Breaking News
Home / ಬೆಳಗಾವಿ / ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಜೊತೆಗೆ ನೈತಿಕ ಶಿಕ್ಷಣ ಮುಖ್ಯ: ನ್ಯಾಯಾದೀಶ ಜ್ಯೋತಿ ಪಾಟೀಲ

ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಜೊತೆಗೆ ನೈತಿಕ ಶಿಕ್ಷಣ ಮುಖ್ಯ: ನ್ಯಾಯಾದೀಶ ಜ್ಯೋತಿ ಪಾಟೀಲ

Spread the love

ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಜೊತೆಗೆ ನೈತಿಕ ಶಿಕ್ಷಣ ಮುಖ್ಯ: ನ್ಯಾಯಾದೀಶ ಜ್ಯೋತಿ ಪಾಟೀಲ

ಮೂಡಲಗಿ: ಇಂದಿನ ವಿದ್ಯಾರ್ಥಿಗಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಪಠ್ಯ ವಿಷಯದ ಜೊತೆಗೆ ನೈತಿಕ ಶಿಕ್ಷಣ ಕೊಡುವದು ಕೂಡ ತುಂಬಾ ಮುಖ್ಯವಾಗಿದೆ ಎಂದು ಮೂಡಲಗಿ ದಿವಾಣಿ ಹಾಗೂ ಜೆ.ಎಮ್.ಎಪ್.ಸಿ. ನ್ಯಾಯಾಲಯದ ನ್ಯಾಯಾದೀಶರಾದ ಜ್ಯೋತಿ ಪಾಟೀಲ ಹೆಳಿದರು. ಅವರು ತುಕ್ಕಾನಟ್ಟಿ ಸರಕಾರಿ ಮಾದರಿ ಶಾಲೆಯಲ್ಲಿ ನಡೆದ ಅಂತರಾಷ್ರ್ಟೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ತುಕ್ಕಾನಟ್ಟಿ ಹಾಗೂ ಸುತ್ತಮುತ್ತಲಿನ ಮತ್ತು ಮೂಡಲಗಿ, ಬೆಳಗಾವಿ ಜಿಲ್ಲೆಗಳ ಗಡಿ ಭಾಗದಲ್ಲಿ ಬಾಲ್ಯ ವಿವಾಹಗಳು ಬಹಳ ನಡೆಯುತ್ತಿರುವದು ನಮ್ಮ ಗಮನಕ್ಕೆ ಬಂದಿದೆ ಇದರಿಂದ ಎಷ್ಟೋ ಬಾಲಕಿಯರ ಜೀವನ ಹಾಗೂ ಪ್ರತಿಭೆ ಕಮÀರಿ ಹೋಗುತ್ತಿದೆ ಅದರಲ್ಲೂ ಇದನ್ನು ತಡೆಗಟ್ಟುವಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷದಣದ ಜೊತೆಗೆ ನೈತಿಕ ಹಾಗೂ ವ್ಯವಹಾರಿಕ ಜ್ಞಾನವನ್ನು ಕಲಿಸಿಕೊಡಬೇಕಾಗುತ್ತದೆ, ಇಲ್ಲಿ ತುಕ್ಕಾನಟ್ಟಿ ಸರಕಾರಿ ಶಾಲೆಯಲ್ಲಿ 1 ರಿಂದ 8 ನೇ ತರಗತಿಗಳು ನಡೆಯುತ್ತಿರುವದರಿಂದ ಹಾಗೂ ಮಕ್ಕಳ ಸಂಖ್ಯೆ ಜಾಸ್ತಿ ಇರುವದರಿಂದ ಮುಂದಿನ ಶಿಕ್ಷಣಕ್ಕೆ ಇವರಿಗೆ ಪ್ರೌಢ ಶಾಲೆಯ ಅವಶ್ಯಕತೆಯಿದೆ. ಏಕೆಂದರೆ, ಪಾಲಕರ ಅಲಕ್ಷತನದಿಂದ ಇಲ್ಲವೇ ಮಕ್ಕಳು ದೂರದ ಊರಿಗೆ ಹೋಗಬೇಕಾಗಿರುವದರಿಂದ ಮದ್ಯದಲ್ಲಿಯೇ ಶಾಲೆಯನ್ನು ಬಿಟ್ಟು ಬಾಲ್ಯವಿವಾಹಕ್ಕೆ ಒಳಗಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿ ಅದಕ್ಕಾಗಿ ತುಕ್ಕಾನಟಿಯಲ್ಲಿ ಸರಕಾರಿ ಪ್ರೌಢಶಾಲೆಯ ಅವಶ್ಯಕತೆಯಿದೆ ಇದರಿಂದ ಬಾಲ್ಯ ವಿವಾಹ ಸ್ವಲ್ಪವಾದರೂ ತಡೆಗಟ್ಟುವದರ ಜೊತೆಗೆ ಆ ಹೆಣ್ಣು ಮಗುವಿಗೆ ಒಳ್ಳೆÀ್ಳಯ ಭವಿಷ್ಯವನ್ನು ಕಲ್ಪಿಸಿ ಕೊಟ್ಟಂತಾಗುತ್ತದೆ. ಈ ಮಹಿಳಾ ದಿನಾಚರಣೆಗೆ ನಾವು ಹೆಣ್ಣು ಮಕ್ಕಳಿಗೆ ಪ್ರೌಢ ಶಾಲೆ ಒದಗಿಸಿಕೊಡುವದೇ ನಿಜವಾದ ಕಾಣಿಕೆ ಎಂದÀರು. ಸಮಾಜದಲ್ಲಿ ಆಗುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಹೆಣ್ಣು ಮಕ್ಕಳಿಗೆ ಶಿಕ್ಷಕರು ತಿಳುವಳಿಕೆ ನೀಡಬೇಕೆಲ್ಲದೇ ಪ್ರತಿಭಟಿಸುವದನ್ನು ಕಲಿಸಿಕೊಡಬೇಕು ಇದರಲ್ಲಿ ಶಿಕ್ಷಕರ ಪ್ರಜ್ಞಾವಂತ ನಾಗರಿಕರ ಪಾತ್ರ ತುಂಬಾ ಮಹತ್ವದ್ದಾಗಿದೆ ಎಂದರು. ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ್ದ
ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಮಾತನಾಡಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಹೆಣ್ನು ಮಕ್ಕಳು ಭಾಗವಹಿಸುವದರ ಜೊತೆಗೆ ತಾನು ಸಬಲೆ ಎಂಬುದನ್ನು ಸಾಬೀತುಪಡೆಸಿದ್ದಾಳೆ. ಎಲ್ಲ ಗ್ರಾಮೀಣ ಪ್ರದೇಶದ ಪಾಲಕರು ಕೂಡ ತಮ್ಮ ಹೆಣ್ನು ಮಗುವಿಗೆ ಉತ್ತಮ ಶಿಕ್ಷಣ ಕೊಡಿಸಿ ಒಳ್ಳೆಯ ಭವಿಷ್ಯ ಕಲ್ಪಿಸಿಕೊಡಬೆಕೆಂದರಲ್ಲದೇ ನಮ್ಮ ಅರಭಾಂವಿ ಕ್ಷೇತ್ರದ ಶಾಸಕರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ಕೊಡುವದರ ಜೊತೆಗೆ ಇತ್ತೀಚೆಗೆ ಮೂಡಲಗಿ ವಲಯದ ಎಲ್ಲ ಸರಕಾರಿ ಶಾಲೆಯ ಸುಮಾರು 32000 ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸಾಕ್ಷರತಾ ಮಿಷನ್‍ವತಿಯಿಂದ ಸಮವಸ್ತ್ರ, ಶಾಲಾ ಬ್ಯಾಗ್ ಸ್ವೆಟರಗಳನ್ನು ನೀಡುವದರ ಜೊತೆಗೆ ತಮ್ಮ ಶೈಕ್ಷಣಿಕ ಕಾಳಜಿಯನ್ನು ತೋರಿಸಿದ್ದಾರೆ ಇದನ್ನು ಪಾಲಕರು ಸದುಪಯೋಗ ಪಡೆಸಿಕೊಳ್ಳಬೇಕೆಂದು ಕರೆ ನೀಡಿದರು.
ಗ್ರಾಮ ಪಂಚಾಯತ ಅದ್ಯಕ್ಷರಾದ ಗಾಯತ್ರಿ ಬಾಗೇವಾಡಿ ಉಪಾದ್ಯಕ್ಷರಾದ ಸುನಂದಾ ಭಜಂತ್ರಿ ಮಾತನಾಡಿ ತುಕ್ಕಾನಟ್ಟಿಯಲ್ಲಿ ಸರಕಾರಿ ಪ್ರೌಢಶಾಲೆಯ ಮಹತ್ವವನ್ನು ಒತ್ತಿ ಹೇಳಿದರು. ಈ ಶೈಕ್ಷಣಿಕ ವರ್ಷ ಸರಕಾರಿ ಪ್ರೌಢಶಾಲೆ ಆಗಲೇಬೇಕೆಂದು ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದರು.
ಪ್ರಾರಂಭದಲ್ಲಿ ಸಸಿಗೆ ನೀರೆರೆಯುವದರ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಇದೇ ಸಂದರ್ಭದಲ್ಲಿ ಶುಕ್ರವಾರ ಸಂಜೆ ಎಂಬ ಶಾಲಾ ಕಾರ್ಯಕ್ರಮದಲ್ಲಿ ರಸಪ್ರÀಶ್ನೆ ವಿಭಾಗದಲ್ಲಿ 1 ರಿಂದ 8 ನೇ ತರಗತಿಯ ವಿಜೇತರಾದ ವಿದ್ಯಾರ್ಥಿಗಳಿಗೆ ನಗರು ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮೂಡಲಗಿಯ ದಿವಾಣಿ ಹಾಗೂ ಜೆ.ಎಮ್.ಎಪ್.ಸಿ. ನ್ಯಾಯಾಲಯದ ನ್ಯಾಯಾದೀಶರಾದ ಜ್ಯೋತಿ ಪಾಟೀಲ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ, ಗ್ರಾಮ ಪಂಚಾಯತ ಅದ್ಯಕ್ಷರಾದ ಗಾಯತ್ರಿ ಬಾಗೇವಾಡಿ ಉಪಾದ್ಯಕ್ಷರಾದ ಸುನಂದಾ ಭಜಂತ್ರಿ ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಧಾನಗುರು ಎ.ವ್ಹಿ ಗಿರೆಣ್ಣವರ ವಹಿಸಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಎಮ್.ಡಿ. ಗೋಮಾಡಿ ನೀರೂಪಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ವಿಮಲಾಕ್ಷಿ ತೋರಗಲ್, ಲಕ್ಚ್ಮೀ ಹೆಬ್ಬಾಳ, ಪುಷ್ಪಾ ಭರಮದೆ, ರೂಪಾ ಹೂಲಿಕಟ್ಟಿ, ಪ್ರಿಯಾಂಕಾ ಡಿ.ಕೆ. ಸುಜಾತಾ ಕೋಳಿ, ವಾಸಂತಿ ಬೋರಗುಂಡಿ, ಮಹಾದೇವ ಗೋಮಾಡಿ, ಬಸವರಾಜ ನಾಯಿಕ, ಸೋಮಶೇಖರ ವಾಯ್.ಆರ್. ಚನ್ನಬಸಪ್ಪ ಸೀರಿ, ಅತಿಥಿ ಶಿಕ್ಷಕರಾದ ಹೊಳೆಪ್ಪಾ ಗದಾಡಿ, ಶಿವಲೀಲಾ ಹಣಮಣ್ಣವರ, ಖಾತೂನ್ ನದಾಫ, ಅಣ್ಣಪೂರ್ಣಾ ಹುಲಕುಂದ, ಯಮುನಾ ಹಮ್ಮನವರ, ಪವಿತ್ರಾ ಬಡಿಗೇರ ಉಪಸ್ಥಿತರಿದ್ದರು.


Spread the love

About inmudalgi

Check Also

ಮಾ.11 ರಂದು ನವಜೀವನೋತ್ಸವ ಕಾರ್ಯಕ್ರಮ

Spread the loveಮೂಡಲಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡಲಗಿ ತಾಲೂಕಾ ವಲಯದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ