ಮೂಡಲಗಿ: ರಕ್ತದಾನವು ಶ್ರೇಷ್ಠವಾಗಿದ್ದು, ರಕ್ತದಾನ ಮಾಡುವ ಮೂಲಕ ಜೀವ ಉಳಿಸಿದ ಸಾರ್ಥಕತೆ ಪ್ರಾಪ್ತವಾಗುತ್ತದೆ” ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮೂಡಲಗಿ ಕೇಂದ್ರದ ರೇಖಾ ಅಕ್ಕನವರು ಹೇಳಿದರು.
ಇಲ್ಲಿಯ ಪ್ರಜಾಪಿತ ಈಶ್ವರಿ ವಿಶ್ವವಿದ್ಯಾಲಯದ ಮೂಡಲಗಿ ಕೇಂದ್ರದಲ್ಲಿ ರಾಜಯೋಗಿನಿ ದಾದಿ ಪ್ರಕಾಶಮಣಿಜೀ ಅವರ ಸ್ಮರಣಾರ್ಥ ವಿಶ್ವ ಬಂದುತ್ವ ವಿಕಾಸ ಅಂಗವಾಗಿ ಮಹಾಲಿಂಗಪೂರದ ಡಾ. ವಿ.ಪಿ. ಕಣಕರಡ್ಡಿ ಮೆಮೊರಿಯಲ್ ಬ್ಲಡ್ ಸೆಂಟರ್ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ್ದ ಐಚ್ಚಿಕ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜಯೋಗಿನಿ ದಾದಾ ಪ್ರಕಾಶಮಣಿಜೀ ಅವರು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಬೆಳೆಸುವಲ್ಲಿ ಅಪೂರ್ವ ಸೇವೆಗೈದಿದ್ದು ಅವರು ಸರ್ವಕಾಲಿಕ ಸ್ಮರಣೀಯರು ಎಂದರು.
ಮುಖ್ಯ ಅತಿಥಿಯಾಗಿ ವೈ.ಬಿ. ಕುಲಿಗೋಡ, ಬಾಲಶೇಖರ ಬಂದಿ, ಡಾ. ಮಹೇಶ ಕಂಕಣವಾಡಿ, ಸುಮಿತ್ರಾ ಸೋನವಾಲಕರ ಮಾತನಾಡಿದರು.
ಅತಿಥಿಯಾಗಿ ವೇದಿಕೆಯಲ್ಲಿ ಸವಿತಾ ಅಕ್ಕನವರು, ಡಾ. ಶ್ರದ್ಧಾ ನೇಹಾಲ ಬಂದಿ ಉಪಸ್ಥಿತರಿದ್ದರು.
ಸದಾಶಿವ ಹಂದಿಗುಂದ, ಶಿವಬಸು ಗುರವ ಗೋಪಾಲ ಗಂಗರಡ್ಡಿ, ಶಿವಾನಂದ ಮುಗಳಖೋಡ,
ಮಹಾದೇವಿ ತಾಂವಶಿ, ಮಂಗಳಾ ಬಡ್ಡಿ, ಸರೋಜಿನಿ ಹೊಸೂರ, ರಜನಿ ಬಂದಿ, ಕವಿತಾ ಸೋನವಾಲಕರ, ಬೌರವ್ವ ನೇಮಗೌಡರ, ವಿಜಯಲಕ್ಷೀ ಪಾಟೀಲ, ಶ್ರೀದೇವಿ ಸೋನವಾಲಕರ
ಮುಗಿಯಿತು.
ಮೂಡಲಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿನ ದಾದಿ ಪ್ರಕಾಶಮಣಿಜೀ ಸ್ಮರಣೆಯಲ್ಲಿ ಭಾನುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ರೇಖಾ ಅಕ್ಕನವರು ಉದ್ಘಾಟಿಸಿದರು.