ಬೆಟಗೇರಿ:ಮನುಷ್ಯನ ಮನಸಿನ ತಾಪವನ್ನು ಕಡಿಮೆ ಶಕ್ತಿ ಗುರುವಿನ ಮಾತಿನಿಂದ ಸಾಧ್ಯ. ಮಾನವ ಸದ್ಗುರುವಿನ ಮಾತನ್ನು ಸದಾ ಪಾಲಿಸಿ ತನ್ನ ಬದುಕಿನಲ್ಲಿ ನಡೆದರೆ ಒಳ್ಳೆಯದಾಗುತ್ತದೆ ಎಂದು ಗದಗ ಮಹಿಳಾ ಆಧ್ಯಾತ್ಮ ವಿದ್ಯಾಶ್ರಮದ ಡಾ. ನೀಲಮ್ಮಾತಾಯಿ(ಅಸುಂಡಿ) ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವರ ದೇವಸ್ಥಾನದಲ್ಲಿ 41ನೇ ಸತ್ಸಂಗ ಸಮ್ಮೇಳನದ ಪ್ರಯುಕ್ತ ಸ್ಥಳೀಯ ಶ್ರೀ ಗಜಾನನ ವೇದಿಕೆ ಮೇಲೆ ಆ.28ರಂದು ನಡೆದ ಸಮಾರೂಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಾನವನಿಗೆ ಬಂದಿರುವ ಎಲ್ಲ ದು:ಖ, ಮನಸ್ಸತಾಪವನ್ನು ಗುರುವಿನ ಮಾತಿನ ಶಕ್ತಿಯಿಂದ ದೂರವಾಗುತ್ತದೆ. ಎಲ್ಲಾ ಧಾರ್ಮಿಕ ಕಾರ್ಯಗಳಿಗೆ ತನು, ಮನ, ಧನದ ರೂಪದಲ್ಲಿ ಬೆಟಗೇರಿ ಜನರು ಸಲ್ಲಿಸುತ್ತಿರುವ ಸೇವಾ ಸತ್ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಮಲ್ಲಾಪೂರÀ(ಕೆ.ಎನ್)ದ ಚಿದಾನಂದ ಸ್ವಾಮಿಜಿ, ಸುಣಧೋಳಿಯ ಅಭಿನವ ಶಿವಾನಂದ ಸ್ವಾಮಿಜಿ, ಗದಗದ ಶರಣೆ ಮೈತ್ರಾ ತಾಯಿಯವÀರಿಂದ ಕಡಿದು ಹೋಹಿತು ಮನದ ತಾಪವು ಒಡೆಯ ಗುರುವಿನ ವಾಕ್ಯದಿಂದಲಿ ಎಂಬ ವಿಷಯದ ಮೇಲೆ ಪ್ರವಚನ ನಡೆದು, ಇಲ್ಲಿಯ ಈಶ್ವರ ಭಜನಾ ಮಂಡಳಿ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ, ದಾನಿಗಳಿಗೆ ಸತ್ಕಾರ, ಆಶೀರ್ವಾದ, ಶ್ರೀಗಳಿಂದ ಆಶೀರ್ವಚನ, ಮಹಾಮಂಗಲ, ಮಹಾಪ್ರಸಾದ ಕಾರ್ಯಕ್ರಮ ಜರುಗಿ ಸತ್ಸಂಗ ಸಮ್ಮೇಳನ ಸಮಾರೊಪಗೊಂಡಿತು.
ಮದರಖಂಡಿ ಸಿದ್ಧಾರೂಢ ಮಠಪತಿ ತಬಲಾ ಸಾಥ್‍ದೊಂದಿಗೆ ಶೇಗುಣಿಸಿ ಮಲ್ಲನಗೌಡ ಶಿವಲಿಂಗಪ್ಪಗೋಳ ಅವರಿಂದ ಸಂಗೀತ ಸೇವೆ, ಗ್ರಾಪಂ ಮಾಜಿ ಅಧ್ಯಕ್ಷ ಬಸವಂತ ಕೋಣಿ ಸಹೋದರರಿಂದ ಮಹಾಪ್ರಸಾದ ಸೇವೆ ಜರುಗಿತು.
ಶರಣರಾದ ಚಿಂತಪ್ಪ ಸಿದ್ನಾಳ. ಮಹಾದೇವಪ್ಪ ಹಡಪದ, ನಿಂಗಪ್ಪ ಕಂಬಿ, ಈಶ್ವರ ಬಳಿಗಾರ, ಬಸವರಾಜ ನೀಲಣ್ಣವರ, ಮಹಾಂತೇಶ ಸಿದ್ನಾಳ, ಈರಪ್ಪ ದೇಯಣ್ಣವರ, ಬಸಪ್ಪ ತೋಟಗಿ, ಸ್ಥಳೀಯ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸಂತ-ಶರಣರು, ಹರ, ಗುರು, ಚರಮೂರ್ತಿಗಳು, ಗಣ್ಯರು, ಆಧ್ಯಾತ್ಮ ಪ್ರವಚನ ಶ್ರವಣಾಸಕ್ತರು, ಸ್ಥಳೀಯ ಈಶ್ವರ ಭಜನಾ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಮತ್ತೀತರರು ಇದ್ದರು. ಶರಣರಾದ ಬಸವರಾಜ ಪಣದಿ ಕಾರ್ಯಕ್ರಮ ನಿರೂಪಿಸಿ ಕೊನೆಗೆ ವಂದಿಸಿದರು.