ಮೂಡಲಗಿ: ವಿವೇಕಾನಂದ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆಯು ಕಡಿಮೆ ಅವಧಿಯಲ್ಲಿ ರೈತರಿಗೆ ಅನೂಕೂಲಕ್ಕಾಗಿ ಸ್ವಂತ ಕಟ್ಟಡ ಹೊಂದಿ ಪ್ರಗತಿ ಪಥದತ್ತ ಸಾಗಿರುವುದು ಶ್ಲಾಘನಿಯವಾದದ್ದು ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೋಳಿ ಹೇಳಿದರು.
ಅವರು ತಾಲೂಕಿನ ರಾಜಾಪೂರ ಗ್ರಾಮದಲ್ಲಿನ ವಿವೇಕಾನಂದ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆಯ 8ನೇ ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ನೂನತ ಕಟ್ಟಡ ಉದ್ಘಾಟಿಸಿ ಮಾತನಾಡಿ, ಈ ಸಂಸ್ಥೆಯಿಂದ ರೀಯಾಯಿತ್ತಿಯಲ್ಲಿ ಸಿಗುವ ಸೌಲಭ್ಯವನ್ನು ರೈತರು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದರು.
ಸಂಸ್ಥೆಯ ಅಧ್ಯಕ್ಷ ಹಾಗೂ ಪ್ರಗತಿಪರ ರೈತ ರಾಜು ಸತ್ತೆಪ್ಪ ಬೈರುಗೊಳ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜಾಪೂರದಲ್ಲಿ ವಿವೇಕಾನಂದ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆಯು 2017ರಲ್ಲಿ ತೋಟಗಾರಿಕೆ ಇಲಾಖೆಯ ಸಹಕಾರದೊಂದಿಗೆ ಸ್ಥಾಪನೆಯಾಗಿ 1000 ಜನ ರೈತರ ಸದಸ್ಯರೊಂದಿಗೆ ಆರಂಭಿಸಿ ರೈತರಿಗೆ ಬೀಜ ರಸಗೊಬ್ಬರ ಕೀಟನಾಶಕ ಹಾಗೂ ಕೃಷಿ ಸಂಬಂಧಿತ ಉಪಕರಣಗಳನ್ನೂ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದು. ರೈತರಿಗೆ ಕಡಿಮೆ ದರದಲ್ಲಿ ಬಾಡಿಗೆ ಆದಾರಿತ ಯಂತ್ರೋಪಕರಣಗಳ ಸೇವೆಯನ್ನು ಪೂರೈಸಲಾಗುತ್ತಿದೆ. ಕಳೆದ 2024-2025 ಸಾಲಿನಲ್ಲಿ ಸುಮಾರು 5 ಕೋಟಿ 18 ಲಕ್ಷ ವ್ಯಾಪಾರ ವಹಿವಾಟು ನಡೆ ಪ್ರಗತಿಪಥದತ್ತ ಸಾಗಿದೆ ಎಂದವರು ನೂತನ ಕಟ್ಟಡ(ಗೋದಾಮು)ವನ್ನು ನಿರ್ಮಿಸಿ ರೈತರಿಗೆ ತಮ್ಮ ಉತ್ಪನ್ನಗಳನ್ನು μÉೀಕರಣೆ ಮಾಡಲು ಹಾಗೂ ಸಂಸ್ತೆಯ ವ್ಯಾಪಾರ ವಹಿವಾಟಕ್ಕಾಗಿ ರೈತರಿಗೆ ಅನುಕೂಲ ಮಾಡಿದೆ ಎಂದರು.
ತುಕ್ಕಾನಟ್ಟಿ ಬಡ್ರ್ಸ ಸಂಸ್ಥೆಯ ಅಧ್ಯಕ್ಷ ಆರ್.ಎಂ.ಪಾಟೀಲ್ ಮಾತನಾಡಿ, ರೈತರಿಗೆ ಸಾವಯುವ ಕೃಷಿ ಹಾಗೂ ಸಂಪ್ರದಾಯಿಕ ಕೃಷಿ ಪದ್ಧತಿ ಅಳವಡಿಸಿ ಮಣ್ಣಿನ ಫಲವತತ್ತೆಯನ್ನು ಕಾಯುದುಕೊಂಡು ಮಿಶ್ರ ಬೇಸಾಯ ಪದ್ಧತಿ ಜೋತೆಗೆ ಹಣ್ಣಿನ ಗಿಡಗಳ ಬೆಳೆಸಲು ಮನವರಿಕೆ ಮಾಡಿದರು.
ಗೋಕಾಕ ತೋಟಗಾರಿಕೆ ಹಿರಿಯ ಸಹಾಯಕ ಅಧಿಕಾರಿ ಮಲ್ಲಿಕಾರ್ಜು ಜನಮಟ್ಟಿ ಮಾತನಾಡಿ, ಸಂಸ್ಥೆಗೆ ಇಲಾಖೆಯಿಂದ ಬಂದ ಸಹಾಯಧನದ ಬಗ್ಗೆ ಮಾಹಿತಿ ನೀಡಿದರು. ಇಲಾಖೆಯಿಂದ ದೊರೆಯಬಹುದಾದ ಸೌಲಭ್ಯಗಳ ಮಾಹಿತಿ ನೀಡಿದರು
ಕಾರ್ಯಕ್ರಮದಲ್ಲಿ ಲಕ್ಷ್ಮಣ ಗಣಪ್ಪಗೊಳ, ಪರಸಪ್ಪ ಬಬಲಿ, ಬಿರಪ್ಪ ಶಿಮಕ್ಕನವರ, ಕಲ್ಲಪ್ಪ ಸೊಲ್ಲಾಪುರ, ಮಹಾದೇವ ತುಕ್ಕಾನಟ್ಟಿ, ಸಿದ್ದಪ್ಪ ಹಮ್ಮನವರ, ಲಗಮಣ್ಣ ದಂಡಿನವರ, ಯಲ್ಲಾಲಿಂಗ ಚೌಕಾಶಿ, ಸಂಸ್ಥೆಯ ಉಪಾಧ್ಯಕ್ಷ ಬಸಪ್ಪ ಕಮತಿ, ಮುರಳಿದರ ಬಡಿಗೇರ, ನಿಂಗಪ್ಪ ಇಳಿಗೆರ, ಭೀಮಪ್ಪ ಹಳ್ಳೂರ, ಪರಸಪ್ಪ ಪವಾರ, ಶ್ರೀಪತಿ ಗಣೆಶವಾಡಿ, ಸಿದ್ದಪ್ಪ ಮಾಕನ್ನವರ, ಚಿದಾನಂದ ಖಂಡುಗೊಳ, ರವಿ ಗುಡಕೆತ್ರ, ಹಣಮಂತ ಬಟ್ಟಿ, ಸಿದ್ದಲಿಂಗ ನೆರ್ಲಿ, ದುಂಡಪ್ಪ ರಾಜಾಪೂರೆ, ಚುನಪ್ಪ ಪಾಕನಟ್ಟಿ, ಉದಯಕುಮಾರ ಜಟ್ಟೆಣವರ, ಗೋಪಾಲ ಕಮತಿ, ಮಲ್ಲಿಕಾಸಬ ನಗಾರ್ಜಿ, ಸಂಸ್ಥೆಯ ಸದಸ್ಯರಾದ ರಾಮಪ್ಪ ಉಪ್ಪಾರ, ಅಶೋಕ ಅಂಗಡಿ, ಸುಭಾಸ ಕುರಬೇಟ, ರವಿ ಹೆಬ್ಬಾಳ, ರಾಯಪ್ಪ ಪಂಡ್ರೋಳಿ, ಮೋಹನ ಬಂಡಿವಡ್ಡರ, ಕೆಂಪಣ್ಣ ಮದಿಹಳ್ಳಿ, ಸಿದ್ರಾಮ ಮಾಕನ್ನವರ ಉಪಸ್ಥಿತರಿದ್ದರು.
ರಮೇಶ ಗುಂಡಪ್ಪಗೊಳ ನಿರೂಪಿಸಿದರು, ಶಿವಕುಮಾರ ಗಡಗಲ್ಲಿ ವಾರ್ಷಿಕ ವರದಿ ಮಂಡಿಸಿದರು. ವಿಲಾಸ ಬೈರುಗೋಳ ಸ್ವಾಗತಿಸಿ ವಂದಿಸಿದರು.
