Breaking News
Home / ಬೆಳಗಾವಿ / ನಿಡಸೋಸಿ ದುರದುಂಡೀಶ್ವರ ಮಠಕ್ಕೆ ಭೇಟಿ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ

ನಿಡಸೋಸಿ ದುರದುಂಡೀಶ್ವರ ಮಠಕ್ಕೆ ಭೇಟಿ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ

Spread the love

ನಿಡಸೋಸಿ- (ತಾ. ಹುಕ್ಕೇರಿ)- ಮೂರು ಶತಮಾನಗಳ ಭವ್ಯ ಇತಿಹಾಸ ಹೊಂದಿರುವ ನಿಡಸೋಸಿ ಶ್ರೀ ಮಠವು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ರಂಗಗಳಲ್ಲಿ ಮಹತ್ತರ ಕೊಡುಗೆ ನೀಡಿದೆ ಎಂದು ಬೆಮುಲ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಶ್ಲಾಘನೆ ವ್ಯಕ್ತಪಡಿಸಿದರು.

ಗುರುವಾರದಂದು ಸಂಜೆ ನಿಡಸೋಸಿ ಮಠಕ್ಕೆ ಭೇಟಿ ನೀಡಿ ಗದ್ದುಗೆ ದರ್ಶನ ಪಡೆದು ಮಾತನಾಡಿದ ಅವರು, ಧಾರ್ಮಿಕತೆಯ ಜತೆ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಕಾಣಿಕೆಯನ್ನು ನೀಡುತ್ತಿರುವದನ್ನು ಗುಣಗಾನ ಮಾಡಿದರು.
ಗಡಿ ಪ್ರದೇಶದಲ್ಲಿ ಅನ್ನ ದಾಸೋಹಕ್ಕೆ ಈ ಮಠವು ಹೆಸರುವಾಸಿಯಾಗಿದೆ. ಅರಿವು, ಭಕ್ತಿ, ಅನ್ನ ದಾಸೋಹದ ಮೂಲಕ ಶ್ರೀ ಮಠವು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಕಾರ್ಯಕ್ರಮ ನಡೆಯುತ್ತಿರುವುದು ಅತೀ ಹೆಮ್ಮೆಯಾಗಿದೆ. ೧೭೭೦ ರಿಂದ ನಿಜಲಿಂಗೇಶ್ವರ ಮಹಾಸ್ವಾಮಿಗಳು ಆರಂಭಿಸಿರುವ ಅನ್ನ ದಾಸೋಹವು ಇಂದಿಗೂ ನಿತ್ಯ ನಿರಂತರವಾಗಿ ನಡೆಯುತ್ತಿರುವುದು ಇತಿಹಾಸಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ನಿಡಸೋಸಿ ದುರದುಂಡೀಶ್ವರ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಅಣ್ಣಾಸಾಹೇಬ ಜೊಲ್ಲೆಯವರನ್ನು ಸತ್ಕರಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸತ್ ಸದಸ್ಯ ಮತ್ತು ಸಹಕಾರಿ ಧುರೀಣ ಅಣ್ಣಾಸಾಹೇಬ ಜೊಲ್ಲೆ, ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ,
ಸಂಕೇಶ್ವರ ಪುರಸಭೆಯ ಮಾಜಿ ಅಧ್ಯಕ್ಷ ಅಮರ ನಲವಡೆ, ಶ್ರೀಕಾಂತ ಅಥನೂರೆ, ಪವನ ಪಾಟೀಲ, ಸಂಜಯ ಶಿರಕೋಳೆ,
ಕುನಾಲ್ ಪಾಟೀಲ, ಬಸವರಾಜ ಬಾಗಲಕೋಟ, ಇಲಿಯಾಸ ಇನಾಂದಾರ, ಅಜೀತ ಕುರಣಗಿ,ಸುರೇಶ ಹುಣಚ್ಯಾಳಿ
ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


Spread the love

About inmudalgi

Check Also

ಆರ್.ಡಿ.ಎಸ್. ಪಿಯು ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುವ ಸಮಾರಂಭ

Spread the love  ಮೂಡಲಗಿ : ದಿನಾಂಕ 19-01-2026 ರಂದು ಇಲ್ಲಿನ ಶೈಕ್ಷಣಿಕ ಸಂಸ್ಥೆಯಾದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ