Breaking News
Home / ಬೆಳಗಾವಿ / ಆ.31ರಂದು ಬೆಟಗೇರಿ ಗ್ರಾಮದಲ್ಲಿ ಮುಕ್ತ ರಂಗೋಲಿ ಸ್ಪರ್ಧೆ

ಆ.31ರಂದು ಬೆಟಗೇರಿ ಗ್ರಾಮದಲ್ಲಿ ಮುಕ್ತ ರಂಗೋಲಿ ಸ್ಪರ್ಧೆ

Spread the love

ಬೆಟಗೇರಿ ಗ್ರಾಮದ ವಿನಾಯಕ ಮಿತ್ರ ಮಂಡಳಿಯವರಿಂದ  ಸಕಲರಿಗೂ ಅನ್ನಪ್ರಸಾದ ಕಾರ್ಯಕ್ರಮ ಜರುಗಿತು.

 

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ವಿನಾಯಕ ಮಿತ್ರ ಮಂಡಳಿಯವರು ಬಡಿಗೇರ ಓಣಿಯಲ್ಲಿ(ಗ್ರಾಮದೇವತೆ ದ್ಯಾಮವ್ವ ದೇವಿ ಗುಡಿ) ಹತ್ತಿರ ಪ್ರತಿಷ್ಠಾಪಿಸಿದ ಗಣಪತಿ ಮೂರ್ತಿ ಪ್ರಯುಕ್ತ ಆ.31ರಂದು ಮುಂಜಾನೆ 10 ಗಂಟೆಗೆ ಮುಕ್ತ ರಂಗೋಲಿ ಸ್ಪರ್ಧೆ ಹಮ್ಮಿಕೊಂಡಿದ್ದಾರೆ
ಈ ಮುಕ್ತ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕೆಲವು ಜನ ಪ್ರಾಯೋಜಕರು ಆಕರ್ಷಕ ನಗದು ಬಹುಮಾನಗಳನ್ನು ನೀಡಲಿದ್ದಾರೆ. ಆ.27ರಿಂದ ಸತತ 5 ದಿನಗಳ ಕಾಲ ಮುಂಜಾನೆ-ಸಂಜೆ ಸಮಯ ಪ್ರತಿಷ್ಠಾಪಿಸಿದ ಗಣೇಶನೆಗೆ ಪೂಜೆ-ಪುನಸ್ಕಾರ ಭಕ್ತಿಯಿಂದ ನಡೆಸಲಾಗಿದೆ. ಆ.30ರಂದು ಸಾಯಂಕಾಲ 6ಗಂಟೆಗೆ ಸಕಲರಿಗೂ ಅನ್ನಪ್ರಸಾದ ಕಾರ್ಯಕ್ರಮ ಜರುಗಿತು.
ಆ.31ರಂದು ರಾತ್ರಿ 10ಗಂಟೆಗೆ ಗಣೇಶ ಮೂರ್ತಿ ವಿಸರ್ಜನೆ ಸಡಗರದಿಂದ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಮೊಬೈಲ್ ನಂಬರ- 8088446736, 9538095703,7676632527,7411162085 ಸಂರ್ಪಕಿಸಬೇಕು ಎಂದು ಇಲ್ಲಿಯ ಶ್ರೀ ವಿನಾಯಕ ಮಿತ್ರ ಮಂಡಳಿ ಪ್ರಕಟನೆಗೆ ತಿಳಿಸಿದೆ.
ಅನ್ನಪ್ರಸಾದ ಕಾರ್ಯಕ್ರಮದ ವೇಳೆ ಇಲ್ಲಿಯ ಮಂಜುನಾಥ ಪತ್ತಾರ, ಶಿವು ನಾಯ್ಕರ, ಗುಳಪ್ಪ ಪಣದಿ, ವಿಠ್ಠಲ ಬಡಿಗೇರ, ಪ್ರಕಾಶ ಬಡಿಗೇರ, ರಾಘು ಬೆಟಗೇರಿ, ಸಿದ್ದಾರೂಢ ನಾಂವಿ, ಬಸು ಬಡಿಗೇರ, ಸಂತೋಷ ಬಡಿಗೇರ, ಶಿವಾನಂದ ಪತ್ತಾರ, ದುಂಡಪ್ಪ ನೀಲಣ್ಣವರ, ಪ್ರವೀಣ ಪತ್ತಾರ, ಇಲ್ಲಿಯ ಶ್ರೀ ವಿನಾಯಕ ಮಿತ್ರ ಮಂಡಳಿ ಪದಾಧಿಕಾರಿಗಳು, ಯುವಕರು, ಸ್ಥಳೀಯರು ಇದ್ದರು.

 


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ