ಬೆಟಗೇರಿ:ಯೋಗ ಭಾರತೀಯ ಪ್ರಾಚೀನ ಪರಂಪರೆಯ ಅತ್ಯಮೂಲ್ಯ ಕೊಡುಗೆಯಾಗಿದೆ. ಪ್ರತಿ ದಿನ ಪ್ರತಿಯೊಬ್ಬರೂ ಯೋಗ ಮಾಡಿ ಆರೋಗ್ಯವಾಗಿರಿ ಎಂದು ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಜೂ.21ರಂದು ಆಯೋಜಿಸಿದ 11ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವಕ್ಕೆ ಭಾರತ ದೇಶ ಯೋಗದ ಕೊಡುಗೆ ನೀಡಿದೆ. ಮನುಷ್ಯನಿಗೆ ಯೋಗದಿಂದ ದೊರಕುವ ವಿವಿಧ ಪ್ರಯೋಜನಗಳ ಕುರಿತು ಶಾಲಾ ಮಕ್ಕಳಿಗೆ ತಿಳಿಸಿದರು.
ಸುಮಾರು ಗಂಟೆಗಳ ಕಾಲ ಸ್ಥಳೀಯ ಪ್ರೌಢ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ವರ್ಗದವರು ಆಚಾರ್ಯ ಮಹಾಂತೇಶ ಮಠದ ವಿವಿಧ ಭಂಗಿಯ ಯೋಗಗಳನ್ನು ಹೇಳಿಕೊಟ್ಟ ಬಳಿಕ ಎಲ್ಲರಿಗೂ ಸಿಹಿ ವಿತರಿಸಲಾಯಿತು.
ಶಾಲೆಯ ಶಿಕ್ಷಕರಾದ ಪ್ರಕಾಶ ಕುರಬೇಟ, ರಾಕೇಶ ನಡೋಣಿ, ಶುಭಾ.ಬಿ., ಈರಣ್ಣ ಪಟಗುಂದಿ, ಈಶ್ವರ ಮುನವಳ್ಳಿ, ಗಣಪತಿ ಭಾಗೋಜಿ, ವೈ.ಎಂ. ವಗ್ಗರ ಸೇರಿದಂತೆ ಸಹ ಶಿಕ್ಷಕರು, ಅತಿಥಿ ಶಿಕ್ಷಕರು, ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಇದ್ದರು.