ಮುಡಲಗಿ : ಪ್ರೋ .ಜಿ ವೆಂಕಟಸುಬ್ಬಯ್ಯನವರು ಕನ್ನಡ ನಾಡಿಗೆ ಅದರಲ್ಲೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಯುವ ಲೇಖಕ ಶಿವಲಿಂಗ ದಾನನ್ನವರ ಹೇಳಿದರು.
ಅವರು ತಾಲೂಕಿನ ಖಾನಟ್ಟಿ ಗ್ರಾಮದ ಶ್ರೀ ಶಿವಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯಲಯದಲ್ಲಿ ಸಿರಿ ಸಂಗಮ ಕನ್ನಡ ಸಾಹಿತ್ಯ ಬಳಗದಿಂದ ನಡೆದ ಪ್ರೋ .ಜಿ ವೆಂಕಟಸುಬ್ಬಯ್ಯನವರ ಜನ್ಮ ದಿನಾಚರಣೆ ಸ್ಮರಣಾರ್ಥ ಕನ್ನಡಕ್ಕಾಗಿ ದುಡಿದು ಮಡಿದವರ ಕಾರ್ಯಕ್ರದಲ್ಲಿ ಮಾತನಾಡಿ,
ಪ್ರೋ. .ಜಿ ವೆಂಕಟಸುಬ್ಬಯ್ಯನವರು ಭಾμÁ ತಜ್ಞರಾಗಿ, ನಿಘಂಟು ತಜ್ಞರಾಗಿ, ಮಕ್ಕಳಿಗೆ ಉತ್ತಮವಾದ ಕಲಿಕೆಯ ಸ್ವರೂಪವನ್ನು ತಿಳಿಸಿದರಲ್ಲು ತಮ್ಮದೆ ಆದ ಕೌಶಲ್ಯವನ್ನು ಬಳಸಿ ಮಕ್ಕಳಿಗೆ ನೆಚ್ಚಿನ ಶಿಕ್ಷಕರಾಗಿ ಕನ್ನಡ ನಾಡಿಗೆ ಮೆಷ್ಟ್ರು ಅನಿಸಿಕೊಂಡವರು, ಸಾಮಾನ್ಯ ಜನರಿಗೂ ಕನ್ನಡದ ಆಳ ಅಗಲ ನಮ್ಮ ಭಾμÉ ಅದೆಷ್ಟು ಶ್ರೇಷ್ಠ ಎಂದು ಗ್ರಾಮೀಣ ಭಾಗದ ಜನರಿಗೂ ತಿಳಿಯುವಂತೆ ಇಗೋ ಕನ್ನಡ ಪತ್ರಿಕೆಯಲ್ಲಿ ಅಂಕಣ ಬರೆದು ತಲುಪಿಸಿದವರು, ಭಾμÉಗಾಗಿ ಇಡಿ ತಮ್ಮ ಬಾಳನ್ನೆ ಮುಡಿಪಾಗಿಟ್ಟು ಶತಮಾನ ತಲುಪಿ ನಡೆದಾಡುವ ವಿಶ್ವಕೋಶ ಆದವರು, ಕನ್ನಡ ಎಂದರೆ ಅದೊಂದು ಪೂಜ್ಯನೀಯ ಭಾμÉ ಅದನ್ನು ಭಕ್ತಿಯಿಂದ ಪೂಜೀಸಿ ಪ್ರೀತಿಸಿದವರಿಗೆ ಅನ್ನ, ನೀರು ಬದುಕು ನೀಡುತ್ತದೆ.ಭಾμÉಯನ್ನು ಭಾವದಿಂದ ಪ್ರೀತಿಯಿಂದ ಮಾತಾಡಿ ಭಾμÉಯೆ ಬದುಕು ಎಂದು ಕನ್ನಡಿಗರಿಗೆ ಕಿವಿಮಾತು ಹೇಳಿದ ಪೆÇ್ರೀ ವೆಂಕಟಸುಬ್ಬಯ್ಯನವರಂತ ಹಿರಿಯರನ್ನು ನೆನಪಿಸುವ ಸೌಭಾಗ್ಯ ನಮ್ಮದಾಗಿದೆ ಎಂದು ಹೇಳಿದರು.
ಸಾಮಾಜ ಸೇವಕ ಬಸಲಿಂಗ ನಿಂಗನೂರ ಮಾತನಾಡಿ, ಇಂದಿನ ಯುವ ಪೀಳಿಗೆಯು ಪೆÇ್ರೀ ವೆಂಕಟಸುಬ್ಬಯ್ಯನವರಂತ ನಿಘಂಟು ತಜ್ಞರನ್ನು ನಾಡು ಕಟ್ಟಿದವರನ್ನು ಸ್ಮರಿಸುವ ಅನಿವಾರ್ಯತೆ ಇದೆ ನಮಗಾಗಿ ದುಡಿದವರನ್ನು ನಾವೆಂದಿಗೂ ಮರೆಯದೆ ಸ್ಮರಿಸುವಂತಂಹ ಕೆಲಸವಾಗಬೇಕಿದೆ ಎಂದರು. ಶಿಕ್ಷಕರಾದ ಮಾರುತಿ ಲಂಗೂಟಿ, ಹನಮಂತ ಶಿವಾಪೂರ ಹಾಲಪ್ಪ ಬ್ಯಾಕೂಡ, ಶಂಕರ್ ಸಣಸಟ್ಟಿ ಉಪಸ್ಥಿತರಿದ್ದರು. ಕು.ಮಂಜುಳಾ ವಾಗೋಡೆ ನಿರೂಪಿಸಿದರು.