಪದವಿ ಮಹಾವಿದ್ಯಾಲಯದ ಎನ್.ಎಸ್.ಎಸ್. ಮತ್ತು ಮಹಿಳಾ ಸಬಲೀಕರಣ ಘಟಕದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ಇಂದು ಮಹಿಳೆಯರ ಮೇಲೆ ಅತಿಯಾದ ದೌರ್ಜನ್ಯಗಳು & ಶೋಷಣೆಗಳು ನಡೆಯುತ್ತಿದ್ದು ಅವುಗಳಿಂದ ರಕ್ಷಣೆಯನ್ನು ಪಡೆಯಲು ಮಹಿಳಾ ಸಂರಕ್ಷಣಾ ಕಾನೂನು ನಿಯಮಗಳನ್ನು ಪ್ರತಿಯೊಬ್ಬ ಮಹಿಳೆ ತಿಳಿದುಕೊಳ್ಳುವುದು ಅವಶ್ಯವಿದೆ ಎಂದರು.
ಅತಿಥಿಗಳಾದ ಕಾಲೇಜು ಉಪನ್ಯಾಸಕಿ ಲಕ್ಷ್ಮೀ ಬೈಲಾ ಮಾತನಾಡಿ ಮಹಿಳಾ ಸಮಾನತೆಗಾಗಿ ಭಾರತ ಸರಕಾರ ಹಲವು ಕಾನೂನು ನಿಬಂಧನೆಗಳನ್ನು ಜಾರಿಗೆ ತಂದಿದೆ ಅವುಗಳ ಅರಿವು ಮಹಿಳೆಗೆ ಅವಶ್ಯ ಮತ್ತು ಮಹಿಳೆಯರು ತಮ್ಮ ಸಂರಕ್ಷಣೆಗಾಗಿ ಒಗಟ್ಟಿನಿಂದ ಪ್ರಯತ್ನಿಸಿ ಮಹಿಳೆ ನಾಚುವದನ್ನು ಬಿಟ್ಟು ಸ್ವಾಬಿಮಾನ ಮತ್ತು ಸ್ವ ಸಾಮಥ್ರ್ಯದ ಮೇಲೆ ಪುರುಷ ಸಮಾನವಾಗಿ ಬೆಳೆಯಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಚಾರ್ಯ ಸತ್ಯಪ್ಪ ಗೋಟೂರ ವಹಿಸಿಕೊಂಡು ಮಾತನಾಡಿ ಮಹಿಳೆಯರು ತಮ್ಮ ತನವನ್ನು ಅರ್ಥೈಸಿಕೊಂಡು ಸಾಮಾಜಿಕವಾಗಿ ಬೆಳೆಯುವುದು ಹಾಗೂ ಮಹಿಳೆಯರ ಅಭಿವೃದ್ಧಿಗಾಗಿ ಕರ್ನಾಟಕ ಸರಕಾರ ಕೈಗೊಂಡ ಕಾರ್ಯಕ್ರಮಗಳ ಪ್ರಯೋಜನ ಪಡೆದು ಸಮಾಜದ ಮುಖ್ಯವಾಹಿನಿಗೆ ಬರುವುದು ಇಂದಿನ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸಂಜೀವ ಮಂಟೂರ, ಸಂಗಮೇಶ ಕುಂಬಾರ, ರಶ್ಮೀ ಕಳ್ಳಿಮನಿ, ಶಾಹೀನ ಕುರಬೇಟ, ಅಶ್ವೀನಿ ಗುರುವ, ಮತ್ತಿತರರು ಹಾಜರಿದ್ದರು.
ಉಪನ್ಯಾಸಕ ಮಲ್ಲಪ್ಪಾ ಪಾಟೀಲ ನಿರೂಪಿಸಿದರು ಉಪನ್ಯಾಸಕ ಸುನೀಲ ಸತ್ತಿ ಸ್ವಾಗತಿಸಿದರು, ಉಪನ್ಯಾಸಕ ರಾಜೇಂದ್ರ ಪತ್ತಾರ ವಂದಿಸಿದರು.