ಸ್ವಚ್ಛ ಭಾರತ – ಮೂಡಲಗಿ ಮರಿತಾ ?
ಮೂಡಲಗಿ ಪೇ 29 : ಇಡೀ ದೇಶದ ತುಂಬಾ ಸ್ವಚ್ಛ ಭಾರತ ಯೋಜನೆ ಸಾಕಷ್ಟು ಪ್ರಮಾಣದಲ್ಲಿ ತನ್ನ ಕೆಲಸವನ್ನು ನಡೆಸಿದರು ಸದರಿ ಅಭಿಯಾನದ ಅಡಿಯಲ್ಲಿ ಇಡೀ ದೇಶವೇ ಸ್ವಚ್ಛವಾಗುತ್ತಿರುವಾಗ ಇದಕ್ಕೆ ವಿರುದ್ಧ ಎಂಬಂತೆ
ನಮ್ಮ ಮೂಡಲಗಿಯ ಪುರಸಭೆಯ ಸ್ವಚ್ಛತಾ ಕಾಯ೯ ನೀಲ೯ಕ್ಷ ವಹಿಸುತುದಿಯೋ ಎಂಬಂತೆ ದನಗಳ ಪೇಟೆಯ ಪಕ್ಕದಲ್ಲಿ ಪಟಗುಂದಿ ರಸ್ತೆ ಬದಿಯ ಕಸದ ರಾಶಿ ಮತ್ತು ಸತ್ತ ದನಗಳನ್ನು ತಂದು ಬಿಸಾಡುತ್ತಿರುವುದು ಪುರಸಭೆಯ ಗಮನಕ್ಕೆ ಬರುತ್ತಿಲ್ಲವೇ ಎಂಬ ಗುಮಾಣಿ ಸಾವ೯ಜನಿಕರಲ್ಲಿ ಮೂಡುತ್ತಿದೆ.
ಗಬ್ಬೆದ್ದು ನಾರುತ್ತಿದೆ ದುವಾ೯ಸನೆಗೆ ಜನ ಮೂಗು ಮುಚ್ಚಿಕೊಂಡು ಒಡಾಡುತ್ತಿರುವ ಪರಿಸ್ಥಿತಿ ನಿಮಾ೯ಣವಾಗಿದೆ.
ಸಿಬ್ಬಂದಿ ಕೊರತೆಯೋ ? ಅಥವಾ ಆರೋಗ್ಯಅಧಿಕಾರಿಗಳ ನೀಲ೯ಕ್ಷವೋ? ಗೂತ್ತಾಗುತ್ತಿಲ್ಲ ಇದನೆಲ್ಲ ಕಂಡು ಕೆಲವು ಜನ ಇಲ್ಲಿಗೂ ಬಯಾನಕ ವೈರಸ್ ಕರೂನಾ ಬಂದಿತ್ತು ಅಥವಾ ಬರ ಬಹುದೋ ಎಂಬ ಭಯ ಆತಂಕ ಜನರಲ್ಲಿ ಮೂಡುತ್ತಿದೆ
ಇನ್ನು ಮುಂದಾದರು ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಮುಂದಾಗುವ ಅನಾಹುತಕ್ಕೆ ಕಡಿವಾಣ ಸೂಕ್ತ ಕ್ರಮ ಕೈಗೊಳ್ಳುವರೇ ಎಂದು ಜನ ಕಾದು ನೋಡುತ್ತಿದ್ದಾರೆ.
ಇನ್ನೆರಡು ದಿನಗಳಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ಇದಕ್ಕೆ ಜನರೇ ಬುದ್ಧಿ ಕಲಿಸಬಹುದೆಂಬ ಮಾತು ಕೇಳಿ ಬರುತ್ತಿದೆ.
ವರದಿ- ಈಶ್ವರ ಢವಳೇಶ್ವರ