Breaking News
Home / ತಾಲ್ಲೂಕು / ಬಂಕ್‍ನಲ್ಲಿನ ಡಿಜೈಲ್ ಕಳ್ಳತನ, ಆರೋಪಿ ಬಂಧನ

ಬಂಕ್‍ನಲ್ಲಿನ ಡಿಜೈಲ್ ಕಳ್ಳತನ, ಆರೋಪಿ ಬಂಧನ

Spread the love


ಬಂಕ್‍ನಲ್ಲಿನ ಡಿಜೈಲ್ ಕಳ್ಳತನ, ಆರೋಪಿ ಬಂಧನ
ಮೂಡಲಗಿ:- ಇಲ್ಲಿಯ ಧರ್ಮಟ್ಟಿ ರಸ್ತೆಯಲ್ಲಿನ ಎಸ್.ಎಸ್.ನೇಮಗೌಡರ ಪೆಟ್ರೋಲಿಯಂ ಎಂಬ ಹೆಸರಿನ ಪೆಟ್ರೊಲ್ ಬಂಕ್‍ನಲ್ಲಿ ರವಿವಾರ ರಾತ್ರಿ 12.30 ರ ಸುಮಾರಿಗೆ ಬಂಕ್‍ನಲ್ಲಿಯೇ ಕೆಲಸ ಮಾಡುವ ವಿಠ್ಠಲ ಮಹಾದೇವ ಒರ್ಲಿ ಇತನು ಡಿಜೈಲ್ ಕಳ್ಳತನ ಮಾಡುವ ಸಂದರ್ಭದಲ್ಲಿ ಮಾಲೀಕರ ಕೈಗೆ ಸಿಕ್ಕುಬಿದ್ದ ಘಟನೆ ಮೂಡಲಗಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ತಡವಾಗಿ ದಾಖಲಾಗಿದೆ.
ಮಾಲೀಕರಿಲ್ಲದ ಸಮಯದಲ್ಲಿ ರಾತ್ರಿ ಆರೋಪಿಯು ಬಂಕ್‍ನಲ್ಲಿನ ಡಿಜೈಲ್ ಸ್ಟೋರೇಜ್ ಟ್ಯಾಂಕಿಗೆ ಒಂದು ಎಚ್ ಪಿ ಸಾಮಾಥ್ರ್ಯದ ಇಲೆಕ್ಟ್ರಿಕಲ್ ಮೋಟರ್ ಸಹಾಯದಿಂದ ಹತ್ತು ಸಾವಿರ ಕಿಮ್ಮತ್ತಿನ 150 ಲೀಟರ್ ಡಿಜೈಲ್‍ನ್ನು ಕಳ್ಳತನ ಮಾಡಿ ಟಾಟಾ ಎಸಿ ವಾಹನ ಮೂಲಕ ಸಾಗಿಸುವ ಸಂದರ್ಭದಲ್ಲಿ ಸಿಕ್ಕು ಬಿದ್ದಿದ್ದಾನೆ.
ಬಂಕ್ ಮಾಲೀಕ ಮಲ್ಲಪ್ಪ ಎಸ್ ನೇಮಗೌಡರ ನೀಡಿದ ದೂರಿನನ್ವಯ ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಸಂಶಯ: ಈ ಕಳ್ಳತನ ಪ್ರಕರಣದಲ್ಲಿ ಓರ್ವ ಆರೋಪಿಯ ಹೆಸರನ್ನು ಮಾತ್ರ ದಾಖಲು ಮಾಡಿರುವದು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.ಕಳ್ಳತನ ಮಾಡಿದ ವ್ಯಕ್ತಿಯನ್ನು ಪೊಲೀಸರು ವಿಚಾರಿಸಿದಾಗ ಇನ್ನೂ ಇಬ್ಬರ ಹೆಸರನ್ನು ಆರೋಪಿ ಹೇಳಿದರೂ ಆ ಇಬ್ಬರು ಯುವಕರು ಪರಾರಿಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ನಡೆಸಿದ್ದೇವೆ ಎಂದು ಸ್ವತಃ ಪಿಎಸ್‍ಐ ಮಲ್ಲಿಕಾರ್ಜುನ ಸಿಂಧೂರ ಪತ್ರಕರ್ತರ ಮುಂದೆ ತಿಳಿಸಿದ್ದಾರೆ.
ಮಾಲಿಕರ ದ್ವಂದ ಹೇಳಿಕೆ – ಕಳ್ಳ ವಿಠ್ಠಲ ವರ್ಲಿ ಅನೇಕ ದಿನಗಳಿಂದ ಕಳ್ಳತನ ಮಾಡುತ್ತಿದ್ದು ಸಿಕ್ಕಿರಲಿಲ್ಲ ಈಗ ನಮ್ಮ ಕೈಗೆ ಸಿಕ್ಕಿದ್ದು 4ಬ್ಯಾರಲ್ಲಗಳಲ್ಲಿ 800 ಲೀಟರ ಡಿಜೈಲನ್ನು ಟಾಟಾ ಎಸ್ಸಿ ಗಾಡಿಯಲ್ಲಿ ಸಾಗಿಸುತ್ತಿದ್ದಾಗ ಸಿಕ್ಕುಬಿದ್ದುದ್ದಾನೆ ?. ಎಂದು ರವಿವಾರ ಸಾಯಂಕಾಲ ಬಂಕ್ ಮಾಲಿಕ ಮಲ್ಲಪ್ಪ ನೇಮಗೌಡರ ಸಾರ್ವಜನಿಕರ ಮುಂದೆ ಹೇಳಿದ್ದಾರೆ. ಆದರೆ ಪೋಲಿಸರಿಗೆ ಕೊಟ್ಟ ದೂರಿನಲ್ಲಿ 150 ಲೀ ಮಾತ್ರ ಕಳ್ಳತನವಾಗಿದೆ ಎಂದು ತಿಳಿಸಿದ್ದಾರೆ.ಈ ರೀತಿಯ ದ್ವಂದ ಹೇಳಿಕೆಯಿಂದ ಮಾಲಿಕರ ಮತ್ತು ಪೋಲಿಸರ ಮೇಲೆ ಸಾರ್ವಜನಿಕರು ಸಂಶಯ ವ್ಯಕ್ತಪಡಿಸಿದ್ದಾರೆ

ವರದಿ ಈಶ್ವರ್ ಢವಳೇಶ್ವರ


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ