ಮೂಡಲಗಿ : ಮಹಿಳೆಯರು ಸಮಾಜದಲ್ಲಿವಿರುವ ಅವಕಾಶಗಳನ್ನು ಸದುಪಯೋಗಪಡೆದುಕೊಳ್ಳಬೇಕು ಮಹಿಳೆಯರ ಸಾಮಾಜಿಕ ಸ್ಥಾನಮಾನಗಳು ಹೆಚ್ಚಾಗಿದ್ದು ಅವುಗಳ ಅರಿವು ಹೊಂದಿ ಸಾಮಾಜಿಕ ನ್ಯಾಯವನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿ ಮಹಿಳಾ ಸಮಾಜ ಗುರ್ತಿಸಿಕೊಳ್ಳುವುದು ಅವಶ್ಯಕವಿದ್ದು ಇಂದು ಭಾರತೀಯ ಸಂವಿಧಾನದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ವಿಶೇಷ ಆಧ್ಯತೆಗಳನ್ನು ನೀಡಿದ್ದು ಅವುಗಳ ಸದುಪಯೋಗ ಇಂದಿನ ಯುವಸಮುದಾಯದ ಮಹಿಳೆಯರು ಪಡೆದುಕೊಳ್ಳುವುದು ಅವಶ್ಯಕವಿದೆ ಎಂದು ಗುರ್ಲಾಪೂರದ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ ಕರಗಣ್ಣಿ ಹೇಳಿದರು.
ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಸಮಾಜಕಾರ್ಯ ಪದವಿ ಮಹಾವಿದ್ಯಾಲಯದಲ್ಲಿ ಆಯ್.ಕ್ಯೂ.ಎ.ಸಿ. & ಎನ್.ಎಸ್.ಎಸ್. ಘಟಕಗಳಡಿಯಲ್ಲಿ ಹಮ್ಮಿಕೊಂಡಿರುವ ಮಹಿಳಾ ಸಬಲೀಕರಣ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಮಹಿಳಾ ದೌರ್ಜನ್ಯಗಳು, ಮಹಿಳೆಯರ ಮೇಲೆ ಅತ್ಯಾಚಾರ, ಮಹಿಳೆಯರ ಕೊಲೆ, ಕಳ್ಳ ಸಾಗಾಣಿಕೆ ಹಾಗೂ ಸಾಮಾಜಿಕ ಮಾಧ್ಯಮಗಳಿಂದ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಿದ್ದು ಸಾಮಾಜಿಕವಾಗಿ ಕಾನೂನಾತ್ಮಕವಾಗಿ ಸಾಕಷ್ಟು ನ್ಯಾಯ ಮಹಿಳೆಯರಿಗೆ ಸಿಗವಂತಾಗಬೇಕಾಗಿದೆ ಆ ದಿಕ್ಕಿನಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಮಹಿಳೆಯರ ರಕ್ಷಣಿಗೆ ಎಚ್ಚರಿಕೆ ವಹಿಸುವುದು ಅಗತ್ಯವಿದೆ ಎಂದರು.
ಕಾಲೇಜು ಉಪನ್ಯಾಸಕಿ ಅಶ್ವಿನಿ ಗುರುವ ಮಾತನಾಡಿ ಮಹಿಳೆ ಸಮಾಜದ ಕಣ್ಣು ಸಮಾಜ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ ಹಿರಿದಾದ್ದು ಮಹಿಳೆ ಸರ್ವಕಲೆಗಳ ಮಾತೃ ಆಗಿದ್ದು ತಾಯಿಯಾಗಿ ಸಹೋದರಳಾಗಿ ಹೆಂಡತಿಯಾಗಿ ಕುಂಟುಂಬ ಮತ್ತು ಸಮಾಜದ ಕಣ್ಮಣಿಯಾಗಿ ಗುರ್ತಿಸಿಕೊಂಡಿದ್ದಾಳೆ ಎಲ್ಲ ರಂಗದಲ್ಲಿಯೋ ಮಹಿಳೆ ಸ್ವಾಬಿಮಾನಿಯಾಗಿದ್ದು ಅವಳಿಗೆ ರಕ್ಷಣೆ ಮತ್ತು ಸ್ವಾತಂತ್ರ್ಯ ಒದಗಿಸಿಕೊಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಮಹಿಳಾ ಸಬಲೀಕರಣದ ಘಟಕಾಧಿಕಾರಿ ಸಂಜೀವ ಮಂಟೂರ ಮಾತನಾಡಿ ಮಹಿಳೆಯರಿಂದಲೇ ಜನ್ಮ ಪಡೆದ ನಾವು ನಮ್ಮ ತಾಯಿಯನ್ನು ದೇವರಂತೆ ಕಾಣುವುದು ಅಗತ್ಯವಿದೆ ಎಂದರು.
ಕಾಲೇಜು ಪ್ರಾಚಾರ್ಯ ಸತೀಶ ಗೋಟೂರೆ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ ಮಹಿಳೆಯರು ಇಂದು ಎಲ್ಲ ರಂಗದಲ್ಲಿಯೂ ಗುರ್ತಿಸಿಕೊಳ್ಳುತ್ತಿದ್ದು ಸಣ್ಣ ಉದ್ಯೋಗ ಹಿಡಿದ್ದು ಇಂದು ದೇಶದ ರಾಷ್ಟ್ರಪತಿಯಾಗಿ ಗುರ್ತಿಸಿ ಕೊಂಡಿದ್ದಾಳೆ ಸಾಹಿತ್ಯಗಾರಳಾಗಿ ವಿಜ್ಞಾನಿಯಾಗಿ ವೈದ್ಯಳಾಗಿ ತಂತ್ರಜ್ಞಾಳಾಗಿ ಬೆಳೆದು ದೇಶದ ಸಾರ್ವಕಾಲಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು ಮಹಿಳೆಯರನ್ನು ಗೌರವಿಸುವ ಸಂಸ್ಕøತಿ ನಮ್ಮದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಾಜು ಪತ್ತಾರ, ಸುನೀಲ ಸತ್ತಿ, ಮಲ್ಲಪ್ಪ ಪಾಟೀಲ, ಹಾಗೂ ಇನ್ನುಳಿದ ಉಪನ್ಯಾಸಕರು ಹಾಜರಿದ್ದರು ವಿದ್ಯಾರ್ಥಿನಿ ಲಕ್ಷ್ಮೀ ಗೊರಗುದ್ದಿ ನಿರೂಪಿಸಿದರು ಅಕ್ಷತಾ ಬಡಿಗೇರ ಸ್ವಾಗತಿಸಿದರು ಅಶ್ವರ್ಯ ಉಪ್ಪಾರ ವಂದಿಸಿದರು.