ಮೂಡಲಗಿ: ರಾಜ್ಯದಲ್ಲಿರುವ ಕುರಿಗಾರರ ಮೇಲೆ ಆಗುತ್ತಿರುವ ದೌರ್ಜನ್ಯಗಳ ತಡೆಗಾಗಿ ಸಾಂಪ್ರದಾಯಿಕ ಕುರಿಗಾಯಿಗಳ ಹಿತರಕ್ಷಣಾ ಕಾಯ್ದೆಯನ್ನು ರೂಪಿಸಿ ಜಾರಿಗೆ ತರಬೇಕು ಎಂದು ಒತ್ತಾಯಿಸುವ ಸಲುವಾಗಿ ಇದೇ ಆ. 19ರಂದು ಬೆಂಗಳೂರಿನ ಫ್ರೀಡಂ ಪಾರ್ಕದಲ್ಲಿ ರಾಜ್ಯದ ಎಲ್ಲ ಕುರಿಗಾಹಿಗಳ ಬೃಹತ್ ಪ್ರತಿಭಟನೆ
ಮಾಡುವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ತಾಲೂಕಿನ ಕಲ್ಲೋಳಿಯ ಮಾರುತಿ ಮರ್ಡಿ ತಿಳಿಸಿದ್ದಾರೆ.
ರಾಜ್ಯದಲ್ಲಿರುವ ಕುರಿಗಾರ ಮೇಲೆ ನಿರಂತವಾಗಿ ನಡೆಯುತ್ತಿರುವ ದೌರ್ಜನ್ಯಗಳು, ಹಲ್ಲೆ, ಜೀವ ಬೇದರಿಕೆ, ಕೊಲೆ, ಅತ್ಯಾಚಾರ, ಕುರಿ ಕಳ್ಳತನ, ಅರಣ್ಯಾಧಿಕಾರಿಗಳ ಲಂಚದ ಬೇಡಿಕೆ ಅಧಿಕ ಪ್ರಮಾಣದಲ್ಲಿ ನಡೆಯುತ್ತಿವೆ. ಸರ್ಕಾರವು ಎಲ್ಲ ವರ್ಗದ ಮಹಿಳೆಯರ ಪರ, ಮಕ್ಕಳ ಪರ, ಶೋಷಿತ ಸಮುದಾಗಳ ಪರ ಹಾಗೂ ವಿವಿಧ ವೃತ್ತಿಪರರ ಹಿತರಕ್ಷಣೆಗೆ ವಿವಿಧ ವಿಶೇಷ ಕಾಯ್ದೆಗಳನ್ನು ಜಾರಿ ಮಾಡಿ ಅವರ ರಕ್ಷಣೆ ಮಾಡಿದ್ದು ಅದೇ ರೀತಿ ಕುರಿಗಾಯಿಲೆ ಮೇಲೆ ಉಪಜೀವನ ನಡೆಸುತ್ತಿರುವ ಕುರಿಗಾರರ ಮೇಲೆ ಆಗುತ್ತಿರುವ ದೌರ್ಜನ್ಯಗಳು, ಹಲ್ಲೆ, ನಿಂದನೆ, ಪ್ರಾಣಾಪಾಯ, ಕಳ್ಳತನ, ಅತ್ಯಾಚಾರ ಇತ್ಯಾದಿ ದುಷ್ಕøತ್ಯಗಳ ಕಡಿವಾಣಕ್ಕಾಗಿ ಸಾಂಪ್ರದಾಯಿಕ ಕುರಿಗಾಯಿಗಳ ಹಿತರಕ್ಷಣಾ ಕಾಯ್ದೆಯನ್ನು ರೂಪಿಸಿ ಜಾರಿಗೆ ತರಬೇಕೆಂದು ರಾಜ್ಯ ಸರ್ಕಾರಕ್ಕೆ ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ಮಾರುತಿ ಮರ್ಡಿ ಮೌರ್ಯ ಆಗ್ರಹಿಸಿದ್ದಾರೆ.
ಸರ್ಕಾರವು 2024-25 ನೇ ಸಾಲಿನ ಬಜೆಟ್‍ದಲ್ಲಿ ಕುರಿಗಾಯಿಗಳಿಗೆ ಸಂಬಂಧಿಸಿದಂತೆ ದೌರ್ಜನ್ಯ ತಡೆ ಕಾಯ್ದೆ ರೂಪಿಸಲು ಪ್ರಸ್ಥಾಪಿಸಿದ್ದು ಇರುತ್ತದೆ. ಈಮಸೂದೆಯನ್ನು ಅ.11ರಿಂದ ನಡೆಯಲಿರುವ ಅಧಿವೇಶನದಲ್ಲಿ ಕಾಯ್ದೆಯಾಗಿ ಜಾರಿಗೊಳಿಸಬೇಕು ಎಂದು ಮಾರುತಿ ಮೌರ್ಯ ಅವರು ಒತ್ತಾಯಿಸಿದ್ದಾರೆ.
ಆ. 19ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಕುರಿಗಾಹಿಗಳು, ಶೋಷಿತ ಸಮುದಾಯಗಳ ಮುಖಂಡರು, ರೈತರು, ಚಿಂತಕರು ಭಾಗವಹಿಸಬೇಕು ಎಂದು ಮೌರ್ಯ ತಿಳಿಸಿದ್ದಾರೆ.