Breaking News
Home / ಬೆಳಗಾವಿ / ಚಿದಾನಂದ್ ಪವಾರಿಗೆ ರಾಷ್ಟ್ರೀಯ“ಆಸ್ಪೀ ಎಲ್.ಎಂ.ಪಟೇಲ್”ಪ್ರಶಸ್ತಿ ಪ್ರಧಾನ

ಚಿದಾನಂದ್ ಪವಾರಿಗೆ ರಾಷ್ಟ್ರೀಯ“ಆಸ್ಪೀ ಎಲ್.ಎಂ.ಪಟೇಲ್”ಪ್ರಶಸ್ತಿ ಪ್ರಧಾನ

Spread the love

ಮೂಡಲಗಿ: ಮುಂಬೈನ ಆಸ್ಪೀ ಫೌಂಡೇಶನದಿಂದ ಪ್ರಗತಿ ಪರ ರೈತರಿಗೆ ಕೊಡಮಾಡು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ “ಆಸ್ಪೀ ಎಲ್.ಎಂ.ಪಟೇಲ್” 2022 ಪ್ರಶಸ್ತಿಗೆ ತೋಟಗಾರಿಕೆ ವಿಭಾಗದ ಅಡಿಯಲ್ಲಿ ಮೂಡಲಗಿ ತಾಲೂಕಿನ ರಾಜಾಪೂರ ಗ್ರಾಮದ ಪ್ರಗತಿ ಪರ ರೈತ ಚಿದಾನಂದ್ ಪರಸಪ್ಪ ಪವಾರ್ ಆಯ್ಕೆಗೊಂಡು ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ “ಆಸ್ಪೀ ಎಲ್.ಎಂ.ಪಟೇಲ್” 2022 ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಕಳೆದ ಶುಕ್ರವಾರದಂದು ಮುಂಬೈನ ಪ್ರತಿಷ್ಠಿತ ಹೊಟೇಲನಲ್ಲಿ ಜರುಗಿದ ಪ್ರಶಸ್ತಿ ಸಮಾರಂಭದಲ್ಲಿ ಉತ್ತರ ಪ್ರದೇಶದ ಸಂಸತ ಸದಸ್ಯ ಶಶಾಂಕ್‍ಮಣಿ ತ್ರಿಪಾಠಿ, ಮುಂಬೈನ ಆಸ್ಪೀ ಫೌಂಡೇಶನ್‍ನ ವ್ಯವಸ್ಥಾಪಕ ನಿರ್ದೇಶಕ ಕಿರಣ್ ಪಟೇಲ್‍ರವರು ಆಸ್ಪೀ ಎಲ್.ಎಂ.ಪಟೇಲ್ ವರ್ಷದ ರೈತ ಪ್ರಶಸ್ತಿ-2022 ಪ್ರಶಸ್ತಿಯನ್ನು ಚಿದಾನಂದ್ ಪರಸಪ್ಪ ಪವಾರ್ ಅವರಿಗೆ ಪ್ರಧಾನ ಪುರಸ್ಕಾರ ಸೇರಿ ಒಂದು ಲಕ್ಷ ರೂ ಮತ್ತು ಸ್ಮರಣಿಕೆ ಹಾಗೂ ಗುರಾಣಿ ಪ್ರಮಾಣ ಪತ್ರವನ್ನು ವಿತರಿಸಿದರು.
ಪ್ರಶಸ್ತಿ ಪುರಸ್ಕøತ ಚಿದಾನಂದ್ ಪವಾರ ಅವರು ತುಕ್ಕಾನಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಪರಶುರಾಮ್ ಎಂ. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಪಪ್ಪಾಯಿ ಕೃಷಿಯಲ್ಲಿ ಅವರ ಅತ್ಯುತ್ತಮ ಕೊಡುಗೆ ಮತ್ತು ನವೀನ ಅಭ್ಯಾಸಗಳಿಗೆ ಸಾಕ್ಷಿಯಾಗಿದೆ.
ಕೃಷಿಯಲ್ಲಿ ಸಧನೆ ಗೈದು ಪ್ರಶಸ್ತಿಗೆ ಭಾಜನರಾದ ಚಿದಾನಂದ್ ಪವಾರ ಅವರನ್ನು ತುಕ್ಕಾನಟ್ಟಿ ಬಡ್ರ್ಸ್ ಸಂಸ್ಥೆಯ ಅಧ್ಯಕ್ಷ ಆರ್.ಎಂ.ಪಾಟೀಲ ಹಾಗೂ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿಗಳು, ರೈತರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಫೋಟೋ ಕಾಪ್ಸನ್> ಮೂಡಲಗಿ: ರಾಜಾಪೂರದ ರೈತ ಚಿದಾನಂದ್ ಪವಾರ್ ಅವರಿಗೆ ರಾಷ್ಟ್ರೀಯ ಮಟ್ಟದ “ಆಸ್ಪೀ ಎಲ್.ಎಂ.ಪಟೇಲ್” 2022 ಪ್ರಶಸ್ತಿಯನ್ನು ಉತ್ತರ ಪ್ರದೇಶದ ಸಂಸತ ಸದಸ್ಯ ಶಶಾಂಕ್‍ಮಣಿ ತ್ರಿಪಾಠಿ, ಆಸ್ಪೀ ಫೌಂಡೇಶನ್‍ನ ವ್ಯವಸ್ಥಾಪಕ ನಿರ್ದೇಶಕ ಕಿರಣ್ ಪಟೇಲ್ ಮತ್ತಿರರು ಪ್ರಧಾನ ಮಾಡಿದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ