ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಪಾಂಡುರಂಗ ವಿಠ್ಠಲ ದೇವರ ದೇವಸ್ಥಾನದಲ್ಲಿ ಕೃಷ್ಣ ಜನ್ನಾಷ್ಟಮಿಯನ್ನು ಶನಿವಾರ ಆ.16 ರಂದು ಸಂಭ್ರಮದಿಂದ ಆಚರಿಸಲಾಯಿತು.
ಬೆಟಗೇರಿ ಗ್ರಾಮದ ಶ್ರೀ ಪಾಂಡುರಂಗ ವಿಠ್ಠಲ ದೇವರ ಗದ್ಗುಗೆ ಮಹಾಪೂಜೆ, ನೈವೇದ್ಯ ಸಮರ್ಪಿಸಿದ ಬಳಿಕ ಸ್ಥಳೀಯ ಪುಟ್ಟ ಮಕ್ಕಳು ಕೃಷ್ಣ-ರಾಧೆಯರ ವೇಷ ಧರಿಸಿ ಎಲ್ಲರ ಗಮನ ಸೆಳೆದರು. ತೊಟ್ಟಿಲಲ್ಲಿ ಶ್ರೀಕೃಷ್ಣನ ಭಾವಚಿತ್ರದ ಮೂರ್ತಿ ಇಟ್ಟು ತೊಟ್ಟಿಲು ತೂಗುವ ಕಾರ್ಯಕ್ರಮ ಸಡಗರದಿಂದ ನಡೆಯಿತು.
ಕೊಳಲು ಹಿಡಿದು ತಲೆಯ ಮೇಲೆ ಕಿರೀಟ, ನವಿಲು ಗರಿ, ಹಣೆ ಮೇಲೆ ತಿಲಕ ಕೊರಳಲ್ಲಿ ಮುತ್ತಿನ ಹಾರ ಸೊಂಟಕ್ಕೆ ಚಿಕ್ಕ ಧೋತಿ…ಹೀಗೆ ವಿವಿಧ ಅಂಲಕಾರಿಕ ವಸ್ತುಗಳಿಂದ ಸಿಂಗಾರಗೊಂಡ ಮಕ್ಕಳು ಪಾಲ್ಗೊಂಡುಕೃಷ್ಣ ಜನ್ನಾಷ್ಟಮಿ ಆಚರಣೆ ಕಾರ್ಯಕ್ರಮಕ್ಕೆ ಮೆರಗು ತಂದರು.
ಈ ವೇಳೆ ವಿಠಲ ಬಡಿಗೇರ, ಸದಾಶಿವ ದಂಡಿನ, ವೀರಭದ್ರಪ್ಪ ದಂಡಿನ, ಬಸವರಾಜ ಮುಂಡೇಶಿ, ನಿಂಗವ್ವ ಪಾರ್ವತೇರ, ನಿಂಬೆವ್ವ ಮುಂಡೇಶಿ, ಯಲ್ಲವ್ವ ಬಳಿಗಾರ, ತಿಪ್ಪವ್ವ ಕರೆನ್ನವರ, ಮಹಿಳೆಯರು, ಪುರುಷರು, ಪುಟ್ಟ ಮಕ್ಕಳು ಮತ್ತು ಬಾಲಕರು, ಬಾಲಕಿಯರು, ಶ್ರೀ ಪಾಂಡುರಂಗ ವಿಠ್ಠಲ ದೇವರ ದೇವಸ್ಥಾನ ಕಮಿಟಿ ಪದಾಧಿಕಾರಿಗಳು, ಸದಸ್ಯರು, ಮತ್ತೀತರರು ಇದ್ದರು.