ಬೆಟಗೇರಿ: ಸ್ಥಳಿಯ ಹಾಗು ಸುತ್ತಲಿನ ಹಳ್ಳಿಗಳ ಸಾರ್ವಜನಿಕರು ಪ್ರಧಾನ ಮಂತ್ರಿ ಭಾರತೀಯ ಜನಔಷಧಿ ಕೇಂದ್ರದ ಸದುಪಯೋಗಪಡೆದುಕೊಳ್ಳಬೇಕು ಎಂದು ಸುಣಧೋಳಿ ಶ್ರೀ ಜಡಿಸಿದ್ಧೇಶ್ವರ ಮಠದ ಅಭಿನವ ಶಿವಾನಂದ ಸ್ವಾಮೀಜಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೇತೃತ್ವದಲ್ಲಿ ಜುಲೈ.9ರಂದು ನಡೆದ ಪ್ರಧಾನ ಮಂತ್ರಿ ಭಾರತೀಯ ಜನಔಷಧಿ ನೂತನ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಇಲ್ಲಿಯ ವಿಪ್ರಾಗ್ರಾಕೃಸ ಸಂಘ ರೈತರಿಗೆ, ಸಾರ್ವಜನಿಕರಿಗೆ ನೀಡುತ್ತಿರುವ ವಿವಿಧ ಸೇವೆಗಳ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.
ಸತ್ತಿಗೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಈರಯ್ಯ ಹಿರೇಮಠ, ಹಣಮಂತ ವಡೇರ, ಸಂಗಯ್ಯ ಹಿರೇಮಠ ನೇತೃತ್ವ, ಸ್ಥಳೀಯ ವಿಪ್ರಾಗ್ರಾಕೃಸ ಸಂಘದ ಅಧ್ಯಕ್ಷ ಬಸವಂತ ಕೋಣಿ ಅಧ್ಯಕ್ಷತೆ ವಹಿಸಿದ್ದರು. ಉಪಸ್ಥಿತ ಹರ, ಗುರು, ಚರಮೂರ್ತಿಗಳಿಗೆ, ಗಣ್ಯರಿಗೆ ಸಂಘದ ಪರವಾಗಿ ಸತ್ಕರಿಸಲಾಯಿತು.
ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ, ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಬೆಳಗಾವಿ ಸಹಾಯಕ ಔಷಧ ನಿಯಂತ್ರಕ ಮನೋಹರ ಕೆ.ಬಿ., ಮುಖ್ಯ ಅತಿಥಿಗಳಾಗಿ, ಪ್ರಧಾನ ಮಂತ್ರಿ ಭಾರತೀಯ ಜನಔಷಧಿü ಕೇಂದ್ರದಿಂದ ಬಡ ವರ್ಗದ ಜನರಿಗೆ ದೊರಕುವ ವಿವಿಧ ಪ್ರಯೋಜನಗಳು, ಔಷಧಿಗಳ ಮೇಲೆ ಇರುವ ರಿಯಾಯತಿ, ಗುಣಮಟ್ಟ ಕುರಿತು ಹೇಳಿದರು.
ಎಸ್.ಬಿ.ಬಿ.ಪಾಟೀಲ, ಮಾರುತಿ ಮೊದಗಿ, ವಿನೋದಕುಮಾರ ವಾಲಿ, ರೇವಣಸಿದ್ಧ ಸವತಿಕಾಯಿ, ಯಲ್ಲವ್ವ ಚಂದರಗಿ, ಲಕ್ಷ್ಮಣ ನೀಲಣ್ಣವರ, ಸಾಂವಕ್ಕಾ ಬಾಣಸಿ, ಮಹಾದೇವ ಕಂಬಿ, ಗಂಗವ್ವ ತೋಟಗಿ, ಸಂಘದ ಮುಖ್ಯ ಕಾರ್ಯನಿರ್ವಾಹಕ ಅಡಿವೆಪ್ಪ ಮುರಗೋಡ, ಮಹಾಂತೇಶ ಸಿದ್ನಾಳ, ಬಸವರಾಜ ದೇಯನ್ನವರ, ಲಕ್ಷ್ಮಪ್ಪ ಕೋಣಿ, ವಿಜಯ ಸೋಮಗೌಡ್ರ, ಮಹಾದೇವಿ ದಂಡಿನ, ಮಲ್ಲವ್ವ ಚಂದರಗಿ, ಮಹಾಂತೇಶ ಭಜಂತ್ರಿ, ಭೀಮಶೆಪ್ಪ ಆಶೆಪ್ಪಗೋಳ, ರಮೇಶ ಮುಧೋಳ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ರಾಜಕೀಯ ಮುಖಂಡರು, ಧುರೀಣರು, ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರು, ಸ್ಥಳೀಯ ವಿಪ್ರಾಗ್ರಾಕೃಸ ಸಂಘದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಮತ್ತೀತರರು ಇದ್ದರು.
