ಮೂಡಲಗಿ: ಪಟ್ಟಣದ ಎಪಿಎಂಸಿ ರಸ್ತೆಯಲ್ಲಿರು ವೆಂಕಟೇಶ ಕ್ಲಿನಿಕ್ ನವೀಕೃತ ಕಟ್ಟಡದ ಉದ್ಘಾಟನಾ ಸಮಾರಂಭದ ನಿಮಿತ್ಯ ಶನಿವಾರ ಆ.9 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮುಂಜಾನೆ 11 ರಿಂದ ಸಂಜೆ 4 ಗಂಟೆವರಿಗೆ ಹಮ್ಮಿಕೊಳ್ಳಲಾಗಿದೆ ಎಂದು ಡಾ.ಎಸ್.ಎಸ್.ದಂಡಪ್ಪನವರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆ.9 ರಂದು ಮುಂಜಾನೆ 10 ಗಂಟೆಗೆ ಶ್ರೀ ಮಹಾಲಕ್ಷ್ಮೀ ಶ್ರೀ ಮಹಾಸರಸ್ವತಿ ಹಾಗೂ ಧನ್ವಂತರಿ ಪೂಜೆಯೊಂದಿಗೆ ನೆರವೇರುವುದು. ದಿವ್ಯ ಸಾನ್ನಿಧ್ಯವನ್ನು ಶ್ರೀ ದತ್ತಾತ್ರೆಯಬೋಧ ಸ್ವಾಮೀಜಿ ವಹಿಸುವರು, ಜಮಖಂಡಿಯ ಚಿಕ್ಕಮಕ್ಕಳ ತಜ್ಞ ಡಾ.ರಂಗನಾಥ ಸೋನವಾಲಕರ ಉದ್ಘಾಟಿಸುವರು. ಅತಿಥಿಗಳಾಗಿ ಪಟ್ಟಣದ ಡಾ|| ಶ್ರೀನಿವಾಸ ಕನಕರಡ್ಡಿ ಮಹಾಲಿಂಗಪೂರದ ಡಾ|| ಉಮೇಶ ಎಸ್. ವನಹಳ್ಳಿ ಭಾಗವಹಿಸುವರು ಎಂದು ಡಾ.ಹರೀಶ ಹರೀಶ ಎಸ್.ದಂಡಪ್ಪನವರ ತಿಳಿಸಿದ್ದಾರೆ.
ಶಿಬಿರದಲ್ಲಿ ಬಿ.ಪಿ, ಸಂಧಿವಾತ, ಅಸ್ತಮಾ, ಅಜಿರ್ಣ, ಮೂಲವ್ಯಾಧಿ, ಲೈಂಗಿಕ ರೋಗ, ಅಲರ್ಜಿ, ನರೋಲಿ, ಕಿಡ್ನಿ ಸ್ಟೋನ್, ಪಿತ್ತದಿಕಾರ, ಚರ್ಮರೋಗ ಮತ್ತು ಚಿಕ್ಕಮಕ್ಕಳ ಹಲ್ಲ ಬರುವಾಗಿನ ತೊಂದರೆ ಹಾಗೂ ಇನ್ನೂ ಅನೇಕ ರೋಗ-ಕಾಯಿಲೆಗಳಿಗೆ ನುರಿತ ವೈದ್ಯರ ತಂಡ ತಪಾಸಿಸಿ ಉಚಿತ ಚಿಕಿತ್ಸಾ ಸಲಹೆ ಸೂಚಿಸುವರು ಕಾರಣ ಸಾರ್ವಜನಿಕರು ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಡಾ.ಎಸ್.ಎಸ್. ದಂಡಪನ್ನವರ ತಿಳಿಸಿದ್ದಾರೆ