ಮೂಡಲಗಿ : ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ನಮ್ಮ ಗ್ರಾಮೀಣ ಭಾಗದ ಜನರಿಗೆ ತಲುಪಿಸಲು ಯುವ ಸಂಘಟನೆಗಳ ಪಾತ್ರ ಪ್ರಮುಖವಾಗಿದೆ ಎಂದು ಭಾರತಿ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಸುಭಾಷ್ ಪಾಟೀಲ್ ಹೇಳಿದರು.
ಅವರು ಮೂಡಲಗಿ ನಗರದ ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ಭಾರತ ಸರ್ಕಾರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಮೇರಾ ಯುವ ಭಾರತ ನನ್ನ ಭಾರತ ಬೆಳಗಾವಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ, ಕರುನಾಡು ಸೈನಿಕ ತರಬೇತಿ ಕೇಂದ್ರ ಮೂಡಲಗಿ ಹಾಗೂ ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂಘ ಹಳ್ಳೂರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರಮುಖ ಯೋಜನೆಗಳ ಕುರಿತು ಕಾರ್ಯಗಾರ ಕಾರ್ಯಕ್ರಮವನ್ನು ಸಸಿಗೆ ನೀರು ಉಣಿಸಿ ಉದ್ಘಾಟಿಸಿ ಮಾತನಾಡುತ್ತಾ ನಮ್ಮ ದೇಶದ ಪ್ರಧಾನ ಮಂತ್ರಿಗಳು ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಅವುಗಳನ್ನು ಯುವ ಕೇಂದ್ರಗಳ ಮೂಲಕ ಜನಜಾಗೃತಿ ಮೂಡಿಸಲು ಯುವಕರಿಗೆ ಕರೆ ನೀಡಿದರು. ಮತ್ತು ನಮ್ಮ ಭಾಗದಲ್ಲಿ ಕಲೆ ಸಂಸ್ಕೃತಿ, ಯುವ ಸಂಘಟನೆ ಮತ್ತು ನಿರಂತರವಾಗಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಸಿದ್ದಣ್ಣ ದುರದುಂಡಿ ಕಾರ್ಯ ನಿಜವಾಗಲೂ ಶ್ಲಾಘನಿಯವಾಗಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಾಗಲಕೋಟ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ಅಜಿತ್ ಮನ್ನಿಕೇರಿ ಮಾತನಾಡಿ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ ಅವುಗಳನ್ನು ಪಡೆದು ಕೊಳಲು ಜನರು ಮುಂದೆ ಬರಬೇಕು. ಜಲ ಜೀವನ ಮಸ್ಸಿನ್ ಯೋಜನೆ ಮನೆ ಮನೆಗೆ ಶುದ್ಧ ಕುಡಿಯುವ ನೀರು ಇಂತಹ ಬಹಳಷ್ಟು ದೊಡ್ಡ ದೊಡ್ಡ ಯೋಜನೆಗಳ ಉದಾಹರಣೆ ನಮ್ಮ ಮುಂದೆ ಇದೆ ಮತ್ತು ಪ್ರತಿಯೊಬ್ಬರು ಮುಖ್ಯವಾಹಿನಿಗೆ ಬರಲು ಶಿಕ್ಷಣ ಅತಿ ಅವಶ್ಯಕವಾಗಿದೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಸಿದ್ದಣ್ಣ ದುರದುಂಡಿ ಮಾತನಾಡಿ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಸ್ವಚ್ಛ ಭಾರತ ಯೋಜನೆಗೆ ಪ್ರತಿಯೊಬ್ಬರು ಕೈ ಜೋಡಿಸಿ ಸುಂದರ ಪರಿಸರ ನಿರ್ಮಾಣ ಮಾಡಿ ಅರೋಗ್ಯವಂತ ಜೀವನ ನಡೆಸಲು ಯುವ ಜನತೆಗೆ ಕರೆ ನೀಡಿದರು. ಹಾಗೂ ನಮ್ಮ ಭಾಗದ ಜನಪ್ರಿಯ ಶಾಸಕರಾದ ಬಾಲಚಂದ್ರ ಅಣ್ಣಾ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ವಿವಿಧ ಸಂಘಟನೆಗಳನ್ನು ಬಲಪಡಿಸಲಾಗುತ್ತಿದೆ ಎಂದರು.
ಮೇರಾ ಯುವ ಭಾರತ ಕೇಂದ್ರದ ಸಿಬ್ಬಂದಿ ಮಲ್ಲಯ್ಯ ಕರಡಿ ಹಾಗೂ ಗ್ರಾಹಕರ ಸೇವಾ ಕೇಂದ್ರದ ವ್ಯವಸ್ಥಾಪಕರಾದ ಸುಭಾಸ್ ಗೊಡ್ಯಾಗೋಳ ಸರ್ಕಾರದ ಯೋಜನೆಗಳ ಕುರಿತು ಉಪನ್ಯಾಸ ಮಾಡಿ ಸಮಗ್ರ ಮಾಹಿತಿ ನೀಡಿದರು. ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರುನಾಡು ಸೈನಿಕ ತರಬೇತಿ ಕೇಂದ್ರದ ಅಧ್ಯಕ್ಷರಾದ ಶ್ರೀಮತಿ ಸವಿತಾ ತುಕ್ಕಣ್ಣವರ ವಹಿಸಿದರು. ಡಿಡಿಪಿಐ ಅಜೀತ್ ಮನ್ನಿಕೇರಿ ಹಾಗೂ ಮಲೇಷಿಯಾದಲ್ಲಿ ಕಂಚಿನ ಪದಕ ಪಡೆದ ಲಕ್ಷ್ಮಿ ರಡರಟ್ಟಿ ಅವರನ್ನು ಸನ್ಮಾನ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅರಭಾವಿ ಮಂಡಲ ಅಧ್ಯಕ್ಷರಾದ ಮಹದೇವ ಶೇಕ್ಕಿ, ಮಾಜಿ ಸೈನಿಕರಾದ ಶಂಕರ ತುಕ್ಕಣ್ಣವರ, ಗೋಪಾಲ ಗಡ್ಡೆಕಾರ, ಕಸ್ತೂರಿ ಹೆಗ್ಗಾನಿ, ದುರ್ಗಪ್ಪ ಮ್ಯಾಗಾಡಿ, ಜ್ಯೋತಿ ಸಣ್ಣಕ್ಕಿ, ಸರಸ್ವತಿ ದುರದುಂಡಿ, ಆದರ್ಶ ಪೂಜೇರಿ ಮುತ್ತವ್ವ ಕೌಜಲಗಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಜಿಲ್ಲಾ ಯುವ ಪ್ರಶಸ್ತಿ ವಿಜೇತರಾದ ಮಾಯಕ್ಕಾ ದುರದುಂಡಿ ಸ್ವಾಗತಿದ್ದರು. ಲತಾ ಬುದ್ನಿ ನಿರೂಪಿಸಿ ವಂದಿಸಿದರು.