ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಲ್ಲರ ಮನೆಗಳಲ್ಲಿ ಶನಿವಾರಆ.9ರಂದು ರಕ್ಷಾ ಬಂಧನ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಬೆಟಗೇರಿ ಗ್ರಾಮದ ಎಲ್ಲರ ಮನೆ-ಮನಗಳಲ್ಲಿ ಸಂಭ್ರಮದ ವಾತಾರಣ ತುಂಬಿ ತುಳುಕುತ್ತಿತ್ತು. ಗಂಡನ ಮನೆಯಿಂದ ಸಹೋದರಿಯರು ತವರು ಮನೆಗೆ ಖುಷಿ-ಖುಷಿಯಾಗಿ ಬಂದು ತಮ್ಮ ಮನೆಗಳಲ್ಲಿರುವ ಅಣ್ಣ-ತಮ್ಮಂದಿರಿಗೆ ಹಣೆಗೆ ವಿಭೂತಿ, ಕುಂಕುಮದ ತಿಲಕವಿಟ್ಟು, ಆರತಿ ಬೆಳಗಿ, ರಾಖಿ ಕಟ್ಟಿ ಈ ಮಹತ್ವಪೂರ್ಣ ರಕ್ಷಾ ಬಂಧನ ಹಬ್ಬ ಆಚರಿಸಿ ಸಂಭ್ರಮಿಸಿದರು.
ಈ ಹಿಂದಿನಿಂದಲೂ ಆಚರಿಸುವ ರಕ್ಷಾ ಬಂಧನವು ಒಡಹುಟ್ಟಿದವರ ನಡುವಿನ ವಾತ್ಸಲ್ಯವನ್ನು ಬಿಂಬಿಸುವ ಹಬ್ಬವೇ ರಾಖಿ ಕಟ್ಟುವ ರಕ್ಷಾ ಬಂಧನ ಹಬ್ಬವಾಗಿದೆ. ಅಲ್ಲದೇ ಸಹೋದರ-ಸಹೋದರಿಯರ ಪ್ರೀತಿ, ವಾತ್ಸಲ್ಯ, ಭಾತೃತ್ವದ ಬಿಂಬಿಸುವ ಮಹತ್ವಪೂರ್ಣ ಹಬ್ಬವಾಗಿದೆ ಎಂದು ಬೆಟಗೇರಿ ಗ್ರಾಮದ ಕುಮಾರಿ ಪಾರ್ವತಿ ರಮೇಶ ಮುಧೋಳ ಹೇಳಿದರು.