ಮೂಡಲಗಿ: ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಎಸ್.ಎಸ್.ಆರ್.ಪ್ರೌಢ ಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಕ್ಕಳು ರಾಧಾ ಕೃಷ್ಣನ ವೇಷಭೂಷನ ಗಮನಸೆಳೆಯಿತು.
ಶ್ರೀ ಕೃಷ್ಣ ಮೂರ್ತಿಗೆ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಆರ್.ಸೋನವಾಲಕರ ಅವರು ಪೂಜೆಸಲ್ಲಿಸಿ ಮಾತನಾಡಿ, ಮಕ್ಕಳು ಅರೋಗ್ಯ ಮತ್ತು ಖುಷಿಯಾಗಿ ಇರಲು ಪಠ್ಯದೊಂದಿಗೆ ಪಠ್ಯೆತರ ಚಟುವಟಿಕೆ ಬಹಳ ಮುಖ್ಯ ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕ ಸಂದೀಪ್ ಸೋನವಾಲಕರ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನಿಡುವುದು ಅತೀ ಮುಖ್ಯ ಎಂದರು.
ಶಾಲೆಯ ಮಕ್ಕಳು ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ಯ ರಾಧಾ ಕೃಷ್ಣನ ವೇಷ ಭುಷಣ ಧರಿಸಿ ಸಂಭ್ರಮಿಸಿದರು.
ಎಸ್ ಎಸ್ ಆರ್ ಪ್ರೌಢಶಾಲೆಯ ಉಪ ಪ್ರಾಚಾರ್ಯರು ಬಿ.ಕೆ.ಕಾಡಪ್ಪಗೋಳ, ಸುಭಾಸ ಕುರಣಿ, ಅನಿಲ ಹುಚರಡ್ಡಿ, ದಿಶಾರಾಣಿ ನಂದಗಾವ, ಅಕ್ಷತಾ ಪಾಟೀಲ, ಅರ್ಚನಾ ಮಹೇಂದ್ರಕರ, ಅಮೃತಾ ಪಾಟೀಲ್ ಶಿವಾಜಿ ರಾವನ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ ಪೈಲ್ ನಂ>16ಎಮಡಿಎಲ್‍ಜಿ2> ಮೂಡಲಗಿ: ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ ಎಸ್.ಎಸ್.ಆರ್.ಪ್ರೌಢ ಶಾಲೆ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಕ್ಕಳು ರಾಧಾ ಕೃಷ್ಣನ ವೇಷಭೂಷನ ಗಮನಸೆಳೆದರು. .