ಮೂಡಲಗಿ: ಸರ್ಕಾರಿ ಶಾಲೆಗಳು ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕೊಪ್ಪದಟ್ಟಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅವರ ಸಹಕಾರದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲಾಗಿರುವ ಎಲ್‌ಕೆಜಿ-ಯುಕೆಜಿ ಮಕ್ಕಳಿಗಾಗಿ ಆಟದ ಮನೆ, ಸ್ಥಳೀಯ ದೇಣಿಗೆದಾರರಿಂದ ಉಚಿತವಾಗಿ ಸಮವಸ್ತ್ರ, ಅಭ್ಯಾಸ ಪುಸ್ತಕ ಹಾಗೂ ಶಾಲಾ ಬ್ಯಾಗ ವಿತರಿಸುವ ಕಾರ್ಯ ಶ್ಲಾಘನಿಯವಾದು ಎಂದು ಬಿಇಒ ಅಜೀತ ಮನ್ನಿಕೇರಿ ಹೇಳಿದರು.
ಮೂಡಲಗಿ ತಾಲೂಕಿನ ಕೊಪ್ಪದಟ್ಟಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಆರಂಭಿಸಿರುವ ಎಲ್‌ಕೆಜಿ-ಯುಕೆಜಿ ತರಗತಿಯನ್ನು ಉದ್ಘಾಟಿಸಿ ಮತ್ತು ಮಕ್ಕಳ ಕಲಿಕಾ ಸಮಾಗ್ರಿ, ಸಮವಸ್ತ್ರ, ಬ್ಯಾಗ, ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣದ ಭದ್ರ ಬುನಾದಿ ಪ್ರಾಥಮಿಕ ಶಿಕ್ಷಣ ಎಂಬಂತೆ ಸರಕಾರಿ ಶಾಲೆಗಳು ಬಡವರು ಮತ್ತು ಶ್ರೀಮಂತರು ಎನ್ನದೆ ಸಮಾನ ಶಿಕ್ಷಣಾವಕಾಶಗಳನ್ನು ಒದಗಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುತ್ತಿವೆ. ಎಲ್ಲರಿಗೂ ಉತ್ತಮ ಭವಿಷ್ಯವನ್ನು ರೂಪಿಸಲು ಸಹಾಯ ಮಾಡುತ್ತಿವೆ. ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಅನೇಕ ಸುಧಾರಣೆಗಳನ್ನು ತರುತ್ತಿವೆ. ಪಾಲಕರು ಸರ್ಕಾರಿ ಶಾಲೆಗಳತ್ತ ಮುಖಮಾಡಿ ಯೋನೆಗಳ ಸದುಪಯೋಗ ಪಡೆದುಕೊಳ್ಳಲು ಸಲಹೆ ನೀಡಿದರು.
ನೂತನವಾಗಿ ಆರಂಭಿಸಿರುವ ಎಲ್‌ಕೆಜಿ-ಯುಕೆಜಿಗೆ 54 ವಿದ್ಯಾರ್ಥಿಗಳು ದಾಖಲಾತಿ ಹೊಂದಿರುವುದು ಸಂತೋಷ ಸಂಗತಿ, ಕೊಪದಟ್ಟಿ ಶಾಲೆಯಲ್ಲಿ ಶಿಕ್ಷಣ ಪ್ರೇಮಿಗಳಿಂದ ದೇಣಿಗೆ ಸಂಗ್ರಹಿಸಿ ಮಕ್ಕಳಿಗೆ ಸೌಲಭ್ಯಗಳನ್ನು ತಲುಪಿಸುವಲ್ಲಿ ಮಾದರಿಯಾಗಿರುತ್ತಾರೆ. ಹಾಗೂ ಸ್ಥಳೀಯ ಗ್ರಾಮ ಪಂಚಾಯತನವರು ಕೂಡ ಸೌಲಭ್ಯಗಳನ್ನು ಒದಗಿಸಿಕೊಟ್ಟಿರುವುದನ್ನು ಶ್ಲಾಘನಿಸಿದರು.
ಕಾಮನಕಟ್ಟಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಎಚ್.ವಾಯ್.ತಾಳಿಕೊಟ್ಟಿ ಮಾತನಾಡಿ, ಶಾಲೆಗೆ ಬೇಕಾಗಿರುವ ಸೌಲಭ್ಯಗಳನ್ನು ಹಂತ ಹಂತವಾಗಿ ಪೂರೈಸುವದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಶ್ರೀ ಶಿವಲಿಂಗಪ್ಪಜ್ಜ ಹುಬ್ಬಳ್ಳಿ ಅವರು ವಹಿಸಿದ್ದರು. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ನಿಂಗಪ್ಪ ಉದಪುಡಿ ವಹಿಸಿದ್ದರು.
ಮಕ್ಕಳಿಗೆ ಗ್ರಾಮದ ಶಿಕ್ಷಣ ಪ್ರೇಮಿಗಳಾದ ರಾಜಶೇಖರ ಬಾಗಿ ಅವರಿಂದ ಸಮವಸ್ತ್ರ, ಈರಣ್ಣ ಅರಕೇರಿ ಅವರಿಂದ ಅಭ್ಯಾಸ ಪುಸ್ತಕ, ಎಸ್.ಡಿ.ಎಂ.ಸಿ ಮಹಿಳಾ ಸದಸ್ಯರಿಂದ ಶಾಲಾಬ್ಯಾಗಗಳನ್ನು ವಿತರಿಸಲಾಯಿತು ಮತ್ತು ವಿವಿಧ ಮೂಲಗಳಿಂದ ದೇಣಿಗೆ ಸಂಗ್ರಹಿಸಿ ಮಕ್ಕಳ ಸಂತಸದಾಯಕ ಕಲಿಕೆಗೆ ಪೂರಕವಾವಗುವಂತೆ ಸುಮಾರು 20 ಸಾವಿರ ರೂ.ಗಳ ಸಾಮಗ್ರಿಗಳನು ಮಕ್ಕಳ ಬಳಸಲ್ಲಿಕೆ ಕಲ್ಪಿಸಲಾಯಿತು. ಈ ಸಮಯದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅವರು ಒಂದು ವರ್ಷದ ಇಬ್ಬರು ಶಿಕ್ಷಕರ ವೇತನವನ್ನು ನೀಡುವುದಾಗಿ ವಾಗದಾನ ಮಾಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯ ಗೋವಿಂದ ಉದಪುಡಿ, ನಿಂಗನಗೌಡ ಪಾಟೀಲ, ಈರಪ್ಪ ಮೋಡಿ ಎಸ್.ಡಿ.ಎಂ.ಸಿ ಎಲ್ಲ ಸದಸ್ಯರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಲಕ್ಷö್ಮಣ ಬಡಕಲ್ಲ, ಸಿ.ಆರ್.ಸಿ ಸಂಘದ ಅಧ್ಯಕ್ಷ ಸುರೇಶ ತಳವಾರ. ಯಾದವಾಡ ಸಿ.ಆರ್.ಪಿ ವಿಠ್ಠಲ ಮಿಲಾನಟ್ಟಿ, ಯಾದವಾಡ ಸಿಆರ್.ಸಿ ವ್ಯಾಪ್ತಿಯ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಭಾಗವಹಿಸಿದ್ದರು.
ಶಾಲೆಯ ಮುಖ್ಯೋಪಾಧ್ಯಾಯ ವ್ಹಿ.ಆರ್. ಬರಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಗದೀಶ ನಾಯ್ಕ ನಿರೂಪಿಸಿದರು, ಎಸ್.ಎಸ್. ಮುರಕಟ್ನಾಳ ವಂದಿಸಿದರು.
