ಸಚಿವ ಸತೀಶ ಜಾರಕಿಹೊಳಿ ಬೆಟಗೇರಿ ಗ್ರಾಮ ಪಂಚಾಯತಿಗೆ ಭೇಟಿ
ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯತಿಗೆ ಲೋಕೊಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಇತ್ತೀಚೆಗೆ ಭೇಟಿ ನೀಡಿದರು.
ಬೆಟಗೇರಿ ಗ್ರಾಮದ ಕೆಲವು ಮೂಲಭೂತ ಸೌಲಭ್ಯ, ಸಾರ್ವಜನಿಕರ ಕುಂದುಕೊರತೆಗಳ ಕುರಿತು ಮನವಿ ಸ್ವೀಕರಿಸಿ, ಸ್ಥಳೀಯ ಮುಖಂಡರ ಜೋತೆ ಕೆಲ ಹೊತ್ತು ಚರ್ಚಿಸಿದರು.
ಈ ವೇಳೆ ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಬಸವಂತ ಕೋಣಿ, ಲಕ್ಷ್ಮಣ ನೀಲಣ್ಣವರ, ಪಿಡಿಒ ಎಂ.ಎಲ್.ಯಡ್ರಾಂವಿ, ಕಾರ್ಯದರ್ಶಿ ಮಾರುತಿ ತಳವಾರ, ಸುರೇಶ ಬಾಣಸಿ, ಗ್ರಾಪಂ ಸದಸ್ಯರು, ಗಣ್ಯರು, ರಾಜಕೀಯ ಮುಖಂಡರು, ಗ್ರಾಮಸ್ಥರು ಇದ್ದರು.